ತಮ್ಮ ಮುಂದಿನ ಚಿತ್ರ “ಲೈಗರ್’ನ ಪ್ರಚಾರಕ್ಕಾಗಿ ಪಾಟ್ನಾಕ್ಕೆ ಆಗಮಿಸಿರುವ ದಕ್ಷಿಣ ಭಾರತದ ನಟ ವಿಜಯ್ ದೇವರಕೊಂಡ, ಶನಿವಾರ ಬೆಳಗ್ಗೆಯೇ ಬಿಹಾರದ ಪಾಟ್ನಾದ ವಿಶೇಷವಾದ ಚಹಾ ಅಂಗಡಿಗೆ ಭೇಟಿ ನೀಡಿ ಮಣ್ಣಿನ ಲೋಟದಲ್ಲಿ ಸೊಗಸಾದ ಚಹಾ ಸವಿದಿದ್ದಾರೆ.
Advertisement
ಇದು ಮಾಮೂಲಿ ಚಹಾ ಅಂಗಡಿಯಲ್ಲ, ಪದವಿಧರೆಯಾಗಿದ್ದರೂ ಕೆಲಸ ಸಿಗದೆಯೇ, ಕಾಲೇಜಿನ ಬಳಿಯೇ ಅಂಗಡಿ ತೆರೆದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಪ್ರಿಯಾಂಕಾ ಗುಪ್ತಾ ಅವರ ಚಹಾ ಅಂಗಡಿ.
ಹಾಗಾಗಿ, ಇವರು ಗ್ರಾಜ್ಯುಟೇಲ್ ಚಾಯ್‌ವಾಲಿ ಅಂತನೇ ಪ್ರಸಿದ್ಧಿ. ಈ ಚಹಾ ಅಂಗಡಿಗೆ ಭೇಟಿ ನೀಡಿದ ವಿಜಯ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.