Advertisement

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಳಿಗೆ “ವಿದ್ಯಾಗಮನ’

10:08 PM Aug 24, 2020 | mahesh |

ಬೆಳ್ತಂಗಡಿ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಶಾಲೆಯೆಡೆಗೆ ಮಕ್ಕಳು ಆಗಮಿಸುವ ಹೊರತಾಗಿ ಪ್ರಸಕ್ತ 2020-21ನೇ ಸಾಲಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಸರಕಾರ ಮನೆಮನೆಗೆ ತಲುಪಿಸುವ ಕಾರ್ಯವನ್ನು ಶಿಕ್ಷಕರ ಮೂಲಕ ಕೈಗೊಂಡಿದೆ. ಕೊರೊನಾ ಕಾರಣ ಶಾಲೆಗಳ ಕದ ಮುಚ್ಚಿರುವ ಸಂದರ್ಭ ಈಗಾಗಲೇ ಬೆಳ್ತಂಗಡಿ ತಾಲೂಕಿನ 200 ಸರಕಾರಿ ಪ್ರಾಥಮಿಕ ಹಾಗೂ ಅನುದಾನಿತ ಶಾಲೆ, 43 ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ವಿದ್ಯಾಗಮ ನಿರಂತರ ಕಲಿಕೆ ಕಾರ್ಯಕ್ರಮದಲ್ಲಿ ಕಲಿಕೆ ಕೇಂದ್ರಗಳು ಆರಂಭಗೊಂಡಿದ್ದು, ಶಿಕ್ಷಕರು ಗುಡ್ಡಗಾಡು ಹತ್ತಿಯೂ ಮಕ್ಕಳನ್ನು ತಲುಪವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬೆಳ್ತಂಗಡಿ ತಾ|ನಲ್ಲಿ 1ರಿಂದ 10ರ ವರೆಗೆ ವರೆಗೆ 18,510 ಮಂದಿ ವಿದ್ಯಾರ್ಥಿಗಳು ಸರಕಾರಿ ಶಾಲೆ ಶಿಕ್ಷಣ ಪಡೆಯುತ್ತಿದ್ದು, ಖಾಸಗಿ ಶಾಲೆಗಳ ಪೈಕಿ 16,743 ಮಂದಿ ಸಹಿತ ಒಟ್ಟು 35,253 ವಿದ್ಯಾರ್ಥಿಗಳ ಸಂಖ್ಯಾಬಲವಿದೆ. ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 760 ಶಿಕ್ಷಕರು ಮತ್ತು 226 ಮಂದಿ ಶಿಕ್ಷಕರು ಸರಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ಕೆಲವು ಶಾಲೆಗಳಲ್ಲಿ 100 ವಿದ್ಯಾರ್ಥಿಗಳಿಗೆ ಎರಡರಿಂದ ಮೂರೇ ಶಿಕ್ಷಕರಿದ್ದು, ಗ್ರಾಮೀಣ ಭಾಗದ ಎಲ್ಲ ಮಕ್ಕಳನ್ನು ತಲುಪುವುದು ಸಾವಾಲೇ ಸರಿ. ಇದಕ್ಕಾಗಿ ಆಯಾಯ ಸ್ಥಳೀಯ ಶಾಲೆಗಳ ಶಿಕ್ಷಕರಿಗೆ ಗಮನ ಹರಿಸಲು ಸೂಚಿಸಲಾಗಿದೆ. ಇದು ಗ್ರಾಮೀಣ ಭಾಗಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ವಿದ್ಯಾಗಮ ಯೋಜನೆಯ ಭಾಗವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯಾರ್ಥಿಗಳ ಡಿಜಿಟಲ್‌ ಸೌಲಭ್ಯಗಳ ಸಮೀಕ್ಷೆ ನಡೆಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಗೂಗಲ್‌ ಮೀಟ್‌ನಲ್ಲಿ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳ ಸಭೆ ಕರೆದು ಡಿಜಿಟಲ್‌ ಸಂವಹನ ಹೊಂದಿರುವ ವಿದ್ಯಾರ್ಥಿಗಳ ವರದಿ ಸಿದ್ಧಪಡಿಸಿದ್ದಾರೆ.

