Advertisement
ಈ ಆರಂಭಿಕದ್ವಯರ ಅಜೇಯ ಶತಕ ಕರ್ನಾಟಕ ಸರದಿಯ ಆಕ ರ್ಷಣೆಯಾಗಿತ್ತು. ಅಮೋಘ ಫಾರ್ಮ್ ನಲ್ಲಿರುವ ಎಡಗೈ ಬ್ಯಾಟ್ಸ್ ಮನ್ ಪಡಿಕ್ಕಲ್ ಅಜೇಯ 145 ರನ್ ಬಾರಿಸಿ ಹ್ಯಾಟ್ರಿಕ್ ಶತಕದ ದಾಖಲೆ ಬರೆದರು. ಸಮರ್ಥ್ ಅಜೇಯ 130 ರನ್ ಬಾರಿಸಿದರು.
ಈ ಕೂಟದ ಆರಂಭದಿಂದಲೂ ಬ್ಯಾಟಿಂಗ್ ಅಬ್ಬರ ತೋರ್ಪಡಿಸುತ್ತ ಬಂದ ದೇವದತ್ತ ಪಡಿಕ್ಕಲ್ 5 ಪಂದ್ಯಗಳಿಂದ 190.66ರಷ್ಟು ಉತ್ಕೃಷ್ಟ ಸರಾಸರಿಯಲ್ಲಿ 572 ರನ್ ಪೇರಿಸಿ ದರು. ಒಡಿಶಾ ವಿರುದ್ಧ ಜೀವನಶ್ರೇಷ್ಠ 152 ರನ್ ಬಾರಿಸಿ ಶತಕದ ಅಭಿಯಾನ ಆರಂಭಿಸಿದ್ದ ಅವರು ಕೇರಳ ಎದುರು 126 ರನ್ ಹೊಡೆದು ಔಟಾಗದೆ ಉಳಿದಿದ್ದರು. ಈಗ ರೈಲ್ವೇಸ್ ವಿರುದ್ಧ ಮತ್ತೆ ಅಜೇಯ ಶತಕದಾಟ. ಬಿಹಾರ ವಿರುದ್ಧ ಪಡಿಕ್ಕಲ್ ಕೇವಲ 3 ರನ್ನಿನಿಂದ ಶತಕ ವಂಚಿತರಾಗಿದ್ದರು.
Related Articles
Advertisement
ನಾಯಕನಾದ ಬಳಿಕ ರನ್ ಪ್ರವಾಹವನ್ನೇ ಹರಿಸುತ್ತ ಬರುತ್ತಿರುವ ರವಿಕುಮಾರ್ ಸಮರ್ಥ್ 118 ಎಸೆತಗಳಿಂದ ಅಜೇಯ 130 ರನ್ ರಾಶಿ ಹಾಕಿದರು. ಇದರಲ್ಲಿ 17 ಬೌಂಡರಿ ಒಳಗೊಂಡಿತ್ತು. ಸಮರ್ಥ್ ಬಿಹಾರ ವಿರುದ್ಧ 158 ರನ್ ಕೊಡುಗೆ ಸಲ್ಲಿಸಿದ್ದರು.ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-9 ವಿಕೆಟಿಗೆ 284 (ಪ್ರಥಮ್ ಸಿಂಗ್ 129, ಘೋಷ್ 36, ಅಮಿತ್ ಮಿಶ್ರಾ ಔಟಾಗದೆ 25, ಗೋಪಾಲ್ 41ಕ್ಕೆ 3). ಕರ್ನಾಟಕ-40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 (ಪಡಿಕ್ಕಲ್ ಔಟಾಗದೆ 145, ಆರ್. ಸಮರ್ಥ್ ಔಟಾಗದೆ 130). 3 ತಂಡಗಳಿಗೆ 16 ಅಂಕ
“ಸಿ’ ವಿಭಾಗದಲ್ಲಿ ಕರ್ನಾಟಕ, ಉತ್ತರಪ್ರದೇಶ ಮತ್ತು ಕೇರಳ ತಲಾ 4 ಜಯದೊಂದಿಗೆ 16 ಅಂಕ ಸಂಪಾದಿಸಿದವು. ಆದರೆ ರನ್‌ರೇಟ್‌ನಲ್ಲಿ ಮುಂದಿದ್ದ (+1.879) ಕರ್ನಾಟಕಕ್ಕೆ ಅಗ್ರಸ್ಥಾನ ಒಲಿಯಿತು.