ವಿಜಯಪುರ : ತೀವ್ರ ಕುತೂಹಲ ಮೂಡಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ 35 ವಾರ್ಡ್ ಗಳಿಗೆ ಮೀಸಲಾತಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದ್ದು, ಆಕ್ಷೇಪಣೆಗಳಿಗೆ 7 ದಿನಗಳ ಕಾಲಾವಾಕಾಶ ನೀಡಲಾಗಿದೆ.
ಪಾಲಿಕೆಯ ವಾರ್ಡ್ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ತಾವು ಪ್ರತಿನಿಧಿಸಬೇಕಿರುವ ವಾರ್ಡ್ಗಳಲ್ಲಿ ಕಾರ್ಯಪ್ರವೃತ್ತರಾಗುವಂತಾಗಿದೆ.
ಮೀಸಲಾತಿ ವಿವರ: ವಾರ್ಡ್ ನಂ.1 : ಹಿಂದುಳಿದ ವರ್ಗ `ಅ’ ಮಹಿಳೆ, ವಾರ್ಡ್ ನಂ.2 : ಪರಿಶಿಷ್ಟ ಜಾತಿ, ವಾರ್ಡ್ ನಂ.3 ; ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.4 : ಸಾಮಾನ್ಯ, ವಾರ್ಡ್ ನಂ.5 : ಹಿಂದುಳಿದ ವರ್ಗ ಬ ಮಹಿಳೆ, ವಾರ್ಡ್ ನಂ.6 : ಸಾಮಾನ್ಯ, ವಾರ್ಡ್ ನಂ.7 : ಹಿಂದುಳಿದ ವರ್ಗ ಅ, ವಾರ್ಡ್ ನಂ.8 ; ಸಾಮಾನ್ಯ ಮಹಿಳೆ, ವಾರ್ಡ್ ನಂ.9 : ಹಿಂದುಳಿದ ವರ್ಗ ಬ, ವಾರ್ಡ್ ನಂ.10 : ಸಾಮಾನ್ಯ, ವಾರ್ಡ್ ನಂ.11 : ಪರಿಶಿಷ್ಟ ಜಾತಿ, ವಾರ್ಡ್ ನಂ.12 : ಸಾಮಾನ್ಯ, ವಾರ್ಡ್ ನಂ.13 : ಹಿಂದುಳಿದ ವರ್ಗ ಅ, ವಾರ್ಡ್ ನಂ.14 : ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.15 ; ಸಾಮಾನ್ಯ ಮಹಿಳೆ, ವಾರ್ಡ್ ನಂ.16 : ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ ನಂ.17 : ಸಾಮಾನ್ಯ, ವಾರ್ಡ್ ನಂ.18 : ಪರಿಶಿಷ್ಟ ಪಂಗಡ, ವಾರ್ಡ್ ನಂ.19 ; ಸಾಮಾನ್ಯ, ವಾರ್ಡ್ ನಂ.20 : ಹಿಂದುಳಿದ ವರ್ಗ ಅ, ವಾರ್ಡ್ ನಂ.21 ; ಸಾಮಾನ್ಯ ಮಹಿಳೆ, ವಾರ್ಡ್ ನಂ.22 : ಹಿಂದುಳಿದದ ವರ್ಗ ಅ, ವಾರ್ಡ್ ನಂ.23 : ಸಾಮಾನ್ಯ, ವಾರ್ಡ್ ನಂ.24 : ಸಾಮಾನ್ಯ, ವಾರ್ಡ್ ನಂ.25 : ಹಿಂದುಳಿದ ವರ್ಗ ಅ, ವಾರ್ಡ್ ನಂ.26 : ಸಾಮಾನ್ಯ ಮಹಿಳೆ, ವಾರ್ಡ್ ನಂ.27 : ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ ನಂ.28 : ಸಾಮಾನ್ಯ, ವಾರ್ಡ್ ನಂ.29 ; ಪರಿಶಿಷ್ಟ ಜಾತಿ, ವಾರ್ಡ್ ನಂ.30 : ಹಿಂದುಳಿದ ವರ್ಗ ಅ, ವಾರ್ಡ್ ನಂ.31 : ಸಾಮಾನ್ಯ ಮಹಿಳೆ, ವಾರ್ಡ್ ನಂ.32 ; ಸಾಮಾನ್ಯ ಮಹಿಳೆ, ವಾರ್ಡ್ ನಂ.33 ; ಸಾಮಾನ್ಯ ಮಹಿಳೆ, ವಾರ್ಡ್ ನಂ.34 : ಸಾಮಾನ್ಯ ಮಹಿಳೆ, ವಾರ್ಡ್ ನಂ.35 : ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.