Advertisement

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ಶುರು

12:42 PM Oct 08, 2021 | Team Udayavani |

ಇಂದು ಎಲ್ಲವೂ ಇಂಟರ್‌ನೆಟ್‌ ಮತ್ತು ಡಿಜಿಟಲ್‌ವುಯ. ಆನ್‌ ಲೈನ್‌ ಎನ್ನುವುದು ಜನಸಾಮಾನ್ಯರ ಜೀವನದಲ್ಲೂ ಹಾಸುಹೊಕ್ಕಾಗಿದೆ. ಕಣ್ಮುಂದೆ ಮಾಯಾಲೋಕ ಸೃಷ್ಟಿಸುವ ಇಂಥ ಅಂತರ್ಜಾಲದಲ್ಲಿ, ಎಚ್ಚರ ತಪ್ಪಿ ಸಿಲುಕಿದರೆ ಏನಾಗಬಹುದು ಅನ್ನೋದನ್ನ ತೆರೆಮೇಲೆ ಹೇಳಲು ಹೊರಟಿದೆ “ಗ್ರೇ ಗೇಮ್ಸ್‌’ ಚಿತ್ರ.

Advertisement

ಹೌದು, ಇಂಟರ್‌ ನೆಟ್‌, ಆನ್‌ಲೈನ್‌, ಅತಿಯಾದ ತಂತ್ರಜ್ಞಾನದ ಅವಲಂಬನೆ, ಅದರಿಂದಾಗುವ ಪರಿಣಾಮಗಳ ಸುತ್ತ “ಗ್ರೇ ಗೇಮ್ಸ್‌’ ಚಿತ್ರದ ಕಥೆ ನಡೆಯಲಿದ್ದು, ಈ ಹಿಂದೆ “ಅಯನ’ ಚಿತ್ರವನ್ನು ನಿರ್ದೇಶಿಸಿದ್ದ, ಗಂಗಾಧರ್‌ ಸಾಲಿಮಠ ಈ ಚಿತ್ರಕ್ಕೆ ಆ್ಯಕ್ಷನ್‌ -ಕಟ್‌ ಹೇಳುತ್ತಿದ್ದಾರೆ. ವಿಜಯ ರಾಘವೇಂದ್ರ, ಭಾವನಾ ರಾವ್‌, ಶ್ರುತಿ ಪ್ರಕಾಶ್‌, ಜೈ, ಅಪರ್ಣಾ, ಅಶ್ವಿ‌ನ್‌ ಹಾಸನ್‌ ಮೊದಲಾದವರು “ಗ್ರೇ ಗೇಮ್ಸ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಆನಂದ ಹೆಚ್‌. ಮುಗದ್‌ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ ಪ್ರೀ- ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ದಸರಾ ಹಬ್ಬದ ಮೊದಲ ದಿನ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ನಟ ಶ್ರೀಮುರಳಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿಯ ನಿರ್ಮಾಪಕ ಎಸ್‌.ಎ ಚಿನ್ನೇಗೌಡ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ವೇಳೆ ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.

ಇದನ್ನೂ ಓದಿ:ಐಟಿ ದಾಳಿಗೂ ಯಡಿಯೂರಪ್ಪರಿಗೂ ಸಂಬಂಧವಿಲ್ಲ : ರೇಣುಕಾಚಾರ್ಯ

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗಂಗಾಧರ್‌ ಸಾಲಿಮಠ, “ಇದೊಂದು ಸಸ್ಪೆನ್ಸ್‌ ಕಥಾಹಂದರ ಸಿನಿಮಾ. ಇಂದಿನ ಜನರೇಶನ್‌ ಸೈಬರ್‌ ಚಟುವಟಿಕೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವಂಥ ಅನೇಕ ಘಟನೆಗಳು ಸಿನಿಮಾದಲ್ಲಿದ್ದು, ಸಮಾಜಕ್ಕೆ ಒಂದೊಳ್ಳೆ ಮೆಸೇಜ್‌ ಕೂಡ ಇದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸಿನಿಮಾ ಇದಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

Advertisement

ಚಿತ್ರದ ನಾಯಕ ವಿಜಯ ರಾಘವೇಂದ್ರ, ನಾಯಕಿ ಭಾವನಾ ರಾವ್‌ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಪಾತ್ರ ಮತ್ತು ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. “ಗ್ರೇ ಗೇಮ್ಸ್‌’ ಚಿತ್ರಕ್ಕೆ ವರುಣ್‌ ಡಿ. ಕೆ ಛಾಯಾಗ್ರಹಣ, ರಂಜಿತ್‌ ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಹೊಸ ವರ್ಷದ ಆರಂಭದಲ್ಲಿ “ಗ್ರೇ ಗೇಮ್ಸ್‌’ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next