Advertisement

ಸಿದ್ದೇಶ್ವರ ಜಾತ್ರೆಯಲ್ಲಿ ಹೋಮ -ಹವನ

11:59 AM Jan 17, 2020 | Naveen |

ವಿಜಯಪುರ: ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಜಾತ್ರಾ ಶತಮಾನೋತ್ಸವ ನಿಮಿತ್ತ ಸಂಕ್ರಮಣ ದಿನವಾದ ಬುಧವಾರ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಹೋಮ-ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಕ್ರಮಣ ಜಾತ್ರೆ ಜರುಗಿತು.

Advertisement

ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಹೋಮ ಕಾರ್ಯಕ್ರಮದ ಬಳಿಕಲ ಎಳ್ಳು-ಬೆಲ್ಲ ಮಿಶ್ರಿತ ಕುಸರೆಳ್ಳು ವಿನಿಮಯ ಮಾಡಿಕೊಳ್ಳುವ ಮೂಲಕ ಭಕ್ತರು ಸಿದ್ಧೇಶ್ವರ ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡರು.

ಶುದ್ಧೋದಕದಿಂದ ಶುಚಿಗೊಳಿಸಿದ ಹೋಮ ಕಟ್ಟೆಯಲ್ಲಿ ಧಾರ್ಮಿಕ ವಿ ಧಿ ವಿಧಾನಗಳಿಂದ ಸಿಂಗಾರಗೊಂಡಿದ್ದ ಹೋಮ ಕುಂಡದಲ್ಲಿ ಆರ್ಘ್ಯ, ಪಾದ್ಯ ಆಚಮನಗಳೊಂದಿಗೆ ಅಭಿಷೇಕ ಸಲ್ಲಿಸಲಾಯಿತು. ಚಂದನದ ಕಟ್ಟಿಗೆ ಎಳ್ಳುಧಾನ್ಯಗಳಿಂದ ಕೂಡಿದ ಕಟ್ಟೆಯ ಮೇಲೆ ಹಾವೇರಿ ಜಿಲ್ಲೆಯ ಪಕೀರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ ಹವನ ಪೂಜೆ ಕಾರ್ಯಕ್ರಮ ನೆರವೇರಿತು.

ಈರಯ್ಯ ಶಾಸ್ತ್ರಿಗಳು, ಬಸಯ್ಯ ಶಾಸ್ತ್ರಿಗಳು, ಸಿದ್ಧರಾಮಯ್ಯ ಶಾಸ್ತ್ರಿಗಳು, ಮುರಗಯ್ಯ ಗಚ್ಚಿನಮಠ, ಬಸವರಾಜ ಶಾಸ್ತ್ರೀಗಳು ಹಾಜರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರಮನ್‌ ಬಸಯ್ಯ ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ.ಸಜ್ಜನ, ಜಾತ್ರಾ ಸಮಿತಿಯ ಎಸ್‌. ಎಚ್‌. ನಾಡಗೌಡ, ಸದಾಶಿವ ಗುಡ್ಡೋಡಗಿ, ಗುರು ಗಚ್ಚಿನಮಠ, ಮಹಾದೇವ ಹತ್ತಿಕಾಳ, ವಿಜಯಕುಮಾರ ಡೋಣಿ, ಶಾಂತಪ್ಪ ಜತ್ತಿ, ಬಾಗಪ್ಪ ಕನ್ನೋಳ್ಳಿ, ಶ್ರೀಮಂತ ಜಂಬಗಿ, ಈರಣ್ಣ ಪಾಟೀಲ, ರಮೇಶ ಹಳ್ಳದ, ಶಿವಾನಂದ ನೀಲಾ, ಬಸವರಾಜ ಬೆಲ್ಲದ, ಬಸವರಾಜ ಕಂದಗಲ್ಲ, ಸು ಧೀರ ಚಿಂಚಲಿ, ಚಂದು ಹುಂಡೇಕಾರ, ಮಹಾದೇವಪ್ಪ ಬೆಳ್ಳುಂಡಿ, ಹನುಮಂತ ಹೊನ್ನಳ್ಳಿ, ಬಿಸಲಪ್ಪ ಜತ್ತಿ, ಎಂ.ಎಸ್‌. ಕರಡಿ, ಬಸು ಬಿರಾದಾರ, ಮುರಗೇಪ್ಪ ಕಾಪ್ಸೆ, ಚನ್ನಪ್ಪ ಡಮಾಗಾರ, ಸಾಯಿಬಣ್ಣ ಭೋವಿ, ಬಸವರಾಜ ಗಣಿ, ಬಸವರಾಜ ಸುಗೂರ, ಎನ್‌. ಎಂ. ಗೋಲಾಯಿ, ಮಲಕಪ್ಪ ಗಾಣಿಗೇರ, ಸುನೀಲ ಉಕಮನಾಳ, ಮಹಾದೇವ ಜಂಗಮಶೆಟ್ಟಿ, ಕಿರಣ ಪಾಟೀಲ, ಪ್ರೀತಮ ರಜಪೂತ, ವಿಕ್ರಮ ಗಾಯಕವಾಡ, ಮುತ್ತಪ್ಪ ಹಳ್ಳಿ, ದತ್ತಾ ಗೋಲಾಂಡೆ, ರಮೇಶ ಸಾವಳಗಿ, ರಾಜು ಮಗಿಮಠ, ಎಚ್‌.ಟಿ. ಅಶ್ವತ, ಎಸ್‌.ಎಸ್‌. ಗೊಳಸಂಗಿಮಠ, ವಿಶ್ವನಾಥ ಗಣಿ, ಈರಣ್ಣ ಹುಂಡೇಕಾರ ಇದ್ದರು.

ಜಾತ್ರೆ ನಿಮಿತ್ತ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯನ ಕ್ಷೇತ್ರದ ಯುವ ಪ್ರತಿಭೆಗಳಾದ ನೀತು ಸುಬ್ರಮಣ್ಯಂ ಹಾಗೂ ಅರ್ಜುನ ಇಟಗಿ ಸಂಗೀತ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದರು. ರಾತ್ರಿ ತೊರವಿ ಗ್ರಾಮದ ಜಾನುವಾರ ಜಾತ್ರೆಯಲ್ಲಿ ಬಯಲಾಟ ಕಾರ್ಯಕ್ರಮ ನೆರವೇರಿದವು. ನಂತರ ಸಿದ್ಧೇಶ್ವರ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಪ್ರತಿಭೆ ಪ್ರದರ್ಶಿಸಿದ ಕಲಾವಿದರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next