Advertisement

ಗೆಲುವಿನ ಕತೆ  ರಮೇಶ್‌ ಜೊತೆ…

06:19 PM Mar 27, 2018 | |

ಭಾವನೆಗಳ ಚಿತ್ರಕಾರನಾಗಿ ಮೋಡಿ ಮಾಡುವ ಅಭಿನಯ ಚತುರ, ರಮೇಶ್‌ ಅರವಿಂದ್‌. ಅವರ ಚಿತ್ರಗಳಲ್ಲಿ ಭಾವುಕತೆಯ ಪಿಸುಮಾತೇ ಹೆಚ್ಚು. ನವಿಲುಗರಿಯಂಥ ಪ್ರೀತಿಯನ್ನು ನಮ್ಮಗಳ ಹೃದಯಕ್ಕೆ ಸವರುತ್ತಾ, ಹಾಗೆ ಪಿಸುಗುಟ್ಟಿದ ನಟ ಇಂದು ಒಬ್ಬ ಸ್ಫೂರ್ತಿದಾಯಕ ಭಾಷಣಕಾರರಾಗಿ ಎಲ್ಲರನ್ನೂ ಸೆಳೆಯುತ್ತಿದ್ದಾರೆ. “ಯುವ ಕರ್ನಾಟಕ’ ಎನ್ನುವ ಹೆಸರಿನಲ್ಲಿ ರಮೇಶ್‌ ಅವರು ಆರಂಭಿಸಿರುವ ಸ್ಫೂರ್ತಿದಾಯಕ ಭಾಷಣಗಳು ಎಲ್ಲೆಡೆ ಸುದ್ದಿ ಮಾಡುತ್ತಿದೆ. www.facebook.com/actor.ramesh.aravind ಎಂಬ ಅವರ ಫೇಸ್‌ಬುಕ್‌ ಪುಟದ ಮೂಲಕ ಯುವಜನರನ್ನು ಅವು ತಲುಪುತ್ತಿವೆ. “ಜೋಶ್‌’ಗಾಗಿ ರಮೇಶ್‌ ಅವರು ಸ್ಫೂರ್ತಿದಾಯಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ಜೋಶ್‌ನಲ್ಲಿ ಇನ್ನು ಮುಂದೆ ಒಬ್ಬೊಬ್ಬರು ತಾರೆಗಳು “ಗೆಲುವಿನ ಕತೆ’ ಹಂಚಿಕೊಳ್ಳಲಿದ್ದಾರೆ…

Advertisement

ನೀವೆಲ್ಲರೂ “ಐ ವಾಂಟ್‌ ಟು ಬಿ ರಿಚರ್‌, ಸ್ಮಾರ್ಟರ್‌, ಹ್ಯಾಪಿಯರ್‌’ ಆಗಲು ಬಯಸುತ್ತೀರಿ. ನನ್ನ ಶೋನಲ್ಲಿ ವಿಜಯ್‌ ಸಂಕೇಶ್ವರ್‌ ಬಂದಿದ್ದರು. ಐದು ಸಾವಿರ ಲಾರಿಗಳಿವೆ, ಅವರ ಹತ್ತಿರ. ಒನ್‌ ಆಫ್ ದಿ ರಿಚೆಸ್ಟ್‌ ಪೀಪಲ್‌ ಇನ್‌ ಕರ್ನಾಟಕ. ನಾನು ಅವರನ್ನು ಕೇಳಿದ ಮೊದಲ ಪ್ರಶ್ನೆ; “ಸರ್‌ ದುಡ್ಡು ಹೆಂಗೆ ಮಾಡೋದು?’. ಅದಕ್ಕೆ ಅವರು ಹೇಳಿದ್ರು, “ದುಡ್ಡು ಮಾಡ್ಬೇಕು ಅಂದ್ರೆ, ದುಡ್ಡಿನ ಹಿಂದೆ ನೀನು ಓಡ್ಬೇಡ. ಆದರೆ, ಓಡೋದನ್ನು ನಿಲ್ಲಿಸ್ಬೇಡ, ಅಷ್ಟೇ’ ಅಂದ್ರು.

