Advertisement

Vijayapura; ಹಾರಿಕೆ ಉತ್ತರ ಕೊಡುವ ಯತ್ನಾಳ ಯುನಿವರ್ಸಲ್ ಗುರು: ಸಂತೋಷ ಲಾಡ್

12:43 PM Apr 21, 2024 | Team Udayavani |

ವಿಜಯಪುರ: ಯತ್ನಾಳ್ ಸಾಹೇಬರು ಯನಿವರ್ಸಲ್ ಗುರು, ದಿಂಗಾಲೇಶ್ವರ ಶ್ರೀಗಳಿಗೆ ಸ್ಪರ್ಧೆ ಮಾಡಲು ಯಾರು ರೊಕ್ಕ ಕೊಟ್ಟರು, ಯಾವ ನೋಟು ಕೊಟ್ಟರೆಂದು ಯತ್ನಾಳರನ್ನೇ ಕೇಳಿ. ಅವರು ಕೊಡುವ ಹಾರಿಕೆ ಉತ್ತರಕ್ಕೆ ನಮ್ಮನ್ನು ಪ್ರಶ್ನಿಸುತ್ತೀರಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದರು.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಯತ್ನಾಳ ಅವರ ಐನ್‍ಸ್ಟಿನ್ ಥಿಯರಿ ಬಗ್ಗೆ ನನಗೆ ಗೊತ್ತಿಲ್ಲ. ಪ್ರಚಾರದ ಮೈಲೇಜ್‍ಗಾಗಿ ಯತ್ನಾಳ ಏನೇನೋ ಮಾತನಾಡುತ್ತಾರೆ. ನೇಹಾ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ, ತನಿಖೆ ನಡೆದಿದೆ. ದೇಶದಲ್ಲಿ 13 ಲಕ್ಷ ಮಹಿಳೆಯರ ಕಾಣೆಯಾಗಿದ್ದರೂ ಯತ್ನಾಳ ಏಕೆ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.

ವಿವಾದಾತ್ಮಕ ವಿಷಯಗಳಿಗೆ ಬಿಜೆಪಿ ಆದ್ಯತೆ, ಹತ್ಯೆ ಘಟನೆಯಲ್ಲಿ ರಾಜಕೀಯ ಸರಿಯಲ್ಲ. ದೇಶದಲ್ಲಿ ಲಕ್ಷಾಂತರ ಮಹಿಳೆಯರು ಕಾಣೆಯಾಗುತ್ತಿರುವುದು ಮಾತ್ರವಲ್ಲ, ಗುಜರಾತಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಯತ್ನಾಳ ಅಲ್ಲಿಗೆ ಹೋಗಿ ಮಾತನಾಡಲಿ ಎಂದು ಕುಟುಕಿದರು.

ಎಂ.ಎಂ.ಕಲಬುರಗಿ, ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಿಲುವೇನಿತ್ತು ಎಂದು ಪ್ರಶ್ನಿಸಿದ ಸಚಿವ ಲಾಡ್, ಮೋದಿ ಸರ್ಕಾರದ ಅವಧಿಯಲ್ಲಿ ಐಪಿಎಲ್ ನಲ್ಲಿ ಎಷ್ಟು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುನ್ನು ಹೇಳಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next