Advertisement

ಸೋಷಿಲ್ ಮೀಡಿಯಾದಲ್ಲಿ ಕಾಲೆಳೆದುಕೊಂಡ “ಗೀತಾ ಗೋವಿಂದ’!

05:07 PM Dec 17, 2018 | |

ಟಾಲಿವುಡ್‍ನ ಸೂಪರ್ ಹಿಟ್ “ಗೀತಾ ಗೋವಿಂದಂ’ ಚಿತ್ರದಿಂದ ನಟ ವಿಜಯ್ ದೇವರಕೊಂಡ ಹಾಗೂ ಚಮಕ್ ಹುಡುಗಿ ರಶ್ಮಿಕಾ ಮಂದಣ್ಣ ಎಲ್ಲರ ಹಾಟ್ ಫೇವರೇಟ್ ಜೋಡಿ ಆಗಿದ್ದು, ಇದೀಗ ಈ ಜೋಡಿ ಟ್ವೀಟರಿನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

Advertisement

ವಿಜಯ್ ದೇವರಕೊಂಡ ತಮ್ಮ ಟ್ವೀಟರ್ ಖಾತೆಯಲ್ಲಿ, “ಕಾಮ್ರೆಡ್ ರಶ್ಮಿಕಾ. ದಕ್ಷಿಣ ಭಾರತದ ಅತೀ ಗೂಗಲ್ ಆಗಿರುವ ಚೈಲ್ಡ್ ನಟಿ ರಶ್ಮಿಕಾಗೆ ಶುಭಾಶಯಗಳು. ಈ ವರ್ಷದಲ್ಲಿ ಅತಿ ಹೆಚ್ಚು ಗೂಗಲ್ಡ್ ಆಗಿರುವ ಹಾಡಿನಲ್ಲಿ ನಿಮ್ಮ ಹಾಡು ಮೊದಲನೇ, ನಾಲ್ಕನೇ ಹಾಗೂ ಒಂಬತ್ತನೇ ಸ್ಥಾನದಲ್ಲಿದೆ. ನಮಗೆ ಪಾರ್ಟಿ ಬೇಕು’ ಎಂದು ಕಾಮ್ರೆಡ್ ಚಿತ್ರದಲ್ಲಿನ ರಶ್ಮಿಕಾ ಅವರ ಪೋಸ್ಟರ್ ಹಾಕಿ ಟ್ವೀಟ್ ಮಾಡಿದ್ದರು. 

ಅಲ್ಲದೇ ವಿಜಯ್ ಮಾಡಿದ ಈ ಟ್ವೀಟ್‍ಗೆ ರಶ್ಮಿಕಾ ಮಂದಣ್ಣ “ಕಾಮ್ರೆಡ್ ದೇವರಕೊಂಡ. ಮಿ. ಫಿಲ್ಮ್ ಫೇರ್ ಹಾಗೂ ರೌಡಿವೇರ್ ನ ಮಾಲೀಕ ನನ್ನ ಪಾರ್ಟಿ ಎಲ್ಲಿ?. ಅತೀ ಹೆಚ್ಚು ಗೂಗಲ್ ಆಗಿರುವ ನಾಯಕರಲ್ಲಿ ನೀವು ನಾಲ್ಕನೇ ಸ್ಥಾನ ಪಡೆದಿದ್ದೀರಿ ಹಾಗೂ ಗೂಗಲ್ಡ್ ಆಗಿರುವ ಚಿತ್ರದಲ್ಲಿ ನೀವು ಸ್ಟಾರ್ ಆಗಿದ್ದೀರಿ. ಅಲ್ಲದೇ ಗೂಗಲ್ಡ್ ಆಗಿರುವ ಹಾಡಿನಲ್ಲಿ 2ನೇ ಹಾಗೂ 4ನೇ ಸ್ಥಾನದಲ್ಲಿದೆ. ಎಲೆಕ್ಷನ್ ರಿಸಲ್ಟ್ ಬಂದ ನಂತರ ನೀವು ಇಡೀ ತಂಡಕ್ಕೆ ಪಾರ್ಟಿ ನೀಡುತ್ತೀರಿ ಎಂದು ಹೇಳಿದ್ದೀರಿ. ಆದರೆ ಈಗ ಪಾರ್ಟಿ ಎಲ್ಲಿ? ಮುಖ್ಯವಾಗಿ #ನನ್ನನ್ನು ಚೈಲ್ಡ್ ಎಂದು ಕರೆಯಬೇಡಿ” ಎಂದು ಹ್ಯಾಶ್‍ಟ್ಯಾಗ್ ಬಳಸಿ ವಿಜಯ್ ಅವರ ಪೋಸ್ಟರ್ ಹಾಕಿ ರಶ್ಮಿಕಾ ರೀ-ಟ್ವೀಟ್ ಮಾಡಿದ್ದಾರೆ.

Advertisement

ಇನ್ನು ವಿಜಯ್ ಹಾಗೂ ರಶ್ಮಿಕಾ “ಕಾಮ್ರೆಡ್’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಪ್ರಮೋಶನ್‍ಗಾಗಿ ಪರಸ್ಪರ ಫೋಟೋ ಹಾಕಿಕೊಂಡು ಟ್ವೀಟರ್​​ನಲ್ಲಿ ಕಾಲೆಳೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next