Advertisement

ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅನುಮತಿ ಬೇಡ

07:39 PM Apr 06, 2021 | Team Udayavani |

ಹೊಸಪೇಟೆ: ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ಸಮಾಜ ಹಾಗೂ ವಾಲ್ಮೀಕಿ ಗುರುಪೀಠದ ವತಿಯಿಂದ ಸೋಮವಾರ ಸಚಿವ ಆನಂದ ಸಿಂಗ್‌ ಹಾಗೂ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು.

Advertisement

ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ ಬುಕ್ಕರ ಸವಿನೆನಪು ಹಾಗೂ ಹಾಲುಮತ ಸಮಾಜದ ಸಂಸ್ಕೃತಿ ಬಿಂಬಿಸುವ ಹೆಸರಿನಲ್ಲಿ ಏಪ್ರಿಲ್‌ 18 ಮತ್ತು 21ರಂದು ಹಂಪಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಣೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಹಕ್ಕಬುಕ್ಕರು ವಾಲ್ಮೀಕಿ ಸಮಾಜಕ್ಕೆ ಸೇರಿದವರು ಎಂಬುದಕ್ಕೆ ಇತಿಹಾಸದಲ್ಲಿ ಉಲ್ಲೇಖೀತ ದಾಖಲೆಗಳಿವೆ. ಕುರುಬ ಹಾಗೂ ವಾಲ್ಮೀಕಿ ಸಮಾಜ ಅಣ್ಣ ತಮ್ಮಂದಿರಂತೆ ಇಂದಿಗೂ ಜೀವನ ನಡೆಸುತ್ತಿದ್ದು, ರಾಜಕೀಯ ಕುತಂತ್ರದಿಂದ ಎರಡು ಸಮುದಾಯಗಳ ಮಧ್ಯೆ ಒಡಕನ್ನುಂಟು ಮಾಡುವ ಉದ್ದೇಶದಿಂದ ವಿಜಯನಗರ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು. ಒಂದೊಮ್ಮೆ ಕಾರ್ಯಕ್ರಮ ನಡೆಸಿದರೆ ವಾಲ್ಮೀಕಿ ಸಮುದಾಯ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಲಿದೆ ಎಂದು ಎಚ್ಚರಿಸಿದರು.

ನಾಯಕ ಸಮಾಜದ ಕುಡಿಗಳು: ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕ ಹಕ್ಕ ಬುಕ್ಕರು ವಾಲ್ಮೀಕಿ ಸಮುದಾಯದವರು ಹಾಗೂ ನಾಯಕ ಸಮಾಜದ ಕುಡಿಗಳಾಗಿರುತ್ತಾರೆ. ಕುಮಾರರಾಮನ ಅಕ್ಕನ ಮಕ್ಕಳೇ ಹಕ್ಕ ಬುಕ್ಕರು ಇವರ ತಂದೆ ಸಂಗಮರಾಯ ಎಂಬುದು ಇಂದಿಗೂ ಇತಿಹಾಸದಲ್ಲಿ ಉಲ್ಲೇಖೀತ ದಾಖಲೆಗಳಿವೆ. ಈ ದಾಖಲೆಗಳನ್ನು ಅಲ್ಲಗಳೆದು ಇತಿಹಾಸವನ್ನು ತಿರುಚಿ ಹಕ್ಕ ಬುಕ್ಕರು ಕುರುಬರು ಹಾಲುಮತಸ್ಥರು ಎಂದು ವಾದಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ಕಲುºರ್ಗಿ ವಿಭಾಗದ ಕನಕಗುರು ಪೀಠ ಶಾಖಾ ಮಠದ ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿಗಳು ನಗರದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಸವಿನೆನಪು ಹಾಗೂ ಹಾಲು ಮತ ಸಮಾಜದ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಏಪ್ರಿಲ್‌ 18, 21ರಂದು ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದನ್ನು ವಿರೋಧಿ ಸಿ ವಾಲ್ಮೀಕಿ ಸಮಾಜ ಬಾಂಧವರು ಮನವಿ ಸಲ್ಲಿಸಿದರು.

ವಾಲ್ಮೀಕಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಬಿ.ಎಸ್‌. ಜಂಬಯ್ಯ ನಾಯಕ, ಮುಖಂಡರಾದ ಬಂಡೆ ರಂಗಪ್ಪ, ಕಿಚಿಡಿ ಕೃಷ್ಣಪ್ಪ, ನೀರಿಲಿY ಷಣ್ಮುಖಪ್ಪ, ಗೋಸಲ ಭರ¾ಪ್ಪ, ಮರಡಿ ಗಂಗಪ್ಪ, ಸಣ್ಣಕ್ಕಿ ರುದ್ರಪ್ಪ, ಸಣ್ಣಕ್ಕಿ ಚಂದ್ರಪ್ಪ, ಗುಡುಗುಂಟಿ ಮಲ್ಲಿಕಾರ್ಜುನ, ಕಟಗಿ ಜಂಬಯ್ಯ ನಾಯಕ, ಪಿ.ವೆಂಕಟೇಶ್‌, ತಾರಿಹಳ್ಳಿ ಪ್ರಕಾಶ್‌, ಗುಜ್ಜಲ ಹುಲಗಪ್ಪ, ಕಟಗಿ ವಿಜಯಕುಮಾರ್‌, ಕಿಚಿಡಿ ಸುನೀಲ್‌, ಕಿಚಿಡಿ ಮಂಜು ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next