Advertisement

ದೇಶದ ಜನರೇ ಕಾಂಗ್ರೆಸ್‌ ತಿರಸ್ಕರಿಸುತ್ತಿದ್ದಾರೆ: ಪ್ರಭಾಕರ ಭಟ್‌

06:20 AM Mar 22, 2018 | |

ಬೆಂಗಳೂರು: ಮಹಾತ್ಮಾಗಾಂಧಿ ಸ್ವಾತಂತ್ರಾéನಂತರ ಕಾಂಗ್ರೆಸ್‌ ವಿಸರ್ಜನೆ ಮಾಡಲು ಹೇಳಿದ್ದರು.ಆದರೆ, ಈಗ ದೇಶದ ಜನರೇ ಕಾಂಗ್ರೆಸ್‌  ತಿರಸ್ಕರಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್‌ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದ್ದಾರೆ.

Advertisement

ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದ ದಿನದ ನೆನಪಿನಲ್ಲಿ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ “ವಿಜಯ್‌ ದಿವಸ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ ಅಂತ್ಯ ಸನಿಹವಾಗುತ್ತಿದೆ ಎಂದು ತಿಳಿಸಿದರು.

ಕಳೆದ 93 ವರ್ಷಗಳಿಂದ ಸಂಘ ಕೆಲಸ ಮಾಡುತ್ತಿದೆ. ಅಂದು ದೇಶ ವಿಭಜನೆ ತಡೆಯುವಷ್ಟು ಶಕ್ತಿ ಸಂಘಕ್ಕೆ ಇರಲಿಲ್ಲ. ಸಂಘದ ಮೇಲೆ ನಿಷೇದ ಹೇರುವ ಪ್ರಯತ್ನ ಕಾಂಗ್ರೆಸ್‌ ಮಾಡಿತು. ಅದೇ ಸಮಯದಲ್ಲಿ ಮಹಾತ್ಮಗಾಂಧಿಯವರ ಹತ್ಯೆಯಾಯಿತು. ಅದನ್ನು ಸಂಘದ ಮೇಲೆ ಹಾಕಲಾಯಿತು. ಇಡೀ ದೇಶ ಸಂಘದ ವಿರುದ್ಧ ತಿರುಗಿತು. 77 ಸಾವಿರ ಸ್ವಯಂ ಸೇವಕರ ಬಂಧನವಾಯಿತು. ಇಲ್ಲದಿದ್ದರೆ ಕಾಂಗ್ರೆಸ್‌ಗಿಂತ ಹೆಚ್ಚು ಗಟ್ಟಿಯಾಗಿ ಸಂಘ ಬೆಳೆಯುತ್ತಿತ್ತು ಎಂದು ತಿಳಿಸಿದರು.

ದೇಶಕ್ಕಾಗಿ ಸಾಯುವುದಲ್ಲ, ದೇಶಕ್ಕಾಗಿ ಬದುಕಬೇಕು ಎಂದು ಸಂಘ ನಮಗೆ ಹೇಳಿಕೊಟ್ಟಿದೆ. ಅದೇ ರೀತಿ ನಾವು ದೇಶಕ್ಕಾಗಿ ಬದುಕುತ್ತಿದ್ದೇವೆ  ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ನವರು ತಮ್ಮ ಅಧಿಕಾರ  ಉಳಿಸಿಕೊಳ್ಳಲು ದೇಶ ಒತ್ತೆ ಇಟ್ಟವರು ಎಂದು ಆರೋಪಿಸಿದರು.

Advertisement

ಜಯಪ್ರಕಾಶ್‌ ನಾರಾಯಣ… ಅವರನ್ನು ಜೀವಂತ ಕೊಂದವರು ಕಾಂಗ್ರೆಸ್‌ ಪಕ್ಷದವರು.  ಆರ್‌ಎಸ್‌ಎಸ್‌  ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡದೇ ಇರುತ್ತಿದ್ದರೆ ಇಂದು ಯಾವ ಪರಿಸ್ಥಿತಿ ಇರುತ್ತಿತ್ತು ಎಂದು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಮಾಡಿದ ಹೋರಾಟಕ್ಕೆ ಇಂದಿರಾ ಗಾಂಧಿಯಂತಹ ಸರ್ವಾಧಿಕಾರಿಣಿ ಸಹ ಮಣಿಯಬೇಕಾಯ್ತು ಎಂದು ಹೇಳಿದರು.

ರಾಜ್ಯದಲ್ಲಿ ಇನ್ನು 45 ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ.  ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ ಎಂದು ತಿಳಿಸಿದರು.

ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಸು. ರಾಮಣ್ಣ, ಅಖೀಲ ಭಾರತ ಲೋಕತಂತ್ರ ಸೇನಾನಿ ಆ್ಯಕ್ಷನ್‌ ಸಮಿತಿ ಅಧ್ಯಕ್ಷ ಗೋವರ್ಧನ್‌ ಪ್ರಸಾದ್‌ ಕಲ್ಲಡ್ಕ ಪ್ರಭಾಕರ್‌ ಪತ್ನಿ ಕಮಲಾ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next