ಬೀಜಿಂಗ್ : ಇಲ್ಲಿಂದ ಹೆಂಗ್ಯಾಂಗ್‌ಗೆ ಹಾರುತ್ತಿದ್ದ ಏರ್ ಚೀನಾದ ವಿಮಾನದಲ್ಲಿ ಏರ್ ಚೀನಾ ಪ್ರಯಾಣಿಕರು ರೆಕ್ಕೆಗಳ ಸ್ಕ್ರೂಗಳು ಸಡಿಲವಾಗಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿ ಭಾರಿ ಸುದ್ದಿಯಾಗುವಂತೆ ಮಾಡಿದ್ದಾರೆ.
ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆ ವೈಬೊದಲ್ಲಿ ಪೋಸ್ಟ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಏರ್‌ಲೈನ್ ಹೇಳಿಕೆ ನೀಡುವ ಅನಿವಾರ್ಯತೆಗೆ ಸಿಲುಕಿಸಿತು. ಏರ್ ಚೀನಾ, ತನ್ನ ಬೋಯಿಂಗ್ 737-NG ಪ್ರಯಾಣಿಕ ವಿಮಾನವೊಂದರಲ್ಲಿ ಸಡಿಲವಾಗಿದ್ದ ವಿಂಗ್ ಸ್ಕ್ರೂಗಳನ್ನು ಸರಿಪಡಿಸಿದೆ ಎಂದು ಹೇಳಿದೆ.
ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಿರುವ ಏರ್ ಚೀನಾ ವಿಮಾನ ಎಡ ರೆಕ್ಕೆಗಳಲ್ಲಿ ಇನ್‌ಬೋರ್ಡ್ ಕ್ಯಾನೋ ಫೇರಿಂಗ್‌ನಲ್ಲಿನ ಸಡಿಲವಾದ ಸ್ಕ್ರೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಮತ್ತು ತಕ್ಷಣವೇ ವಿಮಾನದ ಸಂಬಂಧಿತ ಭಾಗಗಳನ್ನು ಪರಿಶೀಲಿಸಿ ಸರಿಪಡಿಸಿತು ಎಂದು ಹೇಳಿಕೆ ತಿಳಿಸಿದೆ.