Advertisement
ಕಳೆದ ಬಿಜೆಪಿ ಸರ್ಕಾರ ಪೇಜಾವರ ಮಠ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕಿನ ಭೀಮಾನದಿ ತೀರದ ನೆರೆ ಸಂತ್ರಸ್ತರಿಗಾಗಿತಾಲೂಕಿನ ರದ್ದೇವಾಡಗಿ ಸೇರಿದಂತೆ ನರಿಬೋಳ, ಕೂಡಿ, ಕೋಬಾಳ, ಮಂದರವಾಡ, ಕೋಬಾಳ,ಬಳ್ಳುಂಡಗಿ, ಹರವಾಳ ಸೇರಿದಂತೆ ಒಟ್ಟು 17 ಹಳ್ಳಿಗಳಲ್ಲಿ 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಆಸರೆ ಕಲ್ಪಿಸಿತ್ತು. ಅದರಂತೆ ರದ್ದೇವಾಡಗಿ ಗ್ರಾಮದಲ್ಲೂ 2009-10ನೇ ಸಾಲಿನ ನೆರೆ ಸಂತ್ರಸ್ತರಿಗೆ ಆಸರೆ ಯೋಜನೆಯಡಿ 37ಮನೆಗಳನ್ನುನಿರ್ಮಿಸಿಕೊಟ್ಟಿದೆ. ಸಂತ್ರಸ್ತರಿಗೆ ಶಾಸ್ವತ ಪರಿಹಾರಮತ್ತು ಸೂರು ಒದಗಿಸಿಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು. ಅಂದಿನಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ 2011ರ ಡಿಸೆಂಬರ್ 11ರಂದು ರದ್ದೇವಾಡಗಿ ಗ್ರಾಮದಆಸರೆ ಮನೆಗಳ ಉದ್ಘಾಟಿಸಿ ಫಲಾನುಭವಿಗಳಿಗೆಹಕ್ಕು ಪತ್ರ ವಿತರಿಸಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾರೂ ಆ ಮನೆಗಳಿಗೆತೆರಳದೇ ತಮ್ಮ ನದಿ ತೀರದ ಹಳೆಯ ಮನೆಗಳಲ್ಲೇ ವಾಸಿಸುತ್ತಿದ್ದರು.
Related Articles
Advertisement
ನೆರೆ ಸಂತ್ರಸ್ತರ ಮಕ್ಕಳಿಗೆ ಬೆಳಿಗ್ಗೆ ಮೊಟ್ಟೆ, ಹಾಲು, ಬಿಸ್ಕೀಟ್ ನೀಡುವುದರಜತೆಗೆ ಎಲ್ಲರಿಗೂ ಬೆಳಿಗ್ಗೆ ಉಪಹಾರಉಪ್ಪಿಟ್ಟು ಹಾಗೂ ಊಟಕ್ಕೆ ಚಪಾತಿ, ಮಜ್ಜಿಗೆ, ಸಾಂಬಾರುನೀಡಲಾಗುತ್ತಿದೆ. ಹಗಲಿರುಳು ಕಾಳಜಿ ಕೇದ್ರದಲ್ಲೇ ಇದ್ದು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. –ಜಯಪ್ರಕಾಶ ಹಣಕುಣೆ, ಗ್ರಾಮ ಲೆಕ್ಕಿಗ
ರದ್ದೇವಾಡಗಿ ಗ್ರಾಮದಎಲ್ಲಾ ಜನರನ್ನುಸುರಕ್ಷಿತವಾಗಿ ಕರೆತಂದು ಗುಣಮಟ್ಟದ ಊಟ, ಹೊದಿಕೆ ಹಾಗೂ ಅಗತ್ಯ ವಸ್ತುಗಳ ಪೂರೈಸಲಾಗುತ್ತಿದೆ. ನೆರೆಪೀಡಿತರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು. –ಅಖಂಡೆಪ್ಪ ಹುಗ್ಗಿ , ಪಿಡಿಒ
-ವಿಜಯಕುಮಾರ ಎಸ್.ಕಲ್ಲಾ