ಮೂಲ್ಕಿ: ವಿಜಯ ಬ್ಯಾಂಕಿನ ವಿಲೀನ ಪ್ರಕ್ರಿಯೆಯಿಂದ ದ.ಕ., ಉಡುಪಿ ಜಿಲ್ಲೆಗಳ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಮಾತ್ರವಲ್ಲದೇ ಗಾಮೀಣ ಪ್ರದೇಶದ ವಿಜಯ ಬ್ಯಾಂಕಿನ ಗ್ರಾಹಕರಿಗೆ ಸಿಗುವ ಸವಲತ್ತುಗಳನ್ನು ಕಸಿದುಕೊಂಡಂತಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕೇಂದ್ರ ಸರಕಾರವು ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಜತೆಗೆ ವಿಲೀನಗೊಳಿಸಿದ್ದನ್ನು ವಿರೋಧಿಸಿ ಮೂಲ್ಕಿಯಲ್ಲಿ ನಡೆದ ಬ್ಯಾಂಕಿನ ಅಭಿಮಾನಿಗಳ ಮತ್ತು ಗ್ರಾಹಕರ ಬ್ರಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿಲ್ಲಿಗೆ ಹೋಗುವುದೇ ಸೂಕ್ತ
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ನಾವು ಇಲ್ಲಿ ಪ್ರತಿಭಟಿಸುವ ಬದಲು ಮುಂದಿನ ದಿನಗಳಲ್ಲಿ ಸಹಸ್ರಾರು ಜನರು ದಿಲ್ಲಿಗೆ ಹೋಗಿ ಪ್ರತಿಭಟನೆ ನಡೆಸುವುದು ಸೂಕ್ತ ಎಂದು ಹೇಳಿದರು.
ಸಾಂದೀಪನಿ ಆಶ್ರಮದ ಶ್ರೀ ಈಶ ವಿಠuಲದಾಸ ಸಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿದರು. ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ, ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿಗಳಾದ ಪ್ರೇಮ್‌ನಾಥ ಆಳ್ವ, ಎ.ಡಿ. ಪೂಂಜ, ಜಿ. ಶಿವರಾಮ ಶೆಟ್ಟಿ, ಶ್ರೀಧರ ಶೆಟ್ಟಿ, ಮಾಜಿ ನಿರ್ದೇಶಕ ಇಬ್ರಾಹಿಂ, ಪ್ರಕಾಶ್ ರಾವ್, ಬೇಬಿ ಕುಂದರ್ ಮಾನನಾಡಿದರು.
ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಗಣ್ಯರಾದ ಸುನೀಲ್ ಆಳ್ವ, ಎನ್.ಎಸ್. ಮನೋಹರ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಮೂಲ್ಕಿ ಕರುಣಾಕರ ಶೆಟ್ಟಿ, ವಸಂತ ಶೆಟ್ಟಿ, ಅಜಿತ್ ಶೆಟ್ಟಿ, ಯೋಗೀಶ್ ಶೆಟ್ಟಿ, ಜನಾರ್ದನ ತೋನ್ಸೆ, ಶಾಲೆಟ್ ಪಿಂಟೋ, ಇಕ್ಬಾಲ್ ಅಹಮ್ಮದ್, ಜೀವನ್ ಶೆಟ್ಟಿ, ಎಂ.ಬಿ. ಸದಾಶಿವ, ಕರ್ನಿರೆ ವಿಶ್ವನಾಥ ಶೆಟ್ಟಿ, ಧನಂಜಯ ಮಟ್ಟು, ಗುರುವಪ್ಪ ಕೋಟ್ಯಾನ್, ಡಾ| ಹರಿಶ್ಚಂದ್ರ ಸಾಲ್ಯಾನ್, ಗೋಪಿನಾಥ ಪಡಂಗ, ಪ್ರತಿಭಾ ಕುಳಾಯಿ, ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಸುಶೀಲ್ ನರೋನ್ಹಾ, ದೇವಪ್ರಸಾದ್ ಪುನರೂರು, ಹರೀಶ್ ಪುತ್ರನ್, ಮಧು ಆಚಾರ್ಯ, ಆದರ್ಶ ಶೆಟ್ಟಿ, ಸುಖೇಶ್ ಮಣಾಯಿ ಮೊದಲಾದವರು ಪಾಲ್ಗೊಂಡಿದ್ದರು.ಕೊಲ್ಲಾಡಿ ಬಾಲಕೃಷ್ಣ ರೈ ಸ್ವಾಗತಿಸಿದರು. ಸುನೀಲ್ ಜೀವನ್ ವಾಸ್ ವಂದಿಸಿದರು.