Advertisement

Vijayapura; ಯಾರೋ ಮಾಡಿದ ತಪ್ಪಿಗೆ ನಾಸೀರ್ ರನ್ನು ಗುರಿ ಮಾಡುವುದು ತರವಲ್ಲ: ಎಂ.ಬಿ ಪಾಟೀಲ್

03:45 PM Mar 09, 2024 | keerthan |

ವಿಜಯಪುರ: ಪಾಕ್ ಪರ ಘೋಷಣೆ ಕೂಗಿರುವುದು ಘೋರ ಅಪರಾಧ. ಘೋಷಣೆ ಕೂಗಿದವರನ್ನು ರಾಜ್ಯ-ದೇಶದಿಂದಲೇ ಗಡಿಪಾರು ಮಾಡಬೇಕು. ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಆಗಲೇ ಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದರು.

Advertisement

ಶನಿವಾರ ಬಬಲೇಶ್ವರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆದರೆ ರಾಜ್ಯಸಭೆಯ ನೂತನ ಸದಸ್ಯ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಬಿಜೆಪಿ ನಾಯಕರ ನಡೆ ಸರಿಯಲ್ಲ. ಕೂಡಿದ ಕಾರ್ಯಕರ್ತರಲ್ಲಿ ಯಾರೋ ಒಬ್ಬ ಮಾಡಿದ ತಪ್ಪಿಗೆ ನಾಸೀರ್ ಅವರನ್ನು ಗುರಿ ಮಾಡುವುದು ತರವಲ್ಲ ಎಂದರು.

ನನ್ನ ಹಿಂದೆಯೂ ಸಾವಿರಾರು ಜನರು ಇದ್ದಾಗ ಯಾರೋ ಒಬ್ಬ ಘೋಷಣೆ ಕೂಗಿದರೆ ನಾನು ಹೊಣೆಯಾಗಲು ಸಾಧ್ಯವೇ ಎಂದು ಎಂದು ಪ್ರಶ್ನಿಸಿದ ಸಚಿವರು, ಈ ವಿಷಯದಲ್ಲಿ ಯತ್ನಾಳ ಅವರು ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ನೀಡದಂತೆ ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ ಎಂದಿರುವುದು ಸರಿಯಲ್ಲ ಎಂದರು.

ಯತ್ನಾಳ್ ಅವರು ಯಾವ ಯಾವಾಗ ಏನು ಮಾತನಾಡಿದ್ದಾರೆ. ಬೆಳಿಗ್ಗೆ, ಸಾಯಂಕಾಲ, ಸಂಜೆ ಏನು ಮಾತನಾಡಿದ್ದಾರೆ ಎಂದು ಹೇಳಲು ಪೂರ್ತಿ ಒಂದು ಸೆಲ್ ಇಡಬೇಕಾಗುತ್ತದೆ ಎಂದು ಕುಟುಕಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನು ಭವಿಷ್ಯ ಹೇಳುತ್ತಾರಾ? 135 ಸ್ಥಾನಗಳಿದೆ, ಸರ್ಕಾರ ಉರುಳಿಸಲು 60 ಶಾಸಕರುಬೇಕು, ಇವರಿಗೆ ಕೇವಲ 5-6 ಶಾಸಕರುಗಳನ್ನು ತರಲು ಹೇಳಿ ಎಂದು ತಿರುಗೇಟು ನೀಡಿದರು.

Advertisement

ರಾಜ್ಯದಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಎಂ.ಇ.ಎಸ್. ಕೇಂದ್ರಕ್ಕೆ ಪತ್ರ ಬರೆದಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿನ ರಾಜಕೀಯ ಗಿಮಿಕ್ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ದುರ್ಬಲವಾಗಿದ್ದು, ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರೇ ಕರ್ನಾಟಕ ಸೇರುತ್ತೇವೆ ಎಂದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಎಂ.ಇ.ಎಸ್. ಬಗ್ಗೆ ಹೆಚ್ಚು ತಲೆ ಕೆಡಿಸಕೊಳ್ಳಬೇಕಿಲ್ಲ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next