Advertisement

ಪಂಚಗವ್ಯ ಸಂಶೋಧನಾ ಸಮಿತಿಗೆ ವಿಎಚ್‌ಪಿ ಸದಸ್ಯರು 

04:00 AM Jul 18, 2017 | Team Udayavani |

ಹೊಸದಿಲ್ಲಿ: ಪಂಚಗವ್ಯ ಕುರಿತ ವೈಜ್ಞಾನಿಕ ಸಂಶೋಧನಾ ಸಮಿತಿಗೆ ಕೇಂದ್ರ ಸರಕಾರ ವಿಶ್ವಹಿಂದೂ ಪರಿಷತ್‌, ಆರೆಸ್ಸೆಸ್‌ ಸದಸ್ಯರನ್ನು ನೇಮಕ  ಮಾಡಿದೆ. ಸರಕಾರದ ಈ ತೀರ್ಮಾನ ತೀವ್ರ ವಿವಾದ ಎಬ್ಬಿಸುವ ಸಾಧ್ಯತೆ ಇದೆ. 

Advertisement

ಪಂಚಗವ್ಯ (ಸೆಗಣಿ, ಮೂತ್ರ, ಹಾಲು, ಮೊಸರು, ತುಪ್ಪ)ದ ವೈಜ್ಞಾನಿಕ ಪ್ರಯೋಜನಗಳ ಬಗ್ಗೆ ಹೇಳುವ, ಸಂಶೋಧನೆ ನಡೆಸುವ ಸಮಿತಿ ಇದಾಗಿದ್ದು, ಇದರ ನೇತೃತ್ವವನ್ನು ಕೇಂದ್ರ ಸಚಿವ ಹರ್ಷವರ್ಧನ್‌ ವಹಿಸಿದ್ದಾರೆ. ಒಟ್ಟು 19 ಮಂದಿ ಸದಸ್ಯರು ಇದರಲ್ಲಿದ್ದು, ಹಲವು ಸದಸ್ಯರು ಆರೆಸ್ಸೆಸ್‌, ವಿಎಚ್‌ಪಿ ಸಂಪರ್ಕ ಹೊಂದಿದವರು ಎಂದು ಹೇಳಲಾಗಿದೆ. ಈ ಬಗ್ಗೆ ಕೇಂದ್ರ ಸುತ್ತೋಲೆ ಹೊರಡಿಸಿದ್ದು, “ಸ್ವರೋಪ್‌’ ಹೆಸರಿನ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮಟ್ಟದ ಸಂಶೋಧನಾ ಕಾರ್ಯ ನಡೆಯಲಿದೆ ಎಂದಿದೆ.

ಸಮಿತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿವಿಧ ಇಲಾಖೆಗಳ ಕಾರ್ಯದರ್ಶಿ ಗಳು, ಬಯೋಟೆಕ್ನಾಲಜಿ, ಮರುಬಳಕೆ ಇಂಧನ ಇಲಾಖೆ, ದಿಲ್ಲಿ ಐಐಟಿ ವಿಜ್ಞಾನಿಗಳು, ವಿಜ್ಞಾನ ಭಾರತಿ ಮತ್ತು ಗೋವಿಜ್ಞಾನ ಅನುಸಂಧಾನ ಕೇಂದ್ರ (ಆರೆಸ್ಸೆಸ್‌ ಸಹ ಸಂಸ್ಥೆ)ದ ಸದಸ್ಯರು ಇದ್ದಾರೆ. ಆರ್‌ಎಸ್‌ಎಸ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next