Advertisement

ಆನೆಗೊಂದಿಯಲ್ಲಿ ಫೆ.8-18 ರವರೆಗೆ ವಿಜಯನಗರ ಉತ್ಸವ ಆಯೋಜನೆ

03:53 PM Feb 07, 2024 | Team Udayavani |

ಗಂಗಾವತಿ: ವಿಜಯನಗರ ಸಾಮ್ರಾಜ್ಯ ಕನ್ನಡ ನಾಡಿನ ಆಸ್ಮೀತೆಯನ್ನು ಇಡೀ ವಿಶ್ವಕ್ಕೆ ತೋರಿದ ಆಡಳಿತವಾಗಿತ್ತು. ಇದನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಆನೆಗೊಂದಿ ರಾಜವಂಶಸ್ಥರಿಂದ ಫೆ.8-18 ರ ವರೆಗೆ ವಿಜಯನಗರ ಉತ್ಸವ ಆಯೋಜಿಸಲಾಗಿದ್ದು, ಹಂಪಿಯ ಪೂಜ್ಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

Advertisement

ಫೆ.14 ರಂದು ಸುಪ್ರೀಂಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಚಲಮೇಶ್ವರರಾವ್ ಸೇರಿ ಹಲವು ಗಣ್ಯರು, ಇತಿಹಾಸ ಮತ್ತು ವಿವಿಧ ಉದ್ಯಮಗಳ ಮುಖ್ಯಸ್ಥರು ಆಗಮಿಸಲಿದ್ದು, ಸರ್ವರೂ ಆಗಮಿಸುವಂತೆ ಆನೆಗೊಂದಿ ವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಕೋರಿದ್ದಾರೆ.

ಅವರು ಆನೆಗೊಂದಿಯಲ್ಲಿ ವಿಜಯನಗರ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯವು ಭಾರತೀಯ ರಾಜಕೀಯ, ಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಇತ್ಯಾದಿ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಯುವ ಜನಾಂಗಕ್ಕೆ ಮನವರಿಕೆ ಮಾಡಲು ಉತ್ಸವ ಆಯೋಜಿಸಲಾಗಿದೆ. ಆನೆಗೊಂದಿಯಲ್ಲಿ ಹಿರೇ ದಿವಾನ ದೇವರಾಯರ ಪೂರ್ವಜರ ಮನೆಯನ್ನು ಅತ್ಯಂತ ಶ್ರೀಮಂತವಾಗಿ ಮರುಸ್ಥಾಪಿಸಲಾಗಿದೆ. ಇಲ್ಲಿ ರಾಣಿಯರ ವಸ್ತ್ರ, ವಿನ್ಯಾಸಗಳು, ಶಸ್ತ್ರಾಸ್ತ್ರಗಳು, ಪಾತ್ರೆಗಳು, ಛಾಯಚಿತ್ರಗಳು, ಬೆಲೆಬಾಳುವ ಕಲಾಕೃತಿಗಳ ವಿಶಿಷ್ಟ ಪ್ರದಶರ್ನವನ್ನು ವೀಕ್ಷಿಸಲು ಜನರಿಗೆ ಅವಕಾಶ ಒದಗಿಸಲಾಗಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳವ ಜನರಿಗೆ ವಿಜಯನಗರದ ವೈಭವತೆಯನ್ನು ಮತ್ತೊಮ್ಮೆ ಆಸ್ವಾದಿಸಲು ಉತ್ಸವವು ಅವಕಾಶವಿದೆ.

ತಾಳಿಕೋಟೆ ಯುದ್ಧದ ನಂತರ ವಿಜಯನಗರದ ಇತಿಹಾಸ ಮುಗಿಯಿತು ಎನ್ನುವ ವಾದವನ್ನು ಇಲ್ಲವಾಗಿಸಲು ತಿರುಮಲ ವೆಂಕಟದೇವರಾಯರು ತಾಳಿಕೋಟೆ ಕದನದ ನಂತರ ವೆಂಕಟಪತಿರಾಯರ ನೇತೃತ್ವದಲ್ಲಿ ವಿಜಯನಗರದ ಪುನರುತ್ಥಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಯುವ ಪೀಳಿಗೆಗಳಿಗೆ ಹಿಂದಿನ ಶ್ರೀಮಂತ ಪರಂಪರೆಯ ಒಳನೋಟವನ್ನು ಮತ್ತು ಅದನ್ನು ಪ್ರಸ್ತುತ ಕಾಲಕ್ಕೆ ಮತ್ತು ಭವಿಷ್ಯಕ್ಕೆ ಹೇಗೆ ಸಂಪರ್ಕಿಸಬೇಕೆಂಬ ಆಳವಾದ ಜ್ಞಾನವನ್ನು ಕೊಡಲು ಪ್ರಯತ್ನಸಲಾಗುತ್ತದೆ.

Advertisement

ರತ್ನಶ್ರೀ ರಾಯ ಅವರ ದಕ್ಷ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ದೇವರಾಯ ಹೆರಿಟೇಜ್ ವೀಲ್ಸ್ ಈ ಉತ್ಸವದಲ್ಲಿ ಅನಾವರಣಗೊಳ್ಳಲಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಸಾಂಪ್ರದಾಯಿಕ ಕೈಮಗ್ಗ ನೇಯ್ಕೆಯನ್ನು ಪುನರುಜೀವನಗೊಳಿಸಲು ಮತ್ತು ಉತ್ತೇಜಿಸಲು ಪ್ರಯತ್ನಿಸುತ್ತದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಸರ್ವರೂ ಆಗಮಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ರತ್ನಶ್ರೀ ಶ್ರೀಕೃಷ್ಣದೇವರಾಯಲು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next