Advertisement

Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್‌ʼ?; ಇದುವರೆಗಿನ ಗಳಿಕೆ ಎಷ್ಟು?

02:39 PM Oct 21, 2024 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ (Rajinikanth) ಅಭಿನಯದ ʼವೆಟ್ಟೈಯನ್‌ʼ (Vettaiyan) ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ರಜಿನಿಕಾಂತ್‌ ಅವರನ್ನು ಖಾಕಿ ಅವತಾರದಲ್ಲಿ ನೋಡಿ ʼತಲೈವಾʼ ಫ್ಯಾನ್ಸ್‌ ಗಳು ಖುಷ್‌ ಆಗಿದ್ದಾರೆ. ಅ.10 ರಂದು ಥಿಯೇಟರ್‌ಗೆ ಕಾಲಿಟ್ಟ ʼವೆಟ್ಟೈಯನ್‌ʼ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ನಡುವೆ ಸಿನಿಮಾದ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಶುರುವಾಗಿದೆ.

ಕ್ರೈಮ್‌ ಇನ್ವೆಸ್ಟಿಗೇಷನ್ ಡ್ರಾಮಾ ʼವೆಟ್ಟೈಯನ್‌ʼ ಸಿನಿಮಾ ಸದ್ಯ ಇಂಡಿಯನ್‌ ಬಾಕ್ಸ್‌ ಆಫೀಸ್‌ನಲ್ಲಿ 134 ಕೋಟಿ ಗಳಿಸಿದೆ. ದಿನಕಳೆಯುತ್ತಿದ್ದಂತೆ ಸಿನಿಮಾದ ಗಳಿಕೆ ಕೂಡ ಹೆಚ್ಚಾಗುತ್ತಿದೆ.

ಈ ನಡುವೆ ʼವೆಟ್ಟೈಯನ್‌ʼ ಓಟಿಟಿ ರಿಲೀಸ್‌ ಬಗ್ಗೆ ಮಾತು ಶುರುವಾಗಿದೆ. ಈಗಾಗಲೇ ದುಬಾರಿ ಮೊತ್ತಕ್ಕೆ ಅಮೇಜಾನ್‌ ಪ್ರೈಮ್‌ ಸಿನಿಮಾದ ಓಟಿಟಿ ರೈಟ್ಸ್‌ ಖರೀದಿಸಿದೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್‌ ಆಗಿ 4  ವಾರದ ಬಳಿಕ ಓಟಿಟಿಗೆ ʼ ವೆಟ್ಟೈಯನ್‌ʼ ಬರಲಿದೆ ಎನ್ನಲಾಗಿದೆ.

Advertisement

ನವೆಂಬರ್‌ 7 ಅಥವಾ 9ಕ್ಕೆ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎಂದು ವರದಿಯಾಗಿದೆ. ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಇನ್ನೊಂದೆಡೆ ಪೊಲೀಸ್‌ ಎನ್‌ ಕೌಂಟರ್‌ ಸುತ್ತ ಸಾಗುವ ʼ ವೆಟ್ಟೈಯನ್‌ʼ ಪ್ರೀಕ್ವೆಲ್‌ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪೊಲೀಸ್ ಎನ್‌ಕೌಂಟರ್ ಹತ್ಯೆಯ ವಿಷಯದಿಂದ ಆಳವಾಗಿ ಪ್ರೇರಿತವಾಗಿದ್ದೇನೆ. ಇದರ ಬಗ್ಗೆ ಪ್ರೀಕ್ವೆಲ್‌ನಲ್ಲಿ ಇನ್ನಷ್ಟು ಅನ್ವೇಷಿಸಲು ಬಯಸುತ್ತೇನೆ ಎಂದು ನಿರ್ದೇಶಕ ಜ್ಞಾನವೇಲ್‌ ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ ಹೇಳಿದ್ದರು.

ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next