Advertisement

Vijayapura; ಆ್ಯಂಬ್ಯುಲೆನ್ಸ್ ಅಪಘಾತ: ತಾಯಿ- ಗರ್ಭದಲ್ಲಿದ್ದ ಮಗುವೂ ಸಾವು

04:25 PM Dec 09, 2023 | keerthan |

ವಿಜಯಪುರ: ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್ ಅಪಘಾತವಾಗಿ ಗರ್ಭದಲ್ಲೇ ಮಗು ಸಹಿತ ಗರ್ಭಿಣಿ ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ಜರುಗಿದೆ.

Advertisement

ತಾಳಿಕೋಟಿ ತಾಲೂಕಿನ ನಾವದಗಿ ಗ್ರಾಮದ ಗರ್ಭಿಣಿ ಭಾಗ್ಯಶ್ರೀ ರಾವುತಪ್ಪ ಪಾರಣ್ಣವರ (19) ಮೃತರಾಗಿದ್ದಾರೆ.

ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಾಳಿಕೋಟಿ ತಾಲೂಕಿನ ನಾವದಗಿ ಗ್ರಾಮದಿಂದ 108 ಅಂಬ್ಯುಲೆನ್ಸ್ ವಾಹನದಲ್ಲಿ ಸಾಗಿಸುವಾಗ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಈ ದುರಂತ ಸಾವು ಸಂಭವಿಸಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಭಾಗ್ಯಶ್ರೀ ಹಾಗೂ ರಾವುತಪ್ಪ ಜೊತೆ ವಿವಾಹವಾಗಿತ್ತು.

ಮೊದಲ ಹೆರಿಗೆಗಾಗಿ ಶನಿವಾರ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ನಾವದಗಿ ಗ್ರಾಮದಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಬಂದಿದ್ದ ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದಾಗಿ ಅಲ್ಲಿನ ವೈದ್ಯರು ಗರ್ಭಿಣಿ ಭಾಗ್ಯಶ್ರೀಯನ್ನು ವಿಜಯಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದರು.

Advertisement

ಈ ವೇಳೆ ಹೂವಿನಹಿಪ್ಪರಗಿ ಮಾರ್ಗದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗೆ ಆ್ಯಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಗರ್ಭಿಣಿ ಭಾಗ್ಯಶ್ರೀ ಮೃತಪಟ್ಟಿದ್ದರೆ, ಅಂಬ್ಯುಲೆನ್ಸ್ ನಲ್ಲಿದ್ದ ಸೇವೆಗೆ ತೆರಳಿದ್ದ ಇಬ್ಬರು ಸ್ಟಾಪ್ ನರ್ಸ್, ಒರ್ವ ಸಹಾಯಕನಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ದುರ್ಘಟನೆಯ ವಿಷಯ ತಿಳಿಯುತ್ತಲೇ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಆಗಮಿಸಿದ ಭಾಗ್ಯಶ್ರೀ ಪೋಷಕರು, ಪ್ರತಿಭಟನೆ ನಡೆಸಿ, ಸ್ಥಳೀಯ ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯ ವೈದ್ಯರು ತಮ್ಮ ಮಗಳನ್ನು ವಿಜಯಪುರದ ಸರ್ಕಾರಿ ಜಿಲ್ಲಾ ಸ್ಪತ್ರೆಗೆ ರವಾನೆ ಮಾಡಿದ್ದರಿಂದಲೇ ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next