Advertisement
ತಂದೆ ಅಥವಾ ತಾಯಿ ನಿರ್ದಿಷ್ಟ ಕೃಷಿ ಜಮೀನು ಹೊಂದಿದ್ದರೆ ಮಾತ್ರ ಅವರ ಮಕ್ಕಳು ವಿದ್ಯಾನಿಧಿ ಪಡೆಯಲು ಅರ್ಹರು. ವಿದ್ಯಾರ್ಥಿಯ ಅಜ್ಜ/ ಅಜ್ಜಿ/ ಮಾವ ಸಹಿತ ಇನ್ಯಾವುದೇ ಪೋಷಕರ ಹೆಸರಿನಲ್ಲಿದ್ದರೂ ವಿದ್ಯಾನಿಧಿ ಸಿಗುವುದಿಲ್ಲ ಎಂಬುದೇ ಈ ವಿದ್ಯಾರ್ಥಿವೇತನ ಪಡೆಯಲು ಅತೀ ದೊಡ್ಡ ಅಡ್ಡಿಯಾಗಿದೆ. ಕೇಂದ್ರ ಅಥವಾ ರಾಜ್ಯ ಸರಕಾರದ ಇತರ ಇಲಾಖೆಗಳಿಂದ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿ ಗಳಿಗೂ ವಿದ್ಯಾನಿಧಿ ಸಿಗುವುದಿಲ್ಲ. ಈ ಎರಡು ಷರತ್ತು ಗಳೇ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಪ.ಪೂ. ಶಿಕ್ಷಣ ಇಲಾಖೆಯ ಸೂಚನೆಯಂತೆ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್)ಯಲ್ಲಿ ಅಪ್‌ಡೇಟ್ ಮಾಡುತ್ತಿದ್ದೇವೆ. ಅಪ್‌ಡೇಟ್ ಮಾಹಿತಿಯನ್ನು ಕೃಷಿ ಇಲಾಖೆಯವರು ಪಡೆದು, ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಕೃಷಿಕ ಕುಟುಂಬದ ವಿದ್ಯಾರ್ಥಿಗಳ ಮಾಹಿತಿಯನ್ನು ಮಾತ್ರ ಅಪ್‌ಲೋಡ್ ಮಾಡುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದೇವೆ. ಕೃಷಿಕ ಕುಟುಂಬದ ವಿದ್ಯಾರ್ಥಿಗಳು ಯಾರು ಎಂಬುದನ್ನು ಕೃಷಿ ಇಲಾಖೆಯಿಂದ ದೃಢೀಕರಿಸಿ ವಿದ್ಯಾನಿಧಿ ನೀಡುತ್ತಾರೆ. ಜಮೀನಿನ ಮಾಹಿತಿ ಕೃಷಿ ಇಲಾಖೆಯಲ್ಲೇ ಇರುವುದರಿಂದ ಅಲ್ಲಿಂದಲೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ವಿವರ ನೀಡಿದ್ದಾರೆ.
Related Articles
Advertisement
ಆಧಾರ್ ಲಿಂಕ್ರಾಜ್ಯದ ಪದವಿಪೂರ್ವ ಮಟ್ಟದ ಸುಮಾರು 3,500 ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯೂ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿಲ್ಲ. ಬ್ಯಾಂಕ್ ಖಾತೆಗೆಲಿಂಕ್ ಆಗಿರುವ ಅರ್ಹ ವಿದ್ಯಾರ್ಥಿ ಗಳಿಗೆ ಮಾತ್ರ ವಿದ್ಯಾನಿಧಿ ಸಿಗಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲಾಗಿದೆ. ಉಳಿದ ಶೇ. 10ರಷ್ಟು ವಿದ್ಯಾರ್ಥಿಗಳ ಆಧಾರ್ ಲಿಂಕ್ ಕೂಡ ಶೀಘ್ರವೇ ಆಗಲಿದೆ. ಇದರ ಜತೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾನಿಧಿಯ ಕುರಿತು ಮಾಹಿತಿ ನೀಡುವ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳ ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಹಾಗೆಯೇ ಯಾರ ಹೆಸರಿನಲ್ಲಿ ಜಮೀನು ಇದೆಯೋ ಅವರ ಆಧಾರ್ ಕಡ್ಡಾಯವಾಗಿ ಬೇಕಾಗುತ್ತದೆ. ಇಲ್ಲಿ ಆದಾಯದ ಮಿತಿ ಇಲ್ಲ. ಜಮೀನು ಹೊಂದಿರುವ ಎಲ್ಲ ರೈತರ ಮಕ್ಕಳಿಗೂ ಇದರ ಸೌಲಭ್ಯ ಸಿಗಲಿದೆ.
-ಬ್ರಿಜೇಶ್ ಕುಮಾರ್, ಆಯುಕ್ತ, ಕೃಷಿ ಇಲಾಖೆ ಕೋರ್ಸ್, ಸಹಾಯ ಧನದ ವಿವರ (ವಾರ್ಷಿಕ)
-ಸ್ವಂತ ಕೃಷಿ ಭೂಮಿ ಹೊಂದಿ ರುವ ರೈತರ ಮಕ್ಕಳಾಗಿರಬೇಕು.
-ಸರಕಾರ ವಿಧಿಸಿದ ನಿರ್ದಿಷ್ಟ ಷರತ್ತುಗಳನ್ನು ಪೂರೈಸಿರಬೇಕು.
-2021-22ನೇ ಸಾಲಿಗೆ ಅನ್ವಯ -ರಾಜು ಖಾರ್ವಿ ಕೊಡೇರಿ