Advertisement
ಮುಂಬಯಿ ತಂಡ ಈ ವರ್ಷದ ರಣಜಿ, ಇರಾನಿ ಹಾಗೂ ಇತ್ತೀಚೆಗಷ್ಟೇ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ತಂಡ. ನಾಯಕ ಶ್ರೇಯಸ್ ಅಯ್ಯರ್ ಅದೃಷ್ಟವನ್ನೇ ಹೊತ್ತುಕೊಂಡಂತಿದೆ. ಇದಕ್ಕೆ ಇನ್ನೊಂದು ಸಾಕ್ಷಿಯೆಂದರೆ ಇವರ ಸಾರಥ್ಯದಲ್ಲೇ ಕೆಕೆಆರ್ 2024ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು. ಈ ಎಲ್ಲ ಗೆಲುವುಗಳಿಂದ ಶ್ರೇಯಸ್ ಪಡೆ ಭಾರೀ ಹುರುಪಿನಲ್ಲಿದೆ.
ಕರ್ನಾಟಕ ಪ್ರಮುಖ ಆಟಗಾರ ಮನೀಷ್ ಪಾಂಡೆ ಅವರನ್ನು ಹೊರಗಿರಿಸಿದ್ದೊಂದು ಅಚ್ಚರಿ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಾಂಡೆ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಅತ್ತ ಮುಂಬಯಿ ತಂಡದಲ್ಲಿ ಪೃಥ್ವಿ ಶಾ ಅವರಿಗೆ ಸ್ಥಾನ ಲಭಿಸಿಲ್ಲ. ಫಾರ್ಮ್ ಕೊರತೆ ಮತ್ತು ಅಶಿಸ್ತೇ ಇದಕ್ಕೆ ಕಾರಣ.
Related Articles
ಈ ಪಂದ್ಯಾವಳಿಯಲ್ಲಿ ಮೊಹಮ್ಮದ್ ಶಮಿ, ರಿಂಕು ಸಿಂಗ್, ಸಾಯಿ ಕಿಶೋರ್ ಮತ್ತಿತರ ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಬಂಗಾಲ ತಂಡದಲ್ಲಿ ಮೊಹಮ್ಮದ್ ಶಮಿ ಹೆಸರಿದೆಯಾದರೂ ಆರಂಭಿಕ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ.
Advertisement
ತಂಡಗಳುಕರ್ನಾಟಕ: ಮಾಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್, ಎಸ್. ನಿಕಿನ್ ಜೋಸ್, ಕೆ.ವಿ. ಅನೀಶ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವಿಜಯ್ಕುಮಾರ್ ವೈಶಾಖ್, ವಾಸುಕಿ ಕೌಶಿಕ್, ವಿದ್ಯಾಧರ ಪಾಟೀಲ್, ಕಿಶನ್ ಬೆಡಾರೆ, ಅಭಿಲಾಶ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲವ್ನೀತ್ ಸಿಸೋಡಿಯಾ. ಮುಂಬಯಿ: ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕೃಶ್ ರಘುವಂಶಿ, ಜಾಯ್ ಬಿಸ್ಟಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡೆY, ಸಿದ್ದೇಶ್ ಲಾಡ್, ಹಾರ್ದಿಕ್ ತಮೋರೆ, ಪ್ರಸಾದ್ ಪವಾರ್, ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾದೂìಲ್ ಠಾಕೂರ್, ರಾಯ್ಸ್ಟನ್ ಡಾಯಸ್, ಜುನೇದ್ ಖಾನ್, ಹರ್ಷ ತನ್ನಾ, ವಿನಾಯಕ್ ಭೋಯಿರ್. ಕರ್ನಾಟಕದ ಪಂದ್ಯಗಳು
ದಿನಾಂಕ ಎದುರಾಳಿ
ಡಿ. 21 ಮುಂಬಯಿ
ಡಿ. 23 ಪುದುಚೇರಿ
ಡಿ. 26 ಪಂಜಾಬ್
ಡಿ. 28 ಅರುಣಾಚಲ ಪ್ರದೇಶ
ಡಿ. 31 ಹೈದರಾಬಾದ್
ಜ. 3 ಸೌರಾಷ್ಟ್ರ
ಜ. 5 ನಾಗಾಲ್ಯಾಂಡ್