Advertisement

ಪ್ರಚಂಡ ಮಳೆ ಪ್ರವಾಹ ಭೀತಿ; 12 ರಾಜ್ಯಗಳಿಗೆ ಮುನ್ನೆಚ್ಚರಿಕೆ​​​​​​​

06:10 AM Aug 31, 2017 | |

ಹೊಸದಿಲ್ಲಿ: ಈಗಾಗಲೇ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಮುಂದಿನ ಮೂರು ದಿನ ಭಾರೀ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಹೇಳಿದೆ. ಈ ಸಂಬಂಧ ಕರ್ನಾಟಕವೂ ಸೇರಿದಂತೆ 12 ರಾಜ್ಯಗಳಿಗೆ ಮುನ್ನೆಚ್ಚರಿಕೆ ನೀಡಿರುವ ಅದು, ಹವಾಮಾನ ಇಲಾಖೆಯ ಸೂಚನೆ ಅನ್ವಯ ನಿರ್ದೇಶನ ನೀಡಿದೆ.

Advertisement

ಉತ್ತರ ಪ್ರದೇಶದ ಬಿಹಾರ, ಅಸ್ಸಾಂ ಸೇರಿದಂತೆ 6 ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ. ಮಹಾರಾಷ್ಟ್ರ ಮತ್ತು ದಕ್ಷಿಣದ ಗೋವಾದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಮುಂಬಯಿ ನಗರಿಯೇ ನೀರಿನಲ್ಲಿ ಮುಳುಗಿತ್ತು. ಇದೇ ಪ್ರಮಾಣದ ಮಳೆ ಇನ್ನೂ ಮೂರು ದಿನ ಕರ್ನಾಟಕದ ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನಲ್ಲೂ ಸುರಿಯಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಮಳೆಯಿಂದಾಗಿ ಭಾರೀ ಪ್ರಮಾಣದ ನೆರೆ ಪರಿಸ್ಥಿತಿ ಕೂಡ ಉಂಟಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಮಂಗಳವಾರದ ಮುಂಬಯಿ ಮಳೆಯನ್ನು ಉಲ್ಲೇಖೀಸಿರುವ ಭಾರತೀಯ ಹವಾಮಾನ ಇಲಾಖೆ, ಇದೇ ಪರಿಸ್ಥಿತಿ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದಿದೆ. ಮುಂದೆ ಬರುವ ಮಳೆಯಿಂದಾಗಿ 14 ನದಿಗಳು ಮತ್ತು ಇವುಗಳ ಉಪನದಿಗಳು ತುಂಬಿ ಹರಿಯಲಿವೆ. ಅಲ್ಲದೆ ಇವುಗಳಿಗೆ ಹೊಂದಿಕೊಂಡ ಜಲಾಶಯಗಳಿಗೂ ಸಾಕಷ್ಟು ಪ್ರಮಾಣದ ನೀರು ಬರುವ ಸಾಧ್ಯತೆ ಇದೆ ಎಂದು ಹೇಳಿದೆ.

ಮುಂಬಯಿನಲ್ಲಿ ಮಂಗಳವಾರ ದಾಖಲೆಯ 298 ಮಿ.ಮೀ. ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಆರಂಭವಾದ ಮಳೆ ಕೊಂಚ ಬಿಡುವು ನೀಡಿದ್ದು ಸಂಜೆ 5.30ಕ್ಕೆ. ಸರಿಸುಮಾರು 30 ಸೆ.ಮೀ. ಮಳೆ ಸುರಿದಿದೆ.  ಎಲ್ಲೆಲ್ಲಿ  ಭಾರೀ ಮಳೆ?
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ಗೋವಾ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಮತ್ತು ಡಮನ್‌ ಹಾಗೂ ದಿಯು.

ಕರ್ನಾಟಕದಲ್ಲಿ ಎಲ್ಲಿ?
ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಬಾಗಲಕೋಟೆ, ವಿಜಯಪುರ, ಕಲಬುರಗಿ,  ಶಿವಮೊಗ್ಗ.

Advertisement
Advertisement

Udayavani is now on Telegram. Click here to join our channel and stay updated with the latest news.

Next