Advertisement
ಮೊದಲು ಬ್ಯಾಟಿಂಗ್ ನಡೆಸಿದ ಮುಂಬಯಿ ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ ಮತ್ತು ನಾಯಕ ಅಯ್ಯರ್ ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. 8 ರನ್ ಆಗುವಷ್ಟರಲ್ಲಿ ಈ ಮೂವರ ವಿಕೆಟ್ ಉರುಳಿತು. ಎಲ್ಲರ ಗಳಿಕೆಯೂ ತಲಾ 2 ರನ್. ಸಫìರಾಜ್ ಖಾನ್ (11) ಕೂಡ ಬೇಗ ಔಟಾದರು. ಆದರೆ ಸೂರ್ಯಕುಮಾರ್ ಯಾದವ್, ಆದಿತ್ಯ ತಾರೆ ಮತ್ತು ಶಾದೂìಲ್ ಠಾಕೂರ್ ಅವರ ದಿಟ್ಟ ಪ್ರತಿಹೋರಾಟದಿಂದ 9 ವಿಕೆಟಿಗೆ 321 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ಹಿಮಾಚಲ ಪ್ರದೇಶ 24.1 ಓವರ್‌ಗಳಲ್ಲಿ 121 ರನ್ನಿಗೆ ಕುಸಿಯಿತು.
ಮುಂಬಯಿ ಇನ್ನಿಂಗ್ಸ್‌ನಲ್ಲಿ ಶಾದೂìಲ್ ಠಾಕೂರ್ ಸರ್ವಾಧಿಕ 92 ರನ್ ಬಾರಿಸಿದರು. 57 ಎಸೆತಗಳ ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ 6 ಸಿಕ್ಸರ್, 6 ಬೌಂಡರಿ ಸಿಡಿಯಿತು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶಾದೂìಲ್ ಬಾರಿಸಿದ ಮೊದಲ ಅರ್ಧ ಶತಕ.
ಭಾರತ ತಂಡಕ್ಕೆ ಕರೆ ಪಡೆದ ಸೂರ್ಯಕುಮಾರ್ ಯಾದವ್ 91 ರನ್ (75 ಎಸೆತ, 15 ಬೌಂಡರಿ), ಕೀಪರ್ ಆದಿತ್ಯ ತಾರೆ 83 ರನ್ (98 ಎಸೆತ, 6 ಬೌಂಡರಿ, 1 ಸಿಕ್ಸರ್) ಕೊಡುಗೆ ಸಲ್ಲಿಸಿದರು. ಹಿಮಾಚಲ ಪ್ರದೇಶ ಪ್ರಶಾಂತ್ ಸೋಲಂಕಿ, ಶಮ್ಸ್ ಮುಲಾನಿ ಮತ್ತು ಧವಳ್ ಕುಲಕರ್ಣಿ ದಾಳಿಗೆ ಕುಸಿಯಿತು.
Related Articles
ಲೀಗ್ ಹಂತದಲ್ಲಿ ಉತ್ತಮ ಸಾಧನೆ ತೋರಿದ 7 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಇವುಗಳೆಂದರೆ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಕೇರಳ, ಮುಂಬಯಿ ಮತ್ತು ಸೌರಾಷ್ಟ್ರ.
Advertisement
ದಿಲ್ಲಿ ಮತ್ತು ಉತ್ತರಾಖಂಡ ತಂಡಗಳು ರವಿವಾರದ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಇಲ್ಲಿ ಗೆದ್ದ ತಂಡ ಕ್ವಾರ್ಟರ್ ಫೈನಲ್ ತಲುಪಲಿದೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-9 ವಿಕೆಟಿಗೆ 321 (ಠಾಕೂರ್ 92, ಸೂರ್ಯ ಕುಮಾರ್ 91, ತಾರೆ 83, ರಿಷಿ ಧವನ್ 84ಕ್ಕೆ 4, ಪಂಕಜ್ ಜೈಸ್ವಾಲ್ 65ಕ್ಕೆ 3). ಹಿಮಾಚಲ ಪ್ರದೇಶ-24.1 ಓವರ್‌ಗಳಲ್ಲಿ 121 (ಸೋಲಂಕಿ 31ಕ್ಕೆ 4, ಮುಲಾನಿ 42ಕ್ಕೆ 3, ಕುಲಕರ್ಣಿ 8ಕ್ಕೆ 2).