ಮಂಗಳೂರು: ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ 7 ತಿಂಗಳು ಇರುವಾಗಲೇ ಸಂಭಾವ್ಯ ಅಭ್ಯರ್ಥಿಗಳು ಚುರುಕಾಗಿದ್ದು, ಅರ್ಹ ಪದವೀಧರ ಮತ್ತು ಶಿಕ್ಷಕರ ನೋಂದಣಿ ಕಾರ್ಯದ ಓಡಾಟದಲ್ಲಿ ನಿರತರಾಗಿದ್ದಾರೆ.
ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಡಿಕೇರಿಯ ಕೆ.ಕೆ. ಮಂಜುನಾಥ್ ಅವರನ್ನು ಕಾಂಗ್ರೆಸ್ ಘೋಷಿಸಿದ್ದು, ಪದವೀ ಧರ ಕ್ಷೇತ್ರಕ್ಕೆ ಅಂತಿಮ ಗೊಳಿಸಿಲ್ಲ. ಜೆಡಿಎಸ್‌ನ ಹಾಲಿ ಸದಸ್ಯ ಎಸ್.ಎಲ್. ಭೋಜೇಗೌಡ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗುತ್ತಿದ್ದರೆ, ಬಿಜೆಪಿ ಮಾತ್ರ ಮಗುಮ್ಮಾಗಿದೆ.
ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗ ಳೂರು, ಶಿವಮೊಗ್ಗ ಜಿಲ್ಲೆಗಳು ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಕ್ಷೇತ್ರ ಒಳಗೊಂಡಿದೆ.
ಕಳೆದ ಬಾರಿ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಅವರು ಬಿಜೆಪಿಯ ಕ್ಯಾ| ಗಣೇಶ್ ಕಾರ್ಣಿ ಕ್ ವಿರುದ್ಧ ಗೆದ್ದಿದ್ದರು. ಅವರೇ ಅಭ್ಯರ್ಥಿ ಯಾಗುವ ಸಾಧ್ಯತೆ ಅಧಿಕ. 2 ಬಾರಿ ಗೆದ್ದಿದ್ದ ಬಿಜೆಪಿಯ ಕ್ಯಾ| ಕಾರ್ಣಿಕ್ ಸಹ ಉತ್ಸಾಹದಲ್ಲಿದ್ದಾರೆ. ಮಂಗಳೂರು ವಿವಿಯ ಸಿಂಡಿಕೇಟ್ ಮಾಜಿ ಸದಸ್ಯ ರಾದ ಎಸ್.ಆರ್ ಹರೀಶ್ ಆಚಾರ್ಯ ಹಾಗೂ ಕೆ. ರಮೇಶ್ ಅವರೂ ಚರ್ಚೆಯಲ್ಲಿದ್ದಾರೆ.
ಮುಂಬರುವ ಕೇಂದ್ರ ಚುನಾವಣೆ ಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಸಂಭಾವ್ಯ ಮೈತ್ರಿ ಪರಿಣಾಮ ಜೆಡಿಎಸ್‌ಗೆ ಕೇತ್ರ ಬಿಟ್ಟುಕೊಡುತ್ತದೆಯೇ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಆದರೆ ಕಳೆದ ಬಾರಿ ಸೋತ ಬಿಜೆಪಿ ಈ ಬಾರಿ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ. ಹಾಗಾಗಿ ಕುತೂಹಲ ಮೂಡಿಸಿದೆ.
ಪದವೀಧರರ ಕ್ಷೇತ್ರವನ್ನು ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಸತತವಾಗಿ ಪ್ರತಿನಿಧಿಸಿದ್ದರು. ಕಳೆದ ಬಾರಿ ಬಿಜೆಪಿ ಯಿಂದ ಗೆದ್ದಿದ್ದ ಆಯನೂರು ಮಂಜು ನಾಥ್ ಈಗ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿ. ಅದೇ ಪಕ್ಷದ ಹಿಂದಿನ ಅಭ್ಯರ್ಥಿ ಶಿವಮೊ ಗ್ಗದ ದಿನೇಶ್ ಟಿಕೆಟ್ ನಿರೀಕ್ಷೆಯಲ್ಲಿದ್ದರೆ, ಬಿಜೆಪಿಯಿಂದ ಡಾ| ಗಣೇಶ್ ಸುರ್ಜೆ, ಕೆ. ರಘುಪತಿ ಭಟ್, ವಿಕಾಸ್ ಪುತ್ತೂರು ಸಹಿತ ಕೆಲವರ ಹೆಸರು ಚರ್ಚೆಯಲ್ಲಿದೆ.