ರಬಕವಿ-ಬನಹಟ್ಟಿ: ಮುಂದಿನ ತಿಂಗಳು ನಡೆಯುವ ವಿಧಾನ ಪರಿಷತ್ ಚುನಾವಣೆಯ ನಿಮಿತ್ತವಾಗಿ ತಾಲ್ಲೂಕಿನ ವಿವಿಧ ಮತಗಟ್ಟೆಗಳನ್ನು ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಪರಿಶೀಲನೆ ಮಾಡಿದರು.
ಸೋಮವಾರ ಈ ಕುರಿತು ಅವರು ಮಾತನಾಡಿ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಆರು ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ರಬಕವಿ ಬನಹಟ್ಟಿಯಲ್ಲಿ ಮೂರು, ಇದರಲ್ಲಿ ಎರಡು ಹೆಚ್ಚುವರಿ ಮತಗಟ್ಟೆಗಳು, ತೇರದಾಳ, ಮಹಾಲಿಂಗಪುರ, ಸೈದಾಪುರಗಳಲ್ಲಿ ಒಂದೊಂದು ಮತಗಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ಕುರಿತು ಪರಿಶೀಲನೆಯನ್ನು ಮಾಡಲಾಗುತ್ತಿದೆ.
ಬನಹಟ್ಟಿಯ ಎಸ್ಟಿಸಿ ಕಾಲೇಜಿನಲ್ಲಿರುವ ಮತಗಟ್ಟೆಯನ್ನು ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸ್ಥಳಾಂತರಿಸಲಾಗುವುದು. ಅಲ್ಲಿಯೂ ಕೂಡಾ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು ಎಂದು ಡಾ.ಸಿದ್ದು ಹುಲ್ಲೊಳ್ಳಿ ತಿಳಿಸಿದರು.
ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ್ ಎಸ್.ಬಿ. ಇಂಗಳೆ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ಇದ್ದರು.
ಇದನ್ನೂ ಓದಿ : ವಿಜಯಪುರ: ತವರು ಮನೆಯವರಿಂದ ಜೀವ ಭಯ; ರಕ್ಷಣೆ ಕೋರಿದ ವಿಧವೆ