ಸವಾಲಿನ ನಡುವೆಯೂ ಪರಿಶ್ರಮ
ಬೆಳ್ತಂಗಡಿ ತೀರಾ ಹಳ್ಳಿಗಾಡಾಗಿದ್ದರಿಂದ ನೆರಿಯಾ, ಬಾಂಜಾರುಮಲೆ, ಎಳನೀರು, ಕುತ್ಯಡ್ಕ, ಶಿಶಿಲ, ಕುತ್ಲೂರು, ನೇಲ್ಯಪಲ್ಕೆ ಸಹಿತ ಇನ್ನಿತರ ಪ್ರದೇಶಗಳಿಗೆ ಹತ್ತಾರು ಕಿ. ಮೀ. ನಡೆದು ಮಕ್ಕಳ ಮನೆಗಳನ್ನು ತಲುಪಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ಸಂಪರ್ಕವಿಲ್ಲದೆ ದ್ವೀಪಗಳಾಗುವ ಪ್ರದೇಶಗಳೂ ಇವೆ. ಇಷ್ಟಿದ್ದರೂ ಕೋವಿಡ್‌-19 ಪರಿಣಾಮದ ಹೊರತಾಗಿ ಶಿಕ್ಷಣ ಕ್ಷೇತ್ರ ಲವಲವಿಕೆ ಕಾಣುತ್ತಿರುವುದು ಶಿಕ್ಷಣ ಕ್ರಾಂತಿಯೇ ಸರಿ.

Advertisement

ಶಿಕ್ಷಕರು ನೀಡುವ ಚಟುವಟಿಕೆ ಮಕ್ಕಳಿಗೆ ತಲುಪುವಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ನೆಟ್‌ವರ್ಕ್‌. ಮತ್ತೂಂದೆಡೆ ಮೊಬೈಲ್‌ ಹೆತ್ತವರಲ್ಲಿ ಇದ್ದಲ್ಲಿ ಸಂಪರ್ಕ ಕೊರತೆ, ಶಾಲಾ ಶುಲ್ಕ ಭರಿಸಲು ಆಗದ ಸ್ಥಿತಿಯಲ್ಲಿರುವ ಹೆತ್ತವರಿಗೆ ಮಕ್ಕಳಿಗೆ ತಂತ್ರಜ್ಞಾನ ಹೊಂದಿಸುವುದೇ ಸವಾಲಾಗಿರುವ ನಡುವೆ ಕಾಡು ಮೇಡು ಅಲೆದು ಶಿಕ್ಷಕರು ತಲುಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

ಮೊಬೈಲ್‌, ತಂತ್ರಜ್ಞಾನ ಇಲ್ಲದವರನ್ನೂ ತಲು ಪುವ ದೃಷ್ಟಿಯಿಂದ ವಿದ್ಯಾಗಮ ತಾಲೂಕಿಗೆ ಬಹು ಅಮೂಲ್ಯವಾಗಿದೆ. ಸರಕಾರ “ವಿದ್ಯಾಗಮ’ ಯೋ ಜನೆ ರೂಪಿಸುವ ಮೊದಲೇ ತಾಲೂಕಿನಲ್ಲಿ ಶಿಕ್ಷಕರು ಮನೆ ಮನೆ ತೆರಳಿ ವಿದ್ಯಾಗಮ ರೀತಿಯಲ್ಲೇ ಕಾರ್ಯ ಪ್ರವೃತ್ತ ರಾಗಿದ್ದರು. ಇದು ಮತ್ತಷ್ಟು ಮಕ್ಕಳನ್ನು ತಲು ಪುವಲ್ಲಿ ಪ್ರಯೋಜನಕಾರಿಯಾಗಿದೆ ಎಂದೇ ಹೇಳಬಹುದು.

ಶಿಕ್ಷಕರ ಸ್ಪಂದನೆ ಗಮನಾರ್ಹ
ಕೋವಿಡ್‌-19 ನಡುವೆಯೂ ಒಂದು ಜನವಸತಿ ಪ್ರದೇಶದಲ್ಲಿ ಬೇರೆ ಶಾಲೆಗಳಿಗೆ ತೆರಳುವ ಮಕ್ಕಳಿದ್ದರೂ ಅವರಿಗೂ ಸ್ಥಳೀಯ ಶಿಕ್ಷಕರು ಶಿಕ್ಷಣ ಮಾರ್ಗದರ್ಶನ ನೀಡುವಂತೆ ಸರಕಾರ ಆದೇಶಿಸಿದೆ. ಬದಲಾಗಿ ವಿನಂತಿ ಮೇರೆಗೆ ಶಿಕ್ಷಕರ ಸ್ಪಂದನೆ ಗಮನಾರ್ಹ. ತಾಲೂಕಿನಲ್ಲಿ 19 ಕ್ಲಸ್ಟ್‌ರ್‌ಗಳ ಸಿಆರ್‌ಪಿಗಳು ಶಿಕ್ಷಕರಿಗೆ ಈ ಕುರಿತು ಮಾರ್ಗದರ್ಶನ ನೀಡಿದ್ದೇವೆ.
ತಾರಾಕೇಸರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next