Advertisement

ವಿಜಯ್‌ ಬರ್ತಡೇಗೆ ಆಟೋ ಗಿಫ್ಟ್

11:20 AM Jan 17, 2017 | |

ಇನ್ನು ಮೂರು ದಿನಕ್ಕೆ, ಅಂದರೆ ಜನವರಿ 20ಕ್ಕೆ “ದುನಿಯಾ’ ವಿಜಯ್‌ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರು ಒಂದೊಳ್ಳೆಯ ಕೆಲಸ ಮಾಡುವ ಮೂಲಕ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಅವರು ಹೆಜ್ಜೆಯನ್ನೂ ಇಟ್ಟಿದ್ದಾರೆ. ಸೀದಾ ಮ್ಯಾಟ್ರಿಗೆ ಬನ್ನಿ ಎಂದು ನೀವೇ ತಿದ್ದುವ ಮೊದಲೇ ಹೇಳಿಬಿಡೋದು ಒಳ್ಳೇದು.

Advertisement

ವಿಷಯ ಏನೆಂದರೆ, “ದುನಿಯಾ’ ವಿಜಯ್‌ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಇಬ್ಬರಿಗೆ ಆಟೋ ಕೊಡಿಸುವುದಕ್ಕೆ ಮುಂದಾಗಿದ್ದಾರೆ. ಆರ್‌. ಚಂದ್ರು ನಿರ್ದೇಶನದಲ್ಲಿ “ಕನಕ’ ಎಂಬ ಚಿತ್ರದಲ್ಲಿ ಆಟೋ ಡ್ರೈವರ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಒಂದು ಕಾರಣವಾದರೆ, ಕಳೆದ ವರ್ಷ ಅಗಲಿದ ಅವರ ಇಬ್ಬರು ಸ್ನೇಹಿತರಾದ ಅನಿಲ್‌ ಮತ್ತು ಉದಯ್‌ ಅವರ ನೆನಪಿನಲ್ಲಿ ನಾಗರಾಜ್‌ ಮತ್ತು ಶೇಖರ್‌ ಎಂಬುವವರಿಗೆ ತಮ್ಮ ಹುಟ್ಟುಹಬ್ಬದಂದು ಇಬ್ಬರಿಗೆ ಆಟೋ ಕೊಡಿಸುವುದಕ್ಕೆ ಮುಂದಾಗಿದ್ದಾರೆ.

ಇವರಲ್ಲಿ ಒಬ್ಬರು ಅಂಗವಿಕಲರಾದರೆ, ಮತ್ತೂಬ್ಬರರು ಅನಾಥರು. ಇಬ್ಬರೂ ಸದ್ಯಕ್ಕೆ ಬಾಡಿಗೆ ಆಟೋ ಓಡಿಸುತ್ತಿದ್ದಾರೆ. ಈ ಬಾರಿ, ಇಬ್ಬರಿಗೆ ಆಟೋ ಕೊಡಿಸಬೇಕು ಎಂದು
ತೀರ್ಮಾನಿಸದಾಗ, ಯಾರು ಅರ್ಹರು ಎಂದು ಪತ್ತೆ ಮಾಡಿದ್ದಾರೆ. ಕೊನೆಗೆ ಸೂಕ್ತ ಎಂದು ತೀರ್ಮಾನಿಸಿ, ಎರಡು ಆಟೋಗಳನ್ನು ಬುಕ್‌ ಮಾಡಿದ್ದಾರೆ.

ಆ ಎರಡೂ ಆಟೋಗಳನ್ನು, ವಿಜಯ್‌ ತಮ್ಮ ಹುಟ್ಟುಹಬ್ಬದಂದು ಇಬ್ಬರಿಗೂ ಕೊಡಲಿದ್ದಾರೆ. ಈ ಪೈಕಿ ಒಂದು ಆಟೋವನ್ನು ವಿಜಯ್‌ ಕೊಡಿಸುತ್ತಿದ್ದರೆ, ಇನ್ನೊಂದು ಆಟೋವನ್ನು ವಿಜಯ್‌ ಅವರ ಪತ್ನಿ ಕೀರ್ತಿ ಕೊಡಿಸುತ್ತಿರುವುದು ವಿಶೇಷ. ಕೀರ್ತಿ ತಾವು ದುಡಿದ ದುಡ್ಡಿನಲ್ಲಿ, ಒಂದಿಷ್ಟು ಹಣವನ್ನು ಕೂಡಿಟ್ಟು, ಆಟೋ ಕೊಡಿಸುವುದಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next