Advertisement

ವೆಚ್ಚ ಪಾವತಿಗೆ ಸೂಚನೆ

09:10 AM Jun 16, 2018 | Team Udayavani |

ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ದಾವೆ ಹೂಡಿರುವ ಭಾರತೀಯ ಬ್ಯಾಂಕ್‌ ಗಳು ವಿವಿಧ ಕಾನೂನು ಪ್ರಕ್ರಿಯೆಗಳಿಗಾಗಿ ಈವರೆಗೆ ಮಾಡಿರುವ ಖರ್ಚಿನಲ್ಲಿ ಕನಿಷ್ಠ 2,00,000 ಪೌಂಡ್‌ಗಳನ್ನಾದರೂ (ಅಂದಾಜು 1.81 ಕೋಟಿ ರೂ.) ಮಲ್ಯ ನೀಡಬೇಕು ಎಂದು ಯುಕೆ ಹೈಕೋರ್ಟ್‌ ಆದೇಶಿಸಿದೆ. ಮಲ್ಯ ವಿರುದ್ಧ SBI ಬ್ಯಾಂಕ್‌ ಸೇರಿದಂತೆ 13 ಬ್ಯಾಂಕ್‌ಗಳು ದಾವೆ ಹೂಡಿವೆ. ಕಳೆದ ತಿಂಗಳು, ನ್ಯಾ. ಆ್ಯಂಡ್ರ್ಯೂ ಹೆನ್ಶಾ ಅವರು, ವಿಶ್ವದ ನಾನಾ ಕಡೆಯಿರುವ ಮಲ್ಯ ಅವರ ಆಸ್ತಿ ಪಾಸ್ತಿಯನ್ನು ಸಾಲ ವಸೂಲಾತಿಗಾಗಿ ಜಪ್ತಿ ಮಾಡುವಂತೆ ಆದೇಶಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next