Advertisement
ಮುಂಬಯಿ ಪರ ಪೃಥ್ವಿ ಶಾ ಮಿಂಚಿನ ಆಟವಾಡಿ 44 ಎಸೆತಗಳಿಂದ 61 ರನ್ ಬಾರಿಸಿದರು (8 ಬೌಂಡರಿ, 2 ಸಿಕ್ಸರ್). ನಾಯಕ ಶ್ರೇಯಸ್ ಅಯ್ಯರ್ 55 ರನ್ ಮಾಡಿ ಔಟಾಗದೆ ಉಳಿದರು (53 ಎಸೆತ, 5 ಬೌಂಡರಿ, 2 ಸಿಕ್ಸರ್). ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ತಲಾ 17 ರನ್ ಮಾಡಿದರು.
ಹೈದರಾಬಾದ್ ಬ್ಯಾಟಿಂಗ್ ಸರದಿಯನ್ನು ವನ್‌ಡೌನ್ ಬ್ಯಾಟ್ಸ್‌ಮನ್ ಕೆ. ರೋಹಿತ್ ರಾಯುಡು ಆಕರ್ಷಕ ಶತಕದ ಮೂಲಕ ಏಕಾಂಗಿಯಾಗಿ ಆಧರಿಸಿ ನಿಂತರು. ರಾಯುಡು ಗಳಿಕೆ ಅಜೇಯ 121 ರನ್. 132 ರನ್ನುಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್ ಸೇರಿತ್ತು. ಹನುಮ ವಿಹಾರಿ ಬದಲು ಅಂಬಾಟಿ ರಾಯುಡು ಹೈದರಾಬಾದ್ ತಂಡ ವನ್ನು ಮುನ್ನಡೆಸಿದ್ದರು. 3 ವಿಕೆಟ್ ಕಿತ್ತ ತುಷಾರ್ ದೇಶಪಾಂಡೆ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಸಂಕ್ಷಿಪ್ತ ಸ್ಕೋರ್: ಹೈದರಾಬಾದ್-50 ಓವರ್‌ಗಳಲ್ಲಿ 8 ವಿಕೆಟಿಗೆ 246 (ರೋಹಿತ್ ರಾಯುಡು ಔಟಾಗದೆ 121, ಬಿ.ಪಿ. ಸಂದೀಪ್ 29, ದೇಶಪಾಂಡೆ 55ಕ್ಕೆ 3, ಡಯಾಸ್ 43ಕ್ಕೆ 2). ಮುಂಬಯಿ-25 ಓವರ್‌ಗಳಲ್ಲಿ 2 ವಿಕೆಟಿಗೆ 155 (ಶಾ 61, ಅಯ್ಯರ್ ಔಟಾಗದೆ 55, ಹಸನ್ 23ಕ್ಕೆ 2). ಪಂದ್ಯಶ್ರೇಷ್ಠ: ತುಷಾರ್ ದೇಶಪಾಂಡೆ.