ನ್ಯೂಯಾರ್ಕ್: ಮಾಜಿ ಅಮೆರಿಕನ್ ಗಾಲ್ಫ್ ಆಟಗಾರ್ತಿ ಪೈಜ್ ಸ್ಪಿರಾನಾಕ್ ಅವರು ಫುಟ್‌ಬಾಲ್ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ ಹಾಗೆಯೇ ಈಗ ನಡೆಯುತ್ತಿರುವ FIFA ವಿಶ್ವಕಪ್ 2022 ಅನ್ನು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಈ ವೇಳೆ, “ನಾನು ಯಾವಾಗಲೂ ಫುಟ್ಬಾಲ್ ಅಭಿಮಾನಿಯಾಗಿರಲಿಲ್ಲ, ಆದರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮೇಲಿನ ಪ್ರೀತಿ ನನ್ನನ್ನು ಆ ಕ್ರೀಡೆಯ ಕಡೆ ಒಲವು ಹೆಚ್ಚುವಂತೆ ಮಾಡಿತು ಎಂದಿದ್ದಾರೆ.
ವಿಶ್ವಕಪ್ ಫುಟ್ಬಾಲ್ ಹಬ್ಬವನ್ನು ಆಚರಿಸಲು ಮತ್ತು ರೊನಾಲ್ಡೊ ಅವರ ಮೇಲಿನ ಪ್ರೀತಿಯನ್ನು ತೋರಿಸಲು, ಆಕೆ ಇತ್ತೀಚೆಗೆ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ರೊನಾಲ್ಡೊ ಅವರಂತೆ ಫುಟ್ ಬಾಲ್ ಅನ್ನು ಗೋಲ್ ಗೆ ಒದ್ದು ತಮ್ಮ ಟಿಶರ್ಟ್ ಅನ್ನು ತೆಗೆದು ಎಸೆದು ಗೆಲುವಿನ ಸಂಭ್ರಮ ಆಚರಿಸುವ ಬಗೆಯನ್ನು ಅನುಸರಿಸಿದ್ದಾರೆ. ಆದರೆ, ಇಲ್ಲೊಂದು ತಿರುವು ಎಲ್ಲರ ಗಮನ ಸೆಳೆದಿದೆ.
ಪೈಜ್ ಸ್ಪಿರಾನಾಕ್ ಗೋಲ್ ಪೋಸ್ಟ್ ಮುಂದೆ ತಾನು ಹುಡುಗಿಯಾಗಿ ತನ್ನ ಟಾಪ್ ತೆಗೆದು ರೊನಾಲ್ಡೊ ರೀತಿಯಲ್ಲಿಯೇ ಸಂಭ್ರಮಾಚರಣೆ ಮಾಡಿದ್ದು ಎಲ್ಲೆಡೆ ಸುದ್ದಿಯಾಗುತ್ತಿದೆ.
Related Articles
“ಅರ್ಹತೆ ಖಾತ್ರಿಯಾಗಿದೆ, ಆದರೆ ನಾವು 1 ನೇ ಸ್ಥಾನವನ್ನು ಬಯಸುತ್ತೇವೆ. ಈ ತಂಡ ಅಥವಾ ನಮ್ಮ ಗುರಿಗಳಿಗೆ ಯಾವುದೇ ಮಿತಿಗಳಿಲ್ಲ. ಹೆಚ್ಚಿನದಕ್ಕಾಗಿ ಹೋರಾಡೋಣ ! ಪೋರ್ಚುಗಲ್ ನಮ್ಮ ಶಕ್ತಿ ” ಎಂದು ರೊನಾಲ್ಡೊ ಬರೆದುಕೊಂಡಿದ್ದಾರೆ.
ಶುಕ್ರವಾರ ನಡೆಯಲಿರುವ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಅವರು ಮೈದಾನಕ್ಕಿಳಿಯುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.