   ದುಡ್ಡಿನ ಹಿಂದೆ ಓಡ್ಬೇಕಾಗಿಲ್ಲ. ಆದರೆ, ನೀವು ಏನು ಕೆಲಸ ಮಾಡುತ್ತಿದ್ದೀರೋ, ಅದನ್ನು ಶ್ರದ್ಧೆಯಿಂದ ಮಾಡಿ. ಈಗ ನಿಮ್‌ ಕೆಲಸ ಏನು? ಸೆಕೆಂಡ್‌ ಪಿಯುಸಿ ಪಾಸ್‌ ಮಾಡೋದು. ಆ ಕೆಲಸವನ್ನು ನೀವು ಪರ್ಫೆಕ್ಟಾಗಿ ಮಾಡಿದ್ರೆ, ದುಡ್ಡು ಆಟೋಮ್ಯಾಟಿಕ್‌ ಆಗಿ ನಿಮ್ಮ ಹಿಂದೆ ಬಂದೇ ಬರುತ್ತೆ. ಇನ್ನು ಎರಡನೇ ಸಂಗತಿ… ಸ್ಮಾರ್ಟರ್‌. “ಹೌ ಡು ಯು ಬಿಕೇಮ್‌ ಸ್ಮಾರ್ಟರ್‌?’. ನೀವೆಲ್ಲರೂ ನೋಡಲು ಸ್ಮಾರ್ಟ್‌ ಆಗಿ ಕಾಣಿರ. ಭಯಂಕರ ಜಾಣರ ಥರ ಕಾಣಿರ. ಆದರೆ, ಇಷ್ಟೇ ಸಾಲೋದಿಲ್ಲ. ಇದಕ್ಕಿಂತ ಸ್ಮಾರ್ಟ್‌ ಆಗ್ಬೇಕು ನೀವು. ಅದ್ಹೇಗೆ?

  ಒಬ್ಬ ಗರಗಸ ತಗೊಂಡು ಬರ್ತಾನೆ. ಮರ ನೋಡ್ತಾನೆ, ಕುಯ್ತಾನೆ, ಕುಯ್ತಾನೆ, ಕುಯ್ತಾನೆ… 8 ಗಂಟೆ ಬೇಕಾಗುತ್ತೆ, ಆಗ ಮರ ಬೀಳುತ್ತೆ. ಇನ್ನೊಬ್ಬ ಬರುತ್ತಾನೆ. ಮೊದಲು ಗರಗಸ ನೋಡ್ತಾನೆ, “ಅಯ್ಯೋ, ಶಾರ್ಪ್‌ ಇಲ್ವಲ್ಲ ಗರಗಸ’ ಅಂತ. ಅರ್ಧ ಗಂಟೆ ಗರಗಸವನ್ನು ಶಾರ್ಪ್‌ ಮಾಡ್ತಾನೆ. ಆಮೇಲೆ ಮರ ಕುಯ್ಯಲು ಶುರುಮಾಡ್ತಾನೆ. ಒಂದೇ ಗಂಟೇಲಿ ಆ ಮರ ಬೀಳುತ್ತೆ. ದಟ್‌ ಈಸ್‌ ಕಾಲ್ಡ್‌ ಶಾರ್ಪನಿಂಗ್‌ ದಿ ಟೂಲ್ಸ್‌ ಅಂತ. “ಬೆಳಗ್ಗಿಂದ ಓದಿದೇ ಗುರುವೇ…’ ಅಂತೆಲ್ಲ ಹೇಳುವವರನ್ನು ಕೇಳಿರುತ್ತೀರಿ. ವೇಸ್ಟ್‌ ಅದು. ಹೇಗೆ ಓದ್ತಾ ಇದ್ದೀರ ಅನ್ನೋದು ಮುಖ್ಯ. ದಟ್‌ ಈಸ್‌ ಕಾಲ್ಡ್‌ ಶಾರ್ಪನಿಂಗ್‌ ದಿ ಸ್ಕಿಲ್ಸ್‌ ಅಂತ. ನಮಗೆ ಗೊತ್ತಿರೋ ವಿಚಾರವನ್ನು ಇನ್ನೂ ಶ್ರೇಷ್ಠವಾಗಿ ಹೇಗೆ ಮಾಡಬಹುದು? ಅನ್ನೋದು ಒಂದು ಕಲೆ.

