ಮುಂಬಯಿ: ಮೈನೇ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್ ಸೇರಿದಂತೆ ಹಲವು ಸೂಪರ್ ಹಿಟ್ ಸಂಗೀತ ನಿರ್ದೇಶಿಸಿದ್ದ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ (78ವರ್ಷ) ಹೃದಯಾಘಾತದಿಂದ ಶನಿವಾರ(ಮೇ 22) ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಿಲೀಸ್ ಮುನ್ನವೆ RRR ಬ್ಯುಝಿನೆಸ್:ಸೆಟ್ಲೈಟ್-ಡಿಜಿಟಲ್ ರೈಟ್ಸ್ ಸೇಲಾಗಿದ್ದು ಎಷ್ಟು ಕೋಟಿಗೆ ?
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮ್ ಲಕ್ಷ್ಮಣ್ ಅವರು ಇಂದು ಬೆಳಗ್ಗೆ ನಾಗ್ಪುರ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದಾಗಿ ಪುತ್ರ ವಿಜಯ್ ಪಾಟೀಲ್ ತಿಳಿಸಿದ್ದಾರೆ.
ದಾದಾ ಕೋನ್ಡಕೆ ಅವರು ರಾಮ್ ಲಕ್ಷ್ಮಣ್ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದರು. ಆರಂಭದಲ್ಲಿ ಮರಾಠಿ ಸಂಗೀತ ನಿರ್ದೇಶಿಸುತ್ತಿದ್ದು, ನಂತರ ಅವರು ಬಾಲಿವುಡ್ ಗೆ ಕಾಲಿಟ್ಟಿರುವುದಾಗಿ ವರದಿ ತಿಳಿಸಿದೆ. 1976ರಲ್ಲಿ ಏಜೆಂಟ್ ವಿನೋದ್ ಬಾಲಿವುಡ್ ಸಿನಿಮಾದ ಸಂಗೀತ ನಿರ್ದೇಶನಕ್ಕೆ ಸಹಿ ಹಾಕುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.
ಹಿಂದಿ, ಮರಾಠಿ, ಬೋಜ್ ಪುರಿ ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದ ಹೆಗ್ಗಳಿಕೆ ರಾಮ್ ಲಕ್ಷ್ಮಣ್ ಅವರದ್ದಾಗಿದೆ. ರಾಮ್ ಅವರ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.