Advertisement

ವಿಜಯಪುರ ಜಿಲ್ಲೆಯಲ್ಲಿ ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಬಾಡಿಗೆ ವಾಹನಗಳಿಗೆ ಭಾರಿ ಬೇಡಿಕೆ

09:04 AM Dec 12, 2020 | sudhir |

ವಿಜಯಪುರ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಅಹೋರಾತ್ರಿ ಮುಷ್ಕರ ಮುಂದು ವರೆಸಿದ್ದಾರೆ. ಎರಡನೇ ದಿನವಾದ ಶನಿವಾರ ನಿಲ್ದಾಣದಲ್ಲೇ ಉಪಹಾರ – ಊಟ ತಯಾರಿಸಿ ಹೋರಾಟ ಇನ್ನೂ ಬಲಿಷ್ಠವಾಗಿಸಲು ಮುಂದಾಗಿದ್ದಾರೆ. ಖಾಸಗಿ ವಾಹನಗಳು ವಸೂಲಿಗೆ ಇಳಿದಿದ್ದರೆ, ಬಾಡಿಗೆ ಕಾರಿಗಳಿಗೆ ಭಾರಿ ಬೇಡಿಕೆ ಬಂದಿದೆ.

Advertisement

ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನಗರ ಸಾರಿಗೆ ಸೇವೆಯೂ ಬಂದ್ ಆಗಿದ್ದು, ಬಸ್ ಗಳು ರಸ್ತೆಗೆ ಇಳಿದಿಲ್ಲ. ಪರಿಣಾಮ ಆಟೋ ಚಾಲಕರು ಜನರಿಂದ ಮನಬಂದಂತೆ ಹಣ ವಸೂಲಿಗೆ ಮುಂದಾಗಿದ್ದಾರೆ. ದೂರದ ಊರುಗಳಿಗೆ ತುರ್ತು ಪ್ರಯಾಣ ಮಾಡಬೇಕಾದವರು ಸಾರಿಗೆ ಸಂಸ್ಥೆ ಬಸ್ ಸಂಚಾರ ಇಲ್ಲದ ಕಾರಣ ಬಾಡಿಗೆ ಕಾರುಗಳ ಮೂಲಕ ಪ್ರಯಾಣ ಮುಂದುವರೆಸಿದ್ದಾರೆ. ಆರ್ಥಿಕ ಶಕ್ತಿ ಇಲ್ಲದವರು ಪರದಾಡುವಂತಾಗಿದೆ.

ಇದನ್ನೂ ಓದಿ:ಫೇಸ್‌ಬುಕ್‌ ಮೇಸೆಂಜರ್‌ ಬಳಕೆಯಲ್ಲಿ ಶೇ. 50 ಹೆಚ್ಚಳ: ಲೈವ್‌ ವೀಡಿಯೋ ಶೇ. 60ರಷ್ಟು ಏರಿಕೆ

ಬಸವನಬಾಗೇವಾಡಿ, ಸಿಂದಗಿ,ಇಂಡಿ, ಚಡಚಣ, ಬಬಲೇಶ್ವರ, ಕೊಲ್ಹಾರ, ಮುದ್ದೇಬಿಹಾಳ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮುಷ್ಕರ ಜೋರಾಗಿದೆ. ಪರಿಣಾಮ ಪ್ರಯಾಣಿಕರಿಲ್ಲದ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.

ಮುದ್ದೇಬಿಹಾಳ ಸೇರಿದಂತೆ ಇತರೆ ಬಸ್ ನಿಲ್ದಾಣಗಳಲ್ಲಿ ಬಸ್ ಸೇವೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ.

Advertisement

ಶನಿವಾರ ಚಾಲಕರು, ನಿರ್ವಾಹಕರು ಮಾತ್ರವಲ್ಲ ತಾಂತ್ರಿಕ ಸಿಬ್ಬಂದಿಯೂ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಅಲ್ಲದೇ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟ ಬಿರುಸುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next