  ಈಗಿನ ಪ್ರಪಂಚದಲ್ಲಿ ಮಲ್ಟಿಪಲ್‌ ಸ್ಕಿಲ್ಸ್‌ ಗೊತ್ತಿರಬೇಕು. ಒಂದು ಸ್ಕಿಲ್‌ ಗೊತ್ತಿದ್ರೆ, ಸಾಲೋದಿಲ್ಲ. ಈಗ ನಾನು “ಬಟರ್‌ ಫ್ಲೈ’ ಅಂತ ಒಂದು ಫಿಲ್ಮನ್ನು ಡೈರೆಕ್ಟ್ ಮಾಡ್ತಿದ್ದೀನಿ. ಈ ಫಿಲ್ಮು ಕನ್ನಡ, ತಮಿಳು, ತೆಲುಗು, ಮಲಯಾಳಂ- ಈ ನಾಲ್ಕು ಭಾಷೇಲೂ ಬರುತ್ತಿದೆ. ಆ ಚಿತ್ರಕ್ಕೆ ಎಂಥ ಡೈರೆಕ್ಟರ್‌ ಬೇಕು ಅಂದ್ರೆ, ಅವರಿಗೆ ಕನ್ನಡ ಗೊತ್ತಿರಬೇಕು, ತಮಿಳು ಗೊತ್ತಿರಬೇಕು, ತೆಲುಗೂನೂ ತಿಳಿದಿರಬೇಕು ಮತ್ತು ಮಲಯಾಳಂ ಗೊತ್ತಿರಬೇಕು. ಇವೆಲ್ಲ ಗೊತ್ತಿದ್ದವರಿಗಷ್ಟೇ ಆ ಸ್ಥಾನ ಸಿಗುತ್ತೆ. ಹಾಗಾಗಿ, ಹೆಚ್ಚುವರಿ ಕೌಶಲಗಳನ್ನು ತಿಳಿದುಕೊಂಡಿರಿ. ನಿಮಗೆ ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥ್ಸ್ ಬೇಕಾಗುತ್ತೆ, ಅವನ್ನೆಲ್ಲ ಓದಿಕೊಳ್ಳಿ. ಅದರ ಜೊತೆ ಜೊತೆಗೆ, ನೀವು ಏನು ಹೊಸದಾಗಿ ಕಲಿತರೂ, ಅದು ಭಾಷೆ ಇರಬಹುದು, ಸಂಗೀತ ಇರಬಹುದು, ಕೋಡಿಂಗ್‌ ಇರಬಹುದು, ಎನಿತಿಂಗ್‌… ಅದು ನಿಮಗೇ ಗೊತ್ತಿಲ್ಲದ ರೀತಿಯಲ್ಲಿ ಸಹಾಯ ಮಾಡುತ್ತವೆ.

Advertisement

ಐ ವಾಂಟ್‌ ಹ್ಯಾಪಿಯರ್‌…
ನಾನು ಅದೆಷ್ಟೋ ಶ್ರೀಮಂತರನ್ನು ನೋಡಿದ್ದೇನೆ. ಅವರಲ್ಲಿ ಅನೇಕರು ಹ್ಯಾಪಿಯೇ ಆಗಿರೋದಿಲ್ಲ. ಖುಷಿ ಅನ್ನೋದು ಏನು? ನನಗೆ “ವೀಕೆಂಡ್‌ ವಿತ್‌ ರಮೇಶ್‌’ನಲ್ಲಿ ಅದರ ರಹಸ್ಯ ಗೊತ್ತಾಯ್ತು. ಸಾಧಕರೆಲ್ಲ ತಮ್ಮ ತಲೆಯಲ್ಲಿ ಏನಿದೆಯೋ ಅದನ್ನೇ ಮಾತಾಡ್ತಾರೆ, ಏನು ಮಾತಾಡ್ತಾರೋ, ಅದನ್ನೇ ಮಾಡ್ತಾರೆ. ಕೆಲವರು ತಲೆಯಲ್ಲಿ ಒಂದು ಇಟ್ಕೊಂಡು, ಬಾಯಿಯಲ್ಲಿ ಇನ್ನೇನೋ ಹೇಳಿ, ಬಾಯಿಯಲ್ಲಿ ಹೇಳಿದ್ದನ್ನು ಬಿಟ್ಟು, ಇನ್ನೇನನ್ನೋ ಮಾಡ್ತಾರೆ. ಈ ಸಿಂಕ್‌ ಇಲ್ಲದೇ ಇದ್ದಾಗ ಖುಷಿಯ ಕೊರತೆ ಕಾಣುತ್ತೆ.

