ಭವಿಷ್ಯದ ಯೋಜನೆಯಾಗಿದ್ದು, ಇದನ್ನು ಖಾಯಂಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಹಾಗೂ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ವರಲಕ್ಷ್ಮೀ ಹೇಳಿದರು.
Advertisement
ಸಿಐಟಿಯು ವತಿಯಿಂದ ಬನ್ನಂಜೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಅಕ್ಷರದಾಸೋಹ ನೌಕರರ 5ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದಲ್ಲಿಂದು ಸಾಮಾಜಿಕ ಅಸಮಾನತೆ, ಆದಾಯದ ತಾರತಮ್ಯದಿಂದ ಬಡತನ ಇದೆ. ಅಕ್ಷರದಾಸೋಹ ಯೋಜನೆಗೆ 2020- 21ನೇ ಸಾಲಿನಲ್ಲಿ 12,500 ಕೋ.ರೂ. ವೆಚ್ಚವಾಗಿದೆ. ಈ ಬಾರಿ ಮೊತ್ತವನ್ನು ಹೆಚ್ಚಿಸಬೇಕಿತ್ತು. ಆದರೆ 1,400 ಕೋ.ರೂ.ಗಳನ್ನು ಹಿಂಪಡೆದಿದ್ದಾರೆ. ಕಲ್ಯಾಣ ರಾಜ್ಯದ ಕಲ್ಪನೆ ಕೇವಲ ಭರವಸೆಗಷ್ಟೇ ಸೀಮಿತವಾಗುತ್ತಿದೆ ಎಂದರು. ದೇಶದಲ್ಲಿ 1.77 ಕೋಟಿ ಮಕ್ಕಳು ಹಾಗೂ ರಾಜ್ಯದಲ್ಲಿ 50ಲಕ್ಷ ಮಕ್ಕಳು ಅಕ್ಷರದಾಸೋಹ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿ ದ್ದಾರೆ. 26 ಲಕ್ಷ ಮಂದಿ ನೌಕರರಿದ್ದು, ಅವರಿಗೆ 2,600 ರೂ.ವೇತನ ನೀಡ ಲಾಗುತ್ತಿದೆ. ಆದರೆ 2011ರಿಂದಲೂ ಈ ವೇತನ ಹೆಚ್ಚಳವಾಗದಿರುವುದು ಮಾತ್ರ ವಿಪರ್ಯಾಸ ಎಂದರು. ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ಪಿ.ವಿಶ್ವನಾಥ ರೈ ಮಾತನಾಡಿ, ಸರಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಫಲಿತಾಂಶ ಸಿಗುವ ಹೋರಾಟಕ್ಕೆ ಮುಂದಾಗಬೇಕು. ಅಕ್ಷರದಾಸೋಹ ನೌಕರರಿಗೆ ಕನಿಷ್ಠ 21 ಸಾವಿರ ರೂ.ವೇತನ ನೀಡಬೇಕು ಎಂದು ಆಗ್ರಹಿಸಿದರು. ಈ ಯೋಜನೆ ಕೇಂದ್ರ ಸರಕಾರದ್ದೇ ಆದರೂ ಕೂಡ ಕೇಂದ್ರ ಸರಕಾರಿ ಅಕ್ಷರದಾಸೋಹ ನೌಕರರಿಗೆ 10 ವರ್ಷಗಳಿಂದಲೂ 10 ಪೈಸೆಯನ್ನೂ ಕೂಡ ಹೆಚ್ಚಳ ಮಾಡಲಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸು ಮಾಡಿದೆ ಎಂದರು.
Related Articles
Advertisement