Advertisement

‘ಶೋಲೆ’ಯ ಶೂರ್ಮ ಬೋಪಾಲಿ ಖ್ಯಾತಿಯ ನಟ ಜಗದೀಪ್ ನಿಧನ

12:49 AM Jul 09, 2020 | Hari Prasad |

ಮುಂಬಯಿ: ಹಿಂದಿ ಚಿತ್ರರಂಗದಲ್ಲಿ ತನ್ನ ವಿಶಿಷ್ಟ ಮ್ಯಾನರಿಸಂ ಹಾಸ್ಯಾಭಿನಯದ ಮೂಲಕ ಜಗದೀಪ್ ಎಂದೇ ಖ್ಯಾತರಾಗಿದ್ದ ನಟ ಸಯ್ಯದ್ ಇಷ್ತಿಕ್ ಅಹಮ್ಮದ್ ಜಾಫ್ರಿ ಅವರು ಇಂದು ನಿಧನ ಹೊಂದಿದ್ದಾರೆ.

Advertisement

ಜಗದೀಪ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಇಂದು ರಾತ್ರಿ 8.40ರ ಸುಮಾರಿಗೆ ಮುಂಬಯಿನಲ್ಲಿರುವ ತಮ್ಮ ನಿವಾಸದಲ್ಲಿ ಅವರು ವಯೋಸಹಜ ಕಾರಣಗಳಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಹಿರಿಯ ನಟನ ಅಂತ್ಯಕ್ರಿಯೆ ಗುರುವಾರದಂದು ಶಿಯಾ ಖಬರೊಸ್ತಾನ್ ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

70 ಮತ್ತು 80ರ ದಶಕದ ಬಹಳಷ್ಟು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಜಗದೀಪ್ ಅವರು ಪಾತ್ರ ನಿರ್ವಹಿಸಿದ್ದರು. ಮಾತ್ರವಲ್ಲದೇ 90ರ ದಶಕದವರೆಗೂ ಅವರು ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದರು.

1975ರಲ್ಲಿ ತೆರೆಕಂಡು ಭರ್ಜರಿ ಯಶಸ್ಸನ್ನು ಕಂಡಿದ್ದ ಶೋಲೇ ಚಿತ್ರದಲ್ಲಿನ ಶೂರ್ಮ ಭೋಪಾಲಿ ಪಾತ್ರ ಜಗದೀಪ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಟಿಂಬರ್ ಫ್ಯಾಕ್ಟರಿಯ ಮಾಲಿಕನ ಪಾತ್ರದಲ್ಲಿ ಜಗದೀಪ್ ಅವರ ನಟನೆ ಚಿತ್ರರಸಿಕರ ಮನ ಗೆದ್ದಿತ್ತು.

Advertisement

ಶೋಲೇ ಚಿತ್ರದಲ್ಲಿನ ಈ ಪಾತ್ರ ಜಗದೀಪ್ ಅವರಿಗೆ ಎಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತೆಂದರೆ ಬಳಿಕ 1988ರಲ್ಲಿ ಶೂರ್ಮ ಭೋಪಾಲಿ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಈ ಪಾತ್ರದಲ್ಲಿ ಸ್ವತಃ ಜಗದೀಶ್ ಅವರೇ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next