   ಪ್ರತಿಯೊಬ್ಬರೂ ನಿಮಗೆ ನೀವೇ ಹೇಳ್ಕೊಳಿ, “ಐ ಆ್ಯಮ್‌ ಸ್ಪೆಷೆಲ್‌’ ಅಂತ. “ನಾನು ಆರ್ಡಿನರಿ, ಅವನ ಮುಂದೆ ನಾನು ಏನೂ ಇಲ್ಲ. ಅವನ ಹಿನ್ನೆಲೆ ನನಗಿಲ್ಲ’ ಅನ್ನೋರನ್ನು ಕೇಳಿದ್ದೇನೆ. ಮೊದಲು ಅದನ್ನು ಬಿಟಾಕಿ. ನಿಮ್ಮಲ್ಲೇ ಒಂದು ಪ್ರತ್ಯೇಕ ಶಕ್ತಿಯಿದೆ, ಅದನ್ನು ನೀವು ನಂಬಬೇಕು… ದಟ್‌ “ಯು ಆರ್‌ ಸ್ಪೆಷೆಲ್‌’ ಅಂತ. ಮಲ್ಟಿಪಲ್‌ ಇಂಟೆಲಿಜೆನ್ಸ್‌ ಅಂತ ಇದೆ. ಮಾರ್ಕ್ಸ್ ತಗೊಳ್ಳೋದು, ಅದು ಒಂದು ರೀತಿಯ ಇಂಟೆಲಿಜೆನ್ಸ್‌. ಕೆಲವರಿಗೆ ಮ್ಯೂಸಿಕ್‌ನಲ್ಲಿ ಇಂಟೆಲಿಜೆನ್ಸ್‌ ಇರುತ್ತೆ, ಕೆಲವರು ಪಜಲ್ಸ್‌ಗಳನ್ನೆಲ್ಲ ತುಂಬಾ ಸಲೀಸಾಗಿ ಸಾಲ್‌Ì ಮಾಡ್ತಿರ್ತಾರೆ, ಅಂಥವರು ಡಿಟೆಕ್ಟಿವೋ, ಸಿಐಡಿಗಳ್ಳೋ ಆದ್ರೆ ಅವರಿಗೆ ಒಳ್ಳೆಯ ಭವಿಷ್ಯ ಇರುತ್ತೆ. ತಮ್ಮ ಆಸಕ್ತಿಗೆ ಸಂಬಂಧಪಟ್ಟ ಕೆರಿಯರ್‌ ಅನ್ನು ಅವರು ಆರಿಸಬೇಕು. ಆ ಇಂಟೆಲಿಜೆನ್ಸ್‌ನ ನೀವು ಗೌರವಿಸಬೇಕು. ಈಗ ನನಗೆ ಕೃಷಿ ಬರೋಲ್ಲ, ನಿಮಗೆ ಕೃಷಿ ಬರುತ್ತೆ ಅಂದ್ರೆ ನನಗಿಂತ ನೀವು ಬುದ್ಧಿವಂತರು ಆ ಕ್ಷೇತ್ರದಲ್ಲಿ. ಇದು ಇಂಟೆಲಿಜೆನ್ಸ್‌. ಇದು ನನಗೆ ಕಂಫ‌ರ್ಟೆಬಲ್‌ ಆಗಿದೆ. ಈ ಕೆಲಸವನ್ನು ನಾನು ಮಿಕ್ಕವರಿಗಿಂತ ಚೆನ್ನಾಗಿ ಮಾಡಬಲ್ಲೆ… ಯಾವ ಇಂಟೆಲಿಜೆನ್ಸ್‌ ಇದೆಯೋ ಆ ಇಂಟೆಲಿಜೆನ್ಸ್‌ನ ಕೆರಿಯರ್‌ ಅನ್ನು ನೀವು ಆರಿಸಿಕೊಂಡರೆ, ಅದರಲ್ಲಿ ಯಶಸ್ವಿ ಆಗ್ತಿàರ. ಇಂಟೆಲಿಜೆನ್ಸ್‌ ಇಲ್ಲದೇ ಇದ್ದ ಕಡೆ ನಿಮಗೆ ಅದೃಷ್ಟ ಇದ್ದರೂ ಅಲ್ಲಿ ನೀವು ಗೆಲ್ಲೋಕೆ ಆಗೋಲ್ಲ. 
 
