Advertisement

ಬೆಂಗಳೂರು ಗಲಭೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ವಿಎಚ್ ಪಿ ಆಗ್ರಹ

04:09 PM Aug 27, 2020 | keerthan |

ಬೆಂಗಳೂರು: ದೆಹಲಿ ಮಾದರಿಯಲ್ಲೇ ಬೆಂಗಳೂರು ಗಲಭೆ ಪೂರ್ವ ನಿಯೋಜಿತವಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವಹಿಂದು ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂದೆ ಆಗ್ರಹಿಸಬೇಕು.

Advertisement

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗಲಭೆ ಪ್ರಕರಣ ಯಾರೂ ಗಲಭೆ ಮಾಡಿದ್ದಾರೋ ಅವರಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ‌ತೆಗೆದುಕೊಂಡಿದೆ. ದೆಹಲಿ ಹಾಗೂ ಬೆಂಗಳೂರಿನಲ್ಲಿ ಪೂರ್ವನಿಯೋಜಿತ ಗಲಭೆ ಎಂದನಿಸುತ್ತಿದೆ. ಈಗಾಗಲೇ ತಪ್ಪು ಮಾಡಿದವರನ್ನು ಬಂಧಿಸಲಾಗಿದೆ. ಸಾಕಷ್ಟು ಟಾರ್ಗೆಟ್ ಮಾಡಿ ಹಾನಿ ಮಾಡಿದ್ದಾರೆ. ಡ್ಯಾಮೇಜ್ ಮಾಡಿದವರಿಂದಲೇ ವಸೂಲಿ ಮಾಡಬೇಕು. ದೆಹಲಿ, ಬೆಂಗಳೂರಿನಲ್ಲಿ ಸಾಕಷ್ಟು ಮಾರಕಾಸ್ತ್ರಗಳನ್ನು ಬಳಸಿರುವುದು ಗಮನಕ್ಕೆ ಬಂದಿದೆ ಎಂದರು.

ದೇಶದ ಒಳಗೆ ಗಲಭೆ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಣ್ಣಪುಟ್ಟ ಕಾರಣಗಳಿಗೆ ಗಲಭೆ, ಜಗಳ ಮಾಡುವುದು ಸರಿಯಲ್ಲ. ಇದನ್ನು ಬೆಂಬಲಿಸುವುದು ಸರಿಯಲ್ಲ. ದೇಶದ ಶಾಂತಿ ನೆಮ್ಮದಿ ಹಾಳು ಮಾಡುವವರ ವಿರುದ್ದ ಹಾಗೂ ಹಿಂದೂ ವಿರೋಧ ಚಟುವಟಿಕೆ ನಡೆಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿದರು.

ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ನಶೆ ನಂಜು: ನಟ, ಗಾಯಕರಿಗೆ ಮಾದಕ ವಸ್ತು ನೀಡುತ್ತಿದ್ದ ಗ್ಯಾಂಗ್ ಬಂಧನ

ಚೀನಾ ವಸ್ತುಗಳ ನಿಷೇಧ ಕರೆ
ಚೀನಾ ದೇಶದ ಗಡಿಗಳಲ್ಲಿ ಸೈನಿಕರು ಜಮಾವಣೆಯಾಗುತ್ತಿದ್ದಾರೆ. ಪಾಕಿಸ್ತಾನ, ಶ್ರೀಲಂಕಾ ಸಹ ಮಿಲಿಟರ್ ಬೇಸ್ ತಯಾರಿ ಮಾಡುತ್ತಿದೆ. ಇಂಥಹ ಸಂದರ್ಭದಲ್ಲಿ ನಮ್ಮ ದೇಶವೂ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಚೀನಾ ವಸ್ತುಗಳ ಪರ್ಯಾಯವಾಗಿ ದೇಶಿಯ ವಸ್ತುಗಳ ಖರೀದಿಗೆ ಕರೆ ನೀಡಲಾಗಿದೆ. ಹಲವು ರಾಜ್ಯಗಳಲ್ಲಿ ಚೀನಾ ವಸ್ತುಗಳ ಪರ್ಯಾಯವಾಗಿ ವಸ್ತುಗಳ ನಿರ್ಮಾಣ ಮಾಡಲಾಗುತ್ತಿದೆ. ಆತ್ಮನಿರ್ಭರ ಭಾರತಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

Advertisement

ರಾಮಮಂದಿರ ನಿರ್ಮಾಣ
ಇನ್ನೆರಡು-ಮೂರು ವರ್ಷದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಗರ್ಭಗುಡಿಯೊಳಗೆ ಶ್ರೀರಾಮ ವಿರಾಜಮಾನವಾಗಿರಲಿದ್ದಾರೆ. ಮಂದಿರ ನಿರ್ಮಾಣಕ್ಕೆ ನಿಗದಿತ ಟ್ರಸ್ಟ್ ಮೂಲಕವೇ ಧನ ಸಂಗ್ರಹ ಮಾಡಲಾಗುವುದು ಮತ್ತು ವಿ ಎಚ್ ಪಿ ಮುಂದೆ ನಿಂತು ಈ ಕಾರ್ಯ ಮಾಡಲಿದೆ. ಅದೇ ರೀತಿ ರಾಜ್ಯದ ಅಂಜಾನಾದ್ರಿ ದೇವಸ್ಥಾನದ ಅಭಿವೃದ್ದಿ ಬಗ್ಗೆ ವಿಎಚ್ ಪಿ ಮುಂದಾಗಲಿದೆ ಎಂದರು.

ಕಾಶಿ ಮಥುರದ ವಿಷಯವೂ ಹಿಂದು ಸಮಾಜದ ಮುಂದಿದೆ ಹಾಗೂ ಅದರ ಪುನರ್ ನಿರ್ಮಾಣದ ಬೇಡಿಕೆಯೂ ಇದೆ. ಆದರೆ, ಸದ್ಯ ರಾಮಮಂದಿರ ನಿರ್ಮಾಣವೊಂದೆ ನಮ್ಮ ಗುರಿಯಾಗಿದೆ. ಉಳಿದ ವಿಷಯಗಳ ಹೋರಾಟ ರಾಮ ಮಂದಿರ ನಿರ್ಮಾಣದ ನಂತರ ತೀರ್ಮಾನಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next