ವಿಜಯನಗರ ಆನೆಗೊಂದಿ ಕಾಲುವೆ ಡಿಸೈನ್ ಬದಲಿಸಲು ಶೀಘ್ರವೇ ರೈತರ ಜತೆ ಚರ್ಚೆ ಮಾಡಿ ಯೋಜನೆ ರೂಪಿಸುವುದಾಗಿ
ತುಂಗಭದ್ರಾ ಯೋಜನೆಯ ಮುಖ್ಯ ಅಭಿಯಂತರ ಸಿ. ಮಂಜಪ್ಪ ತಿಳಿಸಿದ್ದಾರೆ. ಅವರು ತಾಲೂಕಿನ ಹನುಮನಹಳ್ಳಿ, ಸಾಣಾಪೂರ ಬಾವಿ, ಕಾಲುವೆ ಕಡೆಬಾಗಿಲು ಗ್ರಾಮದ ಬಳಿ ಕಾಲುವೆಗೆ ಭೇಟಿ ನೀಡಿ ರೈತರ ಮನವಿ ಆಲಿಸಿದ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದರು.
Advertisement
ಸಾಣಾಪೂರದಿಂದ ಸಂಗಾಪೂರದ ವರೆಗೆ ಈ ಕಾಲುವೆ ಗುಡ್ಡ ಪ್ರದೇಶದಲ್ಲಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಕಾಲುವೆ ನೀರು ಮತ್ತು ಮಳೆ ನೀರು ಸೇರಿ ಪ್ರಸ್ತುತ ಕಾಲುವೆ ಒಡೆಯುತ್ತಿದೆ. ಪುರಾತನ ಕಾಲದ ಕಾಲುವೆ ಕೆಲವು ಭಾರಿ ಮಾತ್ರ ಒಡೆದ ಉದಾಹರಣೆ ಇದ್ದು ತಾಂತ್ರಿಕತೆ ಬಳಸಿ ಕಾಲುವೆ ನಿರ್ಮಿಸಲಾಗಿದೆ. ಪುನಃ ಅದೇ ತಾಂತ್ರಕತೆ ಬಳಸಿ ಡಿಸೈನ್ ಬದಲಿಸಿ ಶಾಶ್ವತ ದುರಸ್ತಿ ಮಾಡಲು ರೈತರ ಸಲಹೆ ಪಡೆಯಲಾಗುತ್ತದೆ. ರೈತರ ಸಮಗ್ರ ಸಲಹೆ ಸೂಚನೆ ಸರಕಾರಕ್ಕೆ ಕಳುಹಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ. ರಮೇಶ, ಆನೆಗೊಂದಿ ರೈತ ಸಂಘದ ಅಧ್ಯಕ್ಷ ವೈ. ಸುದರ್ಶನ್ ವರ್ಮಾ ಸೇರಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸೇರಿದಮತೆ ಸ್ಥಳೀಯ ರೈತರು ಇದ್ದರು.