ಈ ಅದೃಷ್ಟ ಅಂದ್ರೆ ಏನ್ರೀ?
ಲಕ್‌ ಇಲ್ಲದೇ ಒಂದು ಆಟ ಗೆಲ್ಲೋಕೆ ಆಗುತ್ತಾ? ಕ್ರಿಕೆಟ್‌ನಲ್ಲಿ ಲಕ್‌ ಇದೆ; ಹಾಕಿಯಲ್ಲಿ ಲಕ್‌ ಇದೆ. ಅದೃಷ್ಟನೇ ಇಲ್ಲದೆ, ಒಂದು ಆಟವನ್ನು ಕಂಡುಹಿಡೀಬೇಕು ಅಂತ ಆಸೆಪಟ್ಟ ಒಬ್ಬ ರಾಜ. ಮಂತ್ರಿಯನ್ನು ಕರೆದ, “ಅದೃಷ್ಟ ಇರಬಾರದು. ಅಂಥದ್ದೊಂದು ಆಟ ಕಂಡಿØಡಿ’ ಅಂತ ಹೇಳಿದ. ಆ ಮಂತ್ರಿ ಕಂಡು ಹಿಡಿದಿದ್ದೇ, ಈ ಚೆಸ್‌. ಬರೀ ಯೋಚನೆ ಮಾಡೋದು, ದಳಗಳನ್ನು ನಡೆಸೋದೋ, ನಡೆಸ್ತಾ ಇರೋದಷ್ಟೇ. ರಾಜನಿಗೆ ಬಹಳ ಖುಷಿ ಆಯ್ತು. “ಏಯ್‌… ನಿನಗೆ ಏನ್‌ ಬೇಕಾದ್ರೂ ಕೇಳ್ಳೋ, ಕೊಡ್ತೀನಿ’ ಅಂದ. ಮಂತ್ರಿ, “ನನಗೇನೂ ಬೇಡ ಸರ್‌’ ಅಂದ. “ಏಯ್‌… ನಾನು ರಾಜ… ಏನ್‌ ಬೇಕಾದ್ರೂ ಕೇಳ್ಳೋ, ಕೊಡ್ತೀನಿ’ ಅಂದ. ಅದಕ್ಕೆ ಮಂತ್ರಿ, “ಒಂದು ಕೆಲ್ಸ ಮಾಡಿ… ಈ ಚದುರಂಗ ಬೋರ್ಡ್‌ ಇದೆಯಲ್ಲ… ಈ ಬೋರ್ಡಿನ ಮೊದಲ ಚೌಕಕ್ಕೆ ಒಂದೇ ಒಂದು ಅಕ್ಕಿ ಕಾಳು ಕೊಡಿ… ಎರಡನೇ ಚೌಕಕ್ಕೆ ಅದನ್ನು ಡಬಲ್‌ ಮಾಡಿ ಎರಡು ಕೊಡಿ. ಮೂರನೇ ಚೌಕಕ್ಕೆ ಅದನ್ನು ಡಬಲ್‌ ಮಾಡಿ, ನಾಲ್ಕು ಕೊಡಿ… ಹೀಗೆ ಡಬಲ್‌ ಮಾಡಿ ಮಾಡಿ, ಕೊನೆಯ ಚೌಕದ ವರೆಗೂ ಕೊಟಿºಡಿ’ ಅಂದ. ಅದಕ್ಕೆ ರಾಜ, “ಅಷ್ಟೇನಾ? ಇದೇನ್ರೀ ಇದು, ನಾನ್‌ ರಾಜಾ… ಇಷ್ಟು ಅಲ್ಪ ಆಸೆ ಇಟ್ಕೊಂಡಿದ್ದೀರಲ್ಲ’ ಅಂತ ಹೇಳಿ, ಅಕ್ಕಿ ಕಾಳು ಕೊಡಲು ಶುರುಮಾಡಿದ. 1, 2, 4, 8, 16, 32, 64, 128… ಹೋಗ್ತಾ ಹೋಗ್ತಾ 64ನೇ ಚೌಕಕ್ಕೆ ಬರಬೇಕಾದ್ರೆ, ಇಡೀ ರಾಜ್ಯವನ್ನೇ ಆತ ಮಂತ್ರಿಗೆ ಕೊಡ್ಬೇಕಾಗಿ ಬಂತು. ದಟ್‌ ಈಸ್‌ ದಿ ಪವರ್‌ ಆಫ್ ದಿ ಕಾಂಪೌಂಡಿಂಗ್‌.

