Advertisement

Vikram Gowda ಎನ್‌ಕೌಂಟರ್‌; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್

02:35 PM Nov 20, 2024 | Team Udayavani |

ಬೆಂಗಳೂರು: ಹೆಬ್ರಿಯ ಕಬ್ಬಿನಾಲೆಯಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಯ ಕುರಿತಾಗಿನ ತನಿಖೆಯ ಕರೆಗಳನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರಸ್ಕರಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ. ಪರಮೇಶ್ವರ್, ವಿಕ್ರಮ್ ಗೌಡ ವಿರುದ್ಧ ಕೊಲೆ ಆರೋಪ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳಿವೆ.
ಆದ್ದರಿಂದ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳದೆ, ಅವರುಎನ್‌ಕೌಂಟರ್‌ ಮಾಡಿದರು. ಇಲಾಖೆಯಿಂದ ಲಿಖಿತವಾಗಿ ನನಗೆ ಬಂದ ನಂತರ ಹೆಚ್ಚಿನ ವಿವರಗಳನ್ನು ನಾನು ಹಂಚಿಕೊಳ್ಳಬಹುದು, ”ಎಂದರು.

ವಿಕ್ರಮ್ ಗೌಡ ಮಾರಣಾಂತಿಕ ಆಯುಧ, ಸ್ವಯಂಚಾಲಿತ ಮೆಷಿನ್ ಗನ್ ತರಹದ ಶಸ್ತ್ರವನ್ನು ಹೊಂದಿದ್ದ ಎಎನ್‌ಎಫ್ ಸಿಬಂದಿ ಆತನ ಮೇಲೆ ಗುಂಡು ಹಾರಿಸದಿದ್ದರೆ, ಅವನು ಅವರ ಮೇಲೆ ಗುಂಡು ಹಾರಿಸುತ್ತಿದ್ದ. ಹಾಗಾಗಿ ಅವರು ಮೊದಲೇ ಗುಂಡು ಹಾರಿಸಿದ್ದಾರೆ. ಹೀಗಾಗಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ’ ಎಂದು ಪರಮೇಶ್ವರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next