ಬುಧವಾರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ನಂತರ ವಿಧಾನ ಪರಿಷತ್ ಸಭಾಂಗಣಕ್ಕೆ ಭೇಟಿ ನೀಡಿ ವಿಶೇಷ ಛಾಯಾಚಿತ್ರಗಳು ಹಾಗೂ ವಿನ್ಯಾಸವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಸ್ಪೀಕರ್ ಕೆ.ಬಿ.ಕೋಳಿವಾಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುರಾಷ್ಟ್ರಪತಿಯವರಿಗೆ ಪರಿಷತ್ತಿನ ಸಭಾಂಗಣದ ವಿಶೇಷತೆ ವಿವರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ
ಪೇಟ, ಶಾಲು, ತಾಂಬೂಲ ಮತ್ತು ಗಾಂಧಿ ಪ್ರತಿಮೆ ನೀಡಿ ಸನ್ಮಾನಿಸಲಾಯಿತು. ರಾಜ್ಯ ಪಾಲ ವಜುಭಾಯ್ ವಾಲ, ಕೇಂದ್ರ ಸಚಿವ ಅನಂತಕುಮಾರ್, ಕಾನೂನು ಸಚಿವ ಟಿ.ಬಿ.ಜಯಚಂದ್ರ ಉಪಸ್ಥಿತರಿದ್ದರು. ನಂತರ ರಾಷ್ಟ್ರಪತಿಯವರು ಚಹಾ ಸೇವಿಸಿ ವಿಧಾನ ಪರಿಷತ್‌ನಿಂದ ತೆರಳಿ ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಉಭಯ ಸದನಗಳ ಸದಸ್ಯರ ಜತೆ ಫೋಟೋ ಸೆಷನ್‌ನಲ್ಲಿ ಭಾಗವಹಿಸಿ ದೆಹಲಿಗೆ ನಿರ್ಗಮಿಸಿದರು. ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಗಣ್ಯರು ಹಾಜರಿದ್ದು, ಬೀಳ್ಕೊಟ್ಟರು.