ಇಂದೇ ಡಿಸೈಡ್‌ ಮಾಡಿ….
ನೀವು ಈಗಲೇ ಡಿಸೈಡ್‌ ಮಾಡಿ, ಇವತ್ತು ಬ್ಯಾಂಕ್‌ ಖಾತೆಗೆ 100 ರೂ. ಹಾಕ್ತೀನಿ ಅಂತ. ಪ್ರತಿ ತಿಂಗಳೂ ನೀವು ಹಾಕೆºàಕು. ನೋಡಿ, ಕೊನೆಯಲ್ಲಿ ಆ ಅಮೌಂಟ್‌ ಎಲ್ಲಿಗೆ ಬಂದು ನಿಲ್ಲುತ್ತೆ ಅಂತ. ಅದೇ ಥರ ನೀವು ಈ ವಯಸ್ಸಿನಲ್ಲಿ ಏನು ಬೇಕಾದ್ರೂ ಶುರುಮಾಡಿ, ಅದು ಪಬ್ಲಿಕ್‌ ಸ್ಪೀಕಿಂಗ್‌ ಇರಬಹುದು, ಆ್ಯಕ್ಟಿಂಗ್‌ ಇರಬಹುದು, ಮ್ಯಾಥ್ಸ್ ಇರಬಹುದು, ಫಿಸಿಕ್ಸ್‌ ಇರಬಹುದು, ಈ ವಯಸ್ಸಿನಲ್ಲಿ ನೀವು ಶುರುಮಾಡಿದ್ರೆ, ಕೊನೆಯ ಚೌಕಕ್ಕೆ ಬಂದಾಗ ಯಾರೂ ನಿಮ್ಮನ್ನು ಹಿಡಿಯೋಕೇ ಆಗೋಲ್ಲ. ನೀವು ಎಲ್ಲಿಂದ ಬೇಕಾದ್ರೂ ಶುರುಮಾಡಬಹುದು, ನನ್ನ ವಯಸ್ಸಿನಿಂದಲೂ ಶುರುಮಾಡಬಹುದು. ಆದರೆ, ನನ್ನ ಏಜ್‌ನಲ್ಲಿ ಶುರುಮಾಡಿದರೆ, ನಿಮ್ಮ ಏಜ್‌ನಲ್ಲಿ ಶುರುಮಾಡಿರ್ತಾನಲ್ಲ, ಅವನನ್ನು ನೀವು ಹಿಡಿಯೋಕೇ ಆಗಿರೋಲ್ಲ. ಕಾರಣ, ಎಕ್ಸ್‌ಪೋನಿನ್ಷಿಯಲಿ ಗ್ರೌತ್‌ ಆಗಿರ್ತಾನೆ. ಹಾಗಾಗಿ, ಏನೇ ಮಾಡೋದಿದ್ರೂ ಈಗಲೇ ಮಾಡಿ. ಇಲ್ಲಾಂದ್ರೆ, 40 ವರ್ಷ ಆದಾಗ ಕೊರಗ್ತಿàರ… “ನಾನು ಚಿಕ್ಕವಯಸ್ಸಿನಲ್ಲೇ ಸಾಧಿಸಬೇಕಾಗಿತ್ತಯ್ಯ, ಈಗ 20 ವರ್ಷ ಉರುಳಿಬಿಟ್ಟಿದೆ’ ಅಂತ. ನಿಮ್ಮಿಂದ ಆ 20 ವರ್ಷ ಕ್ಯಾಚ್‌ ಮಾಡೋಕ್ಕಾಗಲ್ಲ. ಒಂದು ಶಿಸ್ತು ಇಟ್ಕೊàಳಿ, ನಾನು ಇಷ್ಟು ಸಂಪಾದಿಸ್ತೀನಿ, ಇಷ್ಟು ಖರ್ಚು ಮಾಡ್ತೀನಿ, ಇಷ್ಟು ಸೇವ್‌ ಮಾಡ್ತೀನಿ, ಇಷ್ಟು ಸಮಾಜಕ್ಕೆ ಕೊಡ್ತೀನಿ ಅಂತ ಮೆಂಟಲಿ ಫಿಕ್ಸ್‌ ಆಗಿºಡಿ. 

