Advertisement
ಹುಬ್ಬಳ್ಳಿ, ಶಿವಮೊಗ್ಗದ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿರುವ ಕಲಾವಿದರ ತರಕಾರಿ, ಹಣ್ಣು-ಹೂ, ಸಿರಿಧಾನ್ಯಗಳಲ್ಲಿ ವಿವಿಧ ಮೂರ್ತಿಗಳನ್ನು ರೂಪಿಸಿದ್ದು, ಒಂದಕ್ಕಿಂತ ಮತ್ತೂಂದು ಆಕರ್ಷಕವಾಗಿದ್ದು, ಭೇಟಿ ನೀಡುವ ಸಾರ್ವಜನಿಕರ ಗಮನ ಸೆಳೆಯುತ್ತಿವೆ.
Related Articles
ಸಂಗೀತ ವಾದನಗಳಾದ ಪಿಯಾನೋ, ತಬಲಾ, ವೀಣೆಗಳಂಥ ಸಂಗೀತ ಸಾಧನಗಳು ಕಲಾವಿನ ಕೈಚಳಕ ಕೌಶಲ್ಯಕ್ಕೆ ಮೂಕವಿಸ್ಮಿತರನ್ನಾಗಿ ಮಾಡುತ್ತಿವೆ.
Advertisement
ಲಿಂಬೆ, ಬಾರೆ, ಒಣದ್ರಾಕ್ಷಿಗಳಲ್ಲಿ ಅರಳಿನಿಂತ ಗಣೇಶ ದೂರದಿಂದಲೇ ಪ್ರೇಕ್ಷಕ-ವೀಕ್ಷಕರನ್ನು ತನ್ನತ್ತ ಸೆಳೆತುತ್ತಿದ್ದಾನೆ. ಶಿವಮೊಗ್ಗದ ಗಿರಿಶ, ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಗಿರೀಶ, ಇಸ್ಮಾಯಿಲ್ ತಲವಾಯಿ ಇವರ ಕಲಾಕೌಶಲ್ಯ ಇಲ್ಲಿ ಮೇಳೈಸಿದೆ. ಮತ್ತೂಂದೆಡೆ ವಿಶೇಷವಾಗಿ ಜಿಲ್ಲೆ ಅದ್ಭುತ ಶಕ್ತಿಪ್ರಭೆಗಳಾದ ವಚನ ಪಿತಾಮಹ ಫ.ಗು. ಹಳಕಟ್ಟಿ, ಸಂಗನಬಸವ ಸ್ವಾಮಿಗಳು, ಸಿದ್ದೇಶ್ವರ ಮಹಾಸ್ವಾಮಿಗಳು, ಅಮೀರಬಾಯಿ ಕರ್ನಾಟಕಿ, ಕರ್ನಾಟಕ ಏಕೀಕರಣ ರೂವಾರಿ ಆಲೂರು ವೆಂಕಟರಾಯರು, ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಾರೆ ರಾಜೇಶ್ವರಿ ಗಾಯಕವಾಡ ಅವಂಥ ಸ್ಥಾನಿಕ ಪ್ರತಿಭೆಗಳ ಚಿತ್ರಣಗಳೂ ಗಮನ ಸೆಳೆಯುತ್ತಿವೆ.
ಮೂಲಂಗಿ, ಗಜ್ಜರಿ, ಬದನೆ, ಸವತೆಕಾಯಿಗಳಂಥ ತರಕಾರಿಗಳಲ್ಲಿ ನವಿಲು, ಕೋಳಿ, ಹಂಸ, ಬಾತುಕೋಳಿ, ಜಿಂಕೆ, ಅಳಿಲು, ಮೀನು, ಮೊಸಳೆ, ಮೀನು ಗಳಂಥ ವಿವಿಧ ಪ್ರಾಣಿ ಪಕ್ಷಿಗಳ ಜೊತೆಗೆ ಹಡಗು ಕೂಡ ಗಮನ ಸೆಳೆಯುತ್ತಿವೆ. ಮತ್ತೂಂದೆಡೆ ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಕೈಚಳಕದಲ್ಲಿ ಸಜ್ಜೆ, ನವಣೆ, ಹಾರಕ, ಬರಗು, ರಾಗಿ, ಸಾಂವೆ, ಜೋಳ, ರಾಗಿ, ನವಣೆಗಳಂಥ ಸಿರಿಧಾನ್ಯಗಳಿಂದ ರೂಪಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಜನಾಕರ್ಷಕವಾಗಿದೆ.
ಮತ್ತೂಂದು ಬದಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೇಕಾದ ಮಾಹಿತಿ ನೀಡುವ ವಿವಿಧ ವಸ್ತುಗಳ ಮಾರಾಟ-ಪ್ರದರ್ಶನವೂ ಇದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ವಿವಿಧ ಬಗೆಯ ಹಣ್ಣುಗಳ ಸಸಿಗಳು, ಹೂ-ತರಕಾರಿ ಅಲಂಕಾರಿಕ, ಔಷ ಸಸಗಳು ಮಾಹಿತಿ ನೀಡುವ ಮಳಿಗೆಗಳು ಒಂದೇ ಸೂರಿನಲ್ಲಿ ಲಭ್ಯವಾಗಿರುವುದನ್ನು ಕಂಡು ಉದ್ಘಾಟನೆಗೆ ಬಂದಿದ್ದ ಸ್ವಯಂ ಸಿದ್ಧೇಶ್ವರ ಶ್ರೀಗಳೆ ಸಂತಸ ವ್ಯಕ್ತಪಡಿಸಿರುವುದು ಫಲ-ಪುಷ್ಮ ಪ್ರದರ್ಶನ ಮೇಳ ಆಯೋಜಿಸಿರುವ ಜಿ.ಪಂ., ತೋಟಗಾರಿಕೆ ಹಾಗೂ ಹಾಪ್‌ಕಾಮ್ಸ್ ಅಧಿಕಾರಿ-ಸಿಬ್ಬಂದಿಗೆ ಸಂರ್ತಪ್ತಿ ನೀಡಿದೆ.