Advertisement

ಕೆಪಿಸಿಸಿ ನೋಟಿಸ್ ನಿಂದ ಬೇಸರವಾಯ್ತು: ಅಶೋಕ್ ಪಟ್ಟಣ್

01:42 PM Feb 11, 2022 | Team Udayavani |

ಬೆಂಗಳೂರು : ಕೆಪಿಸಿಸಿ ಶಿಸ್ತು ಸಮಿತಿ ನೀಡಿದ ನೋಟಿಸ್ ನಿಂದ ಮನಸಿಗೆ ನೋವಾಗಿದೆ. ನಾವು ಯಾವುದೇ ಶಿಸ್ತು‌‌ ಉಲ್ಲಂಘಿಸಿಲ್ಲ ಎಂದು ಮಾಜಿ ಶಾಸಕ ಅಶೋಕ್ ಪಟ್ಟಣ್ ಕೆಪಿಸಿಸಿ ಶಿಸ್ತು ಸಮಿತಿಗೆ ಉತ್ತರ ನೀಡಿದ್ದಾರೆ.

Advertisement

ಈ ಸಂಬಂಧ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿ ನೀಡಿದ ನೋಟಿಸ್ ಗೆ ಅವರು ಸಲ್ಲಿಸಿದ ಲಿಖಿತ ಉತ್ತರದಲ್ಲಿ ವಿವರಣೆ ನೀಡಿದ್ದಾರೆ.

ನಾನು ಪಕ್ಷದ ಶಿಸ್ತಿನ ವ್ಯಾಪ್ತಿಯನ್ನು ಮೀರಿ ನಾನು ಮಾತನಾಡಿಲ್ಲ. ನೋಟಿಸ್ ನೀಡುವ ಬದಲು ನನ್ನನ್ನು ಕರೆದು ಅಂದು ನಡೆದ ಘಟನೆಯ ಬಗ್ಗೆ ವಿವರಣೆ ಕೇಳಿದ್ದರೆ ಎಲ್ಲವನ್ನೂ ಹೇಳುತ್ತಿದ್ದೆ. ನಾನು ಶಿಸ್ತಿನ ವ್ಯಾಪ್ತಿಯನ್ನು ಉಲ್ಲಂಘಿಸಿಲ್ಲ . ಪಕ್ಷ ನೀಡಿದ ನೋಟಿಸ್ ನಿಂದ ನನಗೆ ಬೇಸರವಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಪತ್ರಿಕಾಗೋಷ್ಠಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪಿಸುಮಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಶೋಕ್‌ ಪಟ್ಟಣಗೆ ಶಿಸ್ತು ಸಮಿತಿ ನೋಟಿಸ್‌ ಜಾರಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next