ಫ್ರೀಡಂ ಹಿಂದೆ ಅದಿರುತ್ತೆ…
ನೀವು ಅಮೆರಿಕದ ಸ್ಟಾಚು ಆಫ್ ಲಿಬರ್ಟಿಯ ಚಿತ್ರ ನೋಡಿದ್ದೀರಿ. ಇದು ಅಮೆರಿಕದ ಒಂದು ಕರಾವಳಿಯಲ್ಲಿದೆ. ಇದರ ವಿರುದ್ಧ ದಿಕ್ಕಿನಲ್ಲಿ ಅಮೆರಿಕನ್ನರು ಇನ್ನೊಂದು ಪ್ರತಿಮೆಯನ್ನು ಕಟ್ಟುತ್ತಿದ್ದಾರೆ; ಅದೇ “ಸ್ಟಾಚೂ ಆಫ್ ರೆಸ್ಪಾನ್ಸಿಬಿಲಿಟಿ’. ಇಡೀ ದೇಶಕ್ಕೆ ಅವರು ಏನು ಸಾರುತ್ತಿದ್ದಾರಂದ್ರೆ, “ನಿಮಗೆ ಫ್ರೀಡಂ ಸಿಗಬೇಕು ಅಂದ್ರೆ, ನೀವು ನಿಮ್ಮ ಜಬಾವಾªರಿಗಳನ್ನು ನಿಭಾಯಿಸಲೇಬೇಕು. ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸದೇ, ಬರೀ ಫ್ರೀಡಂ ಅನ್ನು ನಿರೀಕ್ಷಿಸಬೇಡಿ’ ಅಂತ. “ಅಪ್ಪಾ… ನಾನು ಲೇಟಾಗಿ ಬರುತ್ತೀನಿ, ರಾತ್ರಿ 2 ಗಂಟೆ ಆಗುತ್ತೆ’. ಅಂತೀರಿ. “ಸರಿಯಪ್ಪ, ಬಾ… ಏನೂ ಪ್ರಾಬ್ಲಿಂ ಇಲ್ಲ. ನಾಳೆ ಏನು ಹೋಮ್‌ ವರ್ಕ್‌ ಇದೆ, ಅದೆಲ್ಲವನ್ನೂ ಮಾಡಿ, ನೀ ಎಲ್ಲಿಗೆ ಬೇಕಾದ್ರೂ ಹೋಗು. ನಿನಗೆ ಸ್ವಾತಂತ್ರ್ಯ ಕೊಡ್ತಿದ್ದೀನಿ’ ಅಂತಾರೆ ಅಪ್ಪ. ಪ್ರತಿ ಸ್ವಾತಂತ್ರ್ಯದ ಜತೆಗೆ ಒಂದು ಜವಾಬ್ದಾರಿ ಅಂತ ಇರುತ್ತೆ, ಆ ಜವಾಬ್ದಾರಿಯನ್ನು ಸ್ವೀಕರಿಸುತ್ತೀನಿ ಅಂತಾದ್ರೆ, ಯಾರು ಯಾವ ರೀತಿಯ ಫ್ರೀಡಂ ಬೇಕಾದ್ರೂ ಕೊಡ್ತಾರೆ.
(ಮುಂದಿನ ವಾರ: ಗ್ರೇಟ್‌ನೆಸ್‌ನ ಸೀಕ್ರೆಟ್‌)

ಇಬ್ಬರು ಬೆಸ್ಟ್‌ ಫ್ರೆಂಡ್ಸ್‌ನ ಕತೆ
ಒಂದು ಇಲಿ, ಒಂದು ಕಪ್ಪೆ ಬೆಸ್ಟ್‌ ಫ್ರೆಂಡ್ಸ್‌ ಆಗಿದ್ದವು. ನಾವಿಬ್ಬರೂ ಜತೆಗೆ ಇರಬೇಕಮ್ಮಾ ಅಂತ ಎರಡೂ ಬಯಸುತ್ತಿದ್ದವು. ಹಗ್ಗದಿಂದ ಇಬ್ಬರೂ ತಮ್ಮ ಕಾಲನ್ನು ಪರಸ್ಪರ ಕಟ್ಟಿಕೊಂಡವು. ಇಲಿ ಹೋದ ಕಡೆಯಲ್ಲೆಲ್ಲ ಕಪ್ಪೆ ಹೋಗುತ್ತೆ, ಕಪ್ಪೆ ಹೋದಲ್ಲೆಲ್ಲ ಇಲಿ ಹೋಗುತ್ತೆ. ಒಂದಿನ ಕೆರೆ ಹತ್ತಿರ ಹೋದ್ರು. ಅಲ್ಲೊಂದು ಹುಳ ನೀರಿನ ಮೇಲೆ ಈಜುತ್ತಾ ಇತ್ತು. ಕಪ್ಪೆ ನೋಡಿತು, “ವ್ಹಾವ್‌ ಲವ್ಲಿ ಬ್ರೇಕ್‌ಫಾಸ್ಟ್‌’ ಅಂತ ಡೈವ್‌ ಹೊಡೀತು. ಕಪ್ಪೆ ಜೊತೆಗೆ ಇಲೀನೂ ನೀರೊಳಗೆ ಮುಳುಗಿತು. ಅಲ್ಲಿಗೆ ಇಲಿ ಕತೆ ಮುಗೀತು. 

