ಜೇವರ್ಗಿ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ನ್ಯಾ| ನಾಗಮೋಹನ ಸಮಿತಿ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಬಸವಾಭಿಮಾನಿಗಳು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಬಸವೇಶ್ವರ ವೃತ್ತ ಹಾಗೂ ಅಖಂಡೇಶ್ವರ ವೃತ್ತದ ಬಳಿ ಬಸವಾಭಿಮಾನಿಗಳು ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಲಿಂಗಾಯತ ಧರ್ಮಕ್ಕೆ ಜಯವಾಗಲಿ, ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಎಂಬ ಜಯಘೋಷ ಹಾಕಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಬಸವಕೇಂದ್ರ ಅದ್ಯಕ್ಷ ಶರಣಬಸವ ಕಲ್ಲಾ, ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ ಆಂದೋಲಾ, ಕಸಾಪ ಅಧ್ಯಕ್ಷ ಶಿವಣಗೌಡ ಪಾಟೀಲ ಹಂಗರಗಿ, ಬಾಪುಗೌಡ ಬಿರಾಳ, ಮಹಾಂತುಸಾಹು ಹರವಾಳ, ಸಕ್ರೆಪ್ಪಗೌಡ ಹರನೂರ, ವಿಶ್ವನಾಥ ರೆಡ್ಡಿ ರಾಜಳ್ಳಿ, ಸಾಹೇಬಗೌಡ ಕಡ್ಲಿ, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ಪಂಡಿತ ನೆಲ್ಲಗಿ, ರೇವಣಸಿದ್ದಪ್ಪ ಅಕ್ಕಿ, ಬಿ.ಎನ್. ಪಾಟೀಲ,
ಮಲ್ಕಣಗೌಡ ಹೆಗ್ಗಿನಾಳ, ಶಿವಪುತ್ರಪ್ಪ ನೆಲ್ಲಗಿ, ಬಸವರಾಜ ಕಲ್ಲಾ, ಗುರುಗೌಡ ಮಾಲಿಪಾಟೀಲ, ಶಿವಲಿಂಗ ರಾಸಣಗಿ,ಶಿವುಕುಮಾರ ಕಲ್ಲಾ, ಬಸವರಾಜ ಗುಡೂರ ಇದ್ದರು