Advertisement

ವಿದ್ಯಾಗಮ: ನಗರ ಪ್ರದೇಶದಲ್ಲಿ ಸ್ಥಳದ ಅಭಾವ ಸೃಷ್ಟಿ

01:22 PM Sep 13, 2020 | Suhan S |

ದೊಡ್ಡಬಳ್ಳಾಪುರ: ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ ವಿದ್ಯಾಗಮ ಯೋಜನೆ ನಗರ ಪ್ರದೇಶದಲ್ಲಿ ಕೆಲವು ತೊಡರುಗಳನ್ನು ಎದುರಿಸುತ್ತಿದ್ದು, ಯೋಜನೆ ಸಾಧಕ- ಬಾಧಕಗಳ ಬಗ್ಗೆ ಇಲಾಖೆ ಗಮನ ಹರಿಸಿ, ಶಾಲಾ ಶಿಕ್ಷಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ.

Advertisement

ವಿದ್ಯಾಗಮ ರೂಪು ರೇಷೆ: ಕೋವಿಡ್‌-19 ಕಾರಣದಿಂದಾಗಿ ಶಾಲೆ ಆರಂಭವಾಗದಿದ್ದರೂ ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತದೆ. ಮಕ್ಕಳ ಮನೆ ಅಸುಪಾಸಿನಲ್ಲಿನ ಅರಳಿ ಕಟ್ಟೆ, ಊರಿನ ಕಟ್ಟೆ, ಹಾಲ್, ದೇವಾಲಯದ ಆವರಣ ಹೀಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಮಕ್ಕಳನ್ನು ಸೇರಿಸಿ, ಕೋವಿಡ್‌ 19 ಮುಂಜಾಗ್ರತಾ ನಿಯಮ ಪಾಲಿಸಿ ಪಾಠಕ್ಕೆ ಸಂಬಂಧಿಸಿದ ವಿಚಾರ ತಿಳಿಸಲಾಗುತ್ತಿದೆ.

ನಗರ ಪ್ರದೇಶದಲ್ಲಿ ಸಮಸ್ಯೆ: ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯದ ಆವರಣ, ಅಶ್ವತ್ಥಕಟ್ಟೆ ಮೊದಲಾದ ಸಾರ್ವಜನಿಕರ ಪ್ರದೇಶಗಳಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿಯ ಸ್ಥಳಾವಕಾಶ ಕಡಿಮೆ. ಉದಾಹರಣೆಗೆ ನಗರದ ಕುಚ್ಚಪ್ಪನ ಪೇಟೆ ಅರಳಿ ಕಟ್ಟೆಯಲ್ಲಿ ಮಾರುಕಟ್ಟೆ ಚೌಕ ಶಾಲೆ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಮಕ್ಕಳ ಕಲಿಕೆಗೆ ಸೂಕ್ತ ಸ್ಥಳಾವಕಾಶವಿಲ್ಲ. ಮಳೆ, ಗಾಳಿ, ವಾಹನ ಸಂಚಾರ, ಜನ ಸಂಚಾರದತ್ತ ಮಕ್ಕಳು ಗಮನ ನೀಡುತ್ತಿದ್ದರೆ ಶಿಕ್ಷಕರಿಗೆ ಮಕ್ಕಳನ್ನು ಹಿಡಿದಿಡುವುದೇ ಕಷ್ಟ. ಈಗ ಇದೇ ಸ್ಥಳದ ಸಮೀಪ ಮಾರಮ್ಮ ದೇವಾಲಯದಲ್ಲಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದ್ದರೂ ಅಲ್ಲಿಯೂ ಸ್ಥಳಾವಕಾಶ ಕಡಿಮೆ ಇದೆ ಎಂದು ಪೋಷಕರು ದೂರಿದ್ದಾರೆ.

ಶಾಲೆಗಳಲ್ಲಿಯೇ ಅವಕಾಶ ನೀಡಿ: ಸೆ.21 ರಿಂದ 9 ರಿಂದ 12ರವರೆಗೆ ಶಾಲೆ ಆರಂಭಕ್ಕೆ ಕೇಂದ್ರ ಸರ್ಕಾರ ಚಂತನೆನಡೆಸಿದ್ದು, ಮಾರ್ಗಸೂಚಿ ಬಿಡುಗಡೆಯಾಗಲಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗುವುದು ಅನುಮಾನವಾಗಿದ್ದು, ಮಕ್ಕಳು ಶಾಲೆ ಸಂಪರ್ಕಕ್ಕಂತೂಬರುವ ವಾತಾವರಣ ಸೃಷ್ಟಿಯಾಗಲಿದೆ. ಅರಳಿ ಕಟ್ಟೆ , ದೇವಾಲಯದ ಆವರಣಗಳಿಗೆ ಹೋಲಿಸಿದರೆ, ಶಾಲೆಗಳಲ್ಲಿಯೇ ವಿಶಾಲವಾದ ಜಾಗವಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಿದೆ. ಹೀಗಾಗಿ ಮಕ್ಕಳನ್ನು ಪಾಳಿ ಪದ್ಧತಿಯಲ್ಲಿ ಕರೆಸಿ ಪಾಠ ಮಾಡಬಹುದಾಗಿದೆ. ಮಕ್ಕಳ ಸ್ಥಳದ ಆಯ್ಕೆ ಬಗ್ಗೆ ಶಾಲಾ ಶಿಕ್ಷಕಕರಿಗೆ ನಿರ್ಧಾರ ಕೈಗೊಳ್ಳಲು ಬಿಡಬೇಕು. ಒಟ್ಟಿನಲ್ಲಿ ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಅವಕಾಶ ಕಲ್ಪಿಸಬೇಕು ಎನ್ನುತ್ತಾರೆ ಪೋಷಕ ನಾಗರಾಜ್‌.

ಶಾಲೆಗಳಲ್ಲಿ ಪಾಠ ಪ್ರವಚನಗಳ ಕುರಿತಾಗಿನಮಗೆ ಸೂಚನೆ ಬಂದಿಲ್ಲ. ಕೋವಿಡ್‌-10ಮಾರ್ಗಸೂಚಿ ಪಾಲಿಸಿ, ಪಾಠ ಮಾಡಲು ಸೂಚಿಸಲಾಗಿದೆ. ಸರ್ಕಾರದ ಆದೇಶ ಬಂದರೆಶಾಲೆಗಳಲ್ಲಿಯೇ ಅವಕಾಶ ಕಲ್ಪಿಸಲಾಗುವುದು. ಬೈಯಪ್ಪರೆಡ್ಡಿ, ಕ್ಷೇತ್ರಶಿಕ್ಷಣಾಧಿಕಾರಿ

Advertisement

 

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next