   ಇಲಿ ಸತ್ತು ಹೋಯಿತು. ಶವ ತೇಲುತ್ತಾ ಇದೆ. ಕಪ್ಪೆ ಹ್ಯಾಪಿಯಾಗಿ ಹುಳುವನ್ನು ತಿನ್ನುತ್ತಾ ಇದೆ. ಮೇಲ್ಗಡೆಯಿಂದ ಒಂದು ಕಾಗೆ, ಕಪ್ಪೆಯನ್ನು ನೋಡಿತು. “ವ್ಹಾವ್‌ ಲವ್ಲಿ ಬ್ರೇಕ್‌ಫಾಸ್ಟ್‌’ ಅಂತ ಸತ್ತ ಇಲಿಯನ್ನು ಎತ್ತಿಕೊಂಡು ಹೋಯ್ತು. ಹಗ್ಗ ಕಟ್ಟಿದ ಕಾರಣಕ್ಕೆ, ಅದರೊಂದಿಗೆ ಕಪ್ಪೆಯೂ ಮೇಲಕ್ಕೆ ಹೋಯ್ತು. ಇದನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಯಾರ್‌ ಜತೆ ಹಗ್ಗ ಕಟ್ಟಿಕೊಳ್ತೀರ ಅನ್ನೋದು ಮುಖ್ಯ. ಕೇರ್‌ಫ‌ುಲ್ಲಾಗಿರಿ. ನಿಮ್ಮ ಮೆಂಟಾಲಿಟಿಗೆ ಸೂಟ್‌ ಆಗಿರೋರು ನಿಮ್ಮ ಫ್ರೆಂಡ್ಸ್‌ ಆಗಿರಬೇಕು. ಒಂದು ಕಪ್ಪೆ ಮತ್ತು ಇಲಿ ಸೇರಿದ್ರೆ, ಇಲಿ ಕತೆ ಮುಗಿಯುತ್ತೆ. ಬೇಡದೇ ಇರೋ ಕಡೆಗೆಲ್ಲ ನಿಮ್ಮ ಫ್ರೆಂಡ್‌ ನಿಮ್ಮನ್ನು ಕರಕೊಂಡು ಹೋಗ್ತಾನೆ. ಹಾಗಾಗಿ, ಫ್ರೆಂಡ್ಸನ್ನು ಆರಿಸಿಕೊಳ್ಳುವಾಗ ಬಹಳ ಬಹಳ ಸೂಕ್ಷ್ಮವಾಗಿ, ಯೋಚನೆ ಮಾಡಿ ಆಯ್ಕೆಮಾಡಿ. ಒಬ್ಬ ಒಳ್ಳೇ ಟೀಚರ್‌, ಒಬ್ಬ ಒಳ್ಳೇ ಫ್ರೆಂಡ್‌, ಒಬ್ಬ ಒಳ್ಳೇ ಮೆಂಟರ್‌, ನಿಮ್ಮ ಇಡೀ ದಿನವನ್ನು, ಇಡೀ ಜೀವನವನ್ನು ಪಾಸಿಟಿವ್‌ ಆಗಿ ಬದಲಾಯಿಸ್ತಾರೆ. ಯಾರ್‌ ಜೊತೆ ಟೈ ಅಪ್‌ ಮಾಡ್ಕೊಳ್ತೀರ ಅನ್ನೋದರ ಬಗ್ಗೆ ತುಂಬಾ ಕೇರ್‌ಫ‌ುಲ್ಲಾಗಿರಿ. ಅಂದಹಾಗೆ, ಮುಂದೆ ನಿಮ್ಮ ಬದುಕಿನಲ್ಲಿ ಅತಿದೊಡ್ಡ ಟೈಅಪ್‌ ಅಂದ್ರೆ “ಮದುವೆ’! ನೀವೆಲ್ಲ ಹುಷಾರಾಗಿರಿ!

 ರಮೇಶ್‌ ಅರವಿಂದ್‌

Advertisement

Udayavani is now on Telegram. Click here to join our channel and stay updated with the latest news.

Next