Advertisement

ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಿರಿ

10:46 AM Jun 16, 2019 | Team Udayavani |

ವಿಜಯಪುರ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಹ ರೈತರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಲಾಭ ಜಿಲ್ಲೆಯ ಪ್ರತಿ ಅರ್ಹ ರೈತರಿಗೆ ದೊರೆಯಬೇಕು. ರೈತರ ಹೆಸರು ನೋಂದಣಿ ಕಾರ್ಯವನ್ನು ತಕ್ಷಣ ಆರಂಭಿಬೇಕು. ಆಯಾ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು, ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿಗಳ ಮೂಲಕ ನೋಂದಣಿ ಚುರುಕುಗೊಳಿಸುವಂತೆ ತಾಕೀತು ಮಾಡಿದರು.

ಈಗಾಗಲೇ ಈ ಯೋಜನೆಡಿ ನೋಂದಣಿಯಾಗಿರುವ ರೈತರ ಹೊರತಾಗಿ ಬಾಕಿ ಇರುವ ಅರ್ಹ ರೈತರು ನಿಗದಿತ ಘೋಷಣಾ ಪತ್ರದೊಂದಿಗೆ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಹಾಗೂ ಆಯಾ ಗ್ರಾಮದಲ್ಲಿರುವ ಜಮೀಣಿನ ಪಹಣಿ ಪತ್ರಗಳ ಝರಾಕ್ಸ್‌ ಪ್ರತಿಗಳೊಂದಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿ ಜವಾಬ್ದಾರಿ ಹೊಂದಿರುವ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣ ಹೆಸರು ನೋಂದಣಿ ಕಾರ್ಯ ಆರಂಭಿಸಿ ವಾರ್ಷಿಕವಾಗಿ 3 ಕಂತುಗಳಲ್ಲಿ 6 ಸಾವಿರ ರೂ. ನೇರವಾಗಿ ಫ‌ಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿ ಯೋಜನೆಯಡಿ ಬೃಹತ್‌ ಪ್ರಮಾಣದ ಅನುದಾನ ಲಭ್ಯವಾಗುವ ಹಿನ್ನೆಲೆಯಲ್ಲಿ ಪ್ರತಿ ಅರ್ಹ ರೈತರು ಸದುಪಯೋಗ ಪಡೆಯುವಂತೆ ನೋಡಿಕೊಳ್ಳಬೇಕು. ಕೃಷಿ ಜಂಟಿ ನಿರ್ದೇಶಕರು ಈ ದಿಸೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜಾಗೃತಿಯಿಂದ ಕಾರ್ಯ ನಿರ್ವಹಿಸಿ ಅರ್ಹ ರೈತ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕಿಸುವಂತೆ ತಿಳಿಸಿದ ಅವರು, ನಿರ್ಲಕ್ಷ್ಯ ತೋರುವುದನ್ನು ಯಾವುದೇ ಸಂದರ್ಭದಲ್ಲಿ ಸಹಿಸಲಾಗುವುದಿಲ್ಲ ಎಂದು ತಿಳಿಸಿದರು.

ಈ ಯೋಜನೆಯ ಲಾಭ ಪಡೆಯುವ ಅರ್ಹ ರೈತರು ಯಾವುದೇ ಸಂವಿಧಾನಿಕ ಹುದ್ದೆ ಹೊಂದಿರಬಾರದು. ರಾಜ್ಯದ ಸಚಿವ ಅಥವಾ ಲೋಕಸಭಾ, ರಾಜ್ಯಸಭಾ, ರಾಜ್ಯ ಶಾಸಕಾಂಗ ಸಭೆಯ ಹಾಗೂ ಪರಿಷತ್‌ ಸದಸ್ಯರಾಗಿರಬಾರದು ಅಥವಾ ಪಾಲಿಕೆ ಮೇಯರ್‌, ಜಿಪಂ ಅಧ್ಯಕ್ಷರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

Advertisement

ಇದಲ್ಲದೇ ಪತಿ-ಪತ್ನಿ ರಾಜ್ಯ-ಕೇಂದ್ರ ಸರ್ಕಾರ ಸಚಿವಾಲಯದ ಕಚೇರಿಗಳು-ಇಲಾಖೆಗಳು, ಅವುಗಳ ಕ್ಷೇತ್ರ ಮಟ್ಟದ ಫಲಕಗಳು, ಕೇಂದ್ರ ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳ ಮತ್ತು ಸರ್ಕಾರದ ಅಧೀನದಲ್ಲಿ ಬರುವ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳ ಹಾಲಿ-ನಿವೃತ್ತ ಗ್ರೂಪ್‌ ಸಿ ಮತ್ತು ಮೇಲ್ಪಟ್ಟ ನೌಕರರಾಗಿರಬಾರದು. ಯಾವುದೇ ಸ್ಥಳೀಯ ಸಂಸ್ಥೆಯ ಖಾಯಂ ನೌಕರ ಆಗಿರಬಾರದು. ಪತಿ-ಪತ್ನಿ ವಯೋನಿವೃತ್ತಿ ಹೊಂದಿ ಮಾಸಿಕ 10 ಸಾವಿರ ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರಬಾರದು. ಕಳೆದ ಮೌಲ್ಯ ಮಾಪನಾ ವರ್ಷದಲ್ಲಿ ಆದಾಯ ತೆರಿಗೆ ಸಂದಾಯ ಮಾಡಿರುವುದಿಲ,್ಲ ಫಲಾನುಭವಿಯು ಪತಿ-ಪತ್ನಿ ವೈದ್ಯರು, ಅಭಿಯಂತರರು, ವಕೀಲರು, ಚಾರ್ಟಡ್‌ ಅಕೌಂಟಂಟ್‌ಗಳು ಹಾಗೂ ವಾಸ್ತು ಶಿಲ್ಪ ಮುಂತಾದ ವೃತ್ತಿಪರ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕ್ಷೇತ್ರಗಳ ವೃತ್ತಿ ಪರ ಸಂಘ ಸಂಸ್ಥೆಗಳೊಂದಿಗೆ ನೋಂದಣಿ ಮಾಡಿಸಿಲ್ಲ ಎಂದು ರೈತರು ಸ್ವಯಂ ಘೋಷಣಾ ಪತ್ರದಲ್ಲಿ ಸಲ್ಲಿಸಬೇಕು ಎಂಬುದನ್ನು ಫ‌ಲಾನುಭವಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ್‌ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇÍಕ ಶಿವಕುಮಾರ, ತೋಟಗಾರಿಕಾ ಉಪ ನಿರ್ದೇಶಕ ಸಂತೋಷ ಇನಾಮದರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next