Advertisement

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

07:49 PM May 02, 2024 | Team Udayavani |

ಮಂಗಳೂರು:ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಲಕ್ಷದ್ವೀಪದ ಪ್ರಯಾಣಿಕರ ವೇಗದ ನೌಕೆ ‘ಪರಲಿ’ (HSC PARALI) ಮಂಗಳೂರಿಗೆ ಆಗಮಿಸಿದೆ.

Advertisement

160 ಮಂದಿ ಲಕ್ಷದ್ವೀಪ ನಿವಾಸಿಗಳೊಂದಿಗೆ ಮಂಗಳೂರಿನ ಹಳೆಬಂದರು ಜೆಟ್ಟಿಗೆ ಗುರುವಾರ ಸಂಜೆ5 ಕ್ಕೆ ಆಗಮಿಸಿತು. ಹಿಂದಿನ ವ್ಯವಸ್ಥೆಯಲ್ಲಿ ಲಕ್ಷದ್ವೀಪದಿಂದ ಬರಲು 13 ಗಂಟೆ ತಗುಲುತ್ತಿತ್ತು. ಈಗ ಹೈಸ್ಪೀಡ್ ನೌಕೆಯಲ್ಲಿ ಕೇವಲ 7 ಗಂಟೆ ಅವಧಿ ಮಾತ್ರ ಸಾಕಾಗುತ್ತದೆ. ನೌಕೆ ಸದ್ಯ ಟ್ರಯಲ್ ನೆಲೆಯಲ್ಲಿ ಆಗಮಿಸಿದೆ.

ಲಕ್ಷದ್ವೀಪ ನಿವಾಸಿಗಳು ಕುಟುಂಬ ಸದಸ್ಯರನ್ನು ಭೇಟಿ ಮಾಡುವ, ಶಾಪಿಂಗ್ ಮಾಡುವ ಉತ್ಸಾಹದಲ್ಲಿ, ಚಿಕಿತ್ಸೆ ಪಡೆಯುವ ಉದ್ದೇಶಕ್ಕಾಗಿ ನೌಕೆ ಲಾಭದಾಯಕವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next