Advertisement

ಎ.1 ಮುಂಬೈನಲ್ಲಿ ವಿಜೇಂದರ್‌ ಬಾಕ್ಸಿಂಗ್‌: ಜುಲ್ಪಿಕರ್‌ ಎದುರಾಳಿ

03:45 AM Feb 18, 2017 | |

ಮುಂಬೈ: ಸತತ 8 ಪಂದ್ಯಗಳಲ್ಲಿ ಜಯಸಾಧಿಸಿ ಡಬ್ಲೂéಬಿಎ ಏಷ್ಯಾ ಪೆಸಿಫಿಕ್‌ ಪ್ರಶಸ್ತಿ ಉಳಿಸಿಕೊಂಡ ಭಾರತದ ತಾರಾ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಏ.1ರಂದು ಮುಂಬೈನಲ್ಲಿ ಮತ್ತೂಂದು ಮುಖಾಮುಖೀಗೆ ಸಿದ್ಧವಾಗಿದ್ದಾರೆ. 

Advertisement

ಈ ಪಂದ್ಯದಲ್ಲಿ ಅವರು ಚೀನಾದ ಡಬ್ಲೂéಬಿಒ ಒರಿಯಂಟಲ್‌ ಸೂಪರ್‌ ಮಿಡಲ್‌ವೇಟ್‌ ಚಾಂಪಿಯನ್‌ ಜುಲ್ಪಿಕರ್‌ ಮಾಯ್‌ಮಾಯ್‌ ತಿಯಾಲ್‌ ವಿರುದ್ಧ ಸೆಣಸಲಿದ್ದಾರೆ. ಸತತ 2 ಬಾರಿ ಏಷ್ಯಾ ಪೆಸಿಫಿಕ್‌ ಪ್ರಶಸ್ತಿ ಗೆದ್ದ ವಿಶ್ವಾಸದಲ್ಲಿರುವ ವಿಜೇಂದರ್‌ಗೆ ಇದು ತಮ್ಮದೇ ನೆಲದಲ್ಲಿ ಮತ್ತೂಂದು ಪ್ರಮುಖ ಸವಾಲಾಗಿದೆ.

ಮೂಲಗಳ ಪ್ರಕಾರ ಇದೇ ಪಂದ್ಯದ ವೇಳೆ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಅಖೀಲ್‌ ಕುಮಾರ್‌ ಮತ್ತು ಮಾಜಿ ಏಷ್ಯನ್‌ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಜಿತೇಂದ್ರ ಕುಮಾರ್‌ ಕೂಡ ಸ್ಪರ್ಧಿಸಲಿದ್ದಾರೆ. ವಿಜೇಂದರ್‌ ವೃತ್ತಿಪರ ಬಾಕ್ಸಿಂಗ್‌ಗೆ ಇಳಿದ ಮೇಲೆ ಸತತ 8 ಪಂದ್ಯಗಳಲ್ಲಿ ಜಯಸಾಧಿಸಿದ್ದಾರೆ. ಯಾವ ಪಂದ್ಯದಲ್ಲಿಯೂ ಸೋಲುಂಡಿಲ್ಲ. 31 ವರ್ಷದ ವಿಜೇಂದರ್‌ ಚೀನಿ ಬಾಕ್ಸರ್‌ ಸವಾಲು ಎದುರಿಸಲು ಬ್ರಿಟನ್‌ ತರಬೇತುದಾರ ಲೀ ಬಿಯರ್ಡ್‌ ಮಾರ್ಗದರ್ಶನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next