Advertisement

ಕರ್ತವ್ಯ ನಿರ್ವಹಣೆಯಲ್ಲಿ ಲೋಪ : ಪೊಲೀಸ್ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಪೊಲೀಸ್ ಅಧಿಕಾರಿ

08:11 AM Sep 11, 2022 | Team Udayavani |

ಪಾಟ್ನಾ : ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳನ್ನು ಜೈಲಿಗೆ ಹಾಕುವುದು ಸಾಮಾನ್ಯ… ಆದರೆ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತನ್ನ ಐದು ಮಂದಿ ಠಾಣೆಯ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಬಿಹಾರದ ನಾವಾಡ ಪಟ್ಟಣದಲ್ಲಿ, ಅಲ್ಲದೆ ಈ ಘಟನೆಯ ದೃಶ್ಯವೂ ಕೂಡ ಠಾಣೆಯಲ್ಲಿ ಹಾಕಲಾದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

Advertisement

ಸಬ್​-ಇನ್​ಸ್ಪೆಕ್ಟರ್​ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್​ರೇಖಾ ಸಿಂಗ್, ಎಎಸ್​ಐ ಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಈ ಐವರು ಜೈಲಿನಲ್ಲಿರುವ ಸಿಬಂದಿಗಳು.

ಹಿರಿಯ ಪೊಲೀಸ್ ಅಧಿಕಾರಿಯ ಕಾರ್ಯವೈಖರಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದು… ಇದೊಂದು ವಿಷಾದಕರ ಬೆಳವಣಿಗೆ ಬಿಹಾರದ ಪೊಲೀಸ್ ಸಿಬ್ಬಂದಿಗಳ ಸಂಘ ಹೇಳಿಕೊಂಡಿದ್ದು ಅಲ್ಲದೆ ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಮನವಿ ಮಾಡಿದೆ.

ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಯು ಅವರನ್ನು ಲಾಕಪ್​ಗೆ ದೂಡಿ, ಬೀಗ ಜಡಿದಿದ್ದಾರೆ. ಪೊಲೀಸರು ಲಾಕಪ್​ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ. ‘ಇದು ವಿಷಾದಕರ ಬೆಳವಣಿಗೆ’ ಎಂದು ಹೇಳಿರುವ ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ‘ಬಿಹಾರ ಪೊಲೀಸ್ ಒಕ್ಕೂಟ’ವು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಎಸ್​ಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್​ಪಿ ಗೌರವ್ ಮಂಗ್ಲಾ ಕೆಲವು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಅದಕ್ಕಾಗಿ ಅವರನ್ನು ಜೈಲಿಗೆ ಹಾಕಿದ್ದೆ ಮಾಧ್ಯಮಗಳು ಅದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಿವೆ ಎಂದು ಹೇಳಿದ್ದಾರೆ.. ಅಲ್ಲದೆ ಠಾಣೆಯ ಜವಾಬ್ದಾರಿ ಹೊತ್ತಿರುವ ಇನ್​ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಸಹ ಎಸ್​ಪಿ ಹೇಳಿಕೆಯನ್ನು ಪುಷ್ಟೀಕರಿಸಿದ್ದಾರೆ.

Advertisement

ಇದನ್ನೂ ಓದಿ : ಏಷ್ಯಾ ಕಪ್‌ ಕ್ರಿಕೆಟ್‌: ಫೈನಲ್‌ ಸೆಣಸಾಟಕ್ಕೆ ಲಂಕಾ, ಪಾಕ್‌ ಸನ್ನದ್ಧ

Advertisement

Udayavani is now on Telegram. Click here to join our channel and stay updated with the latest news.

Next