Advertisement

‘ತಾ|ನ ನವ ನಿರ್ಮಾಣಕ್ಕೆ  ಗ್ರಾ.ಪಂ. ಶಕ್ತಿ’

10:11 AM Feb 22, 2019 | Team Udayavani |

ವೇಣೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರುವ ಯೋಜನೆಗಳನ್ನು ಗ್ರಾಮದ ಪ್ರತಿ ಜನತೆಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಗ್ರಾ.ಪಂ.ಗಳು ಮಾಡಬೇಕು. ತಾ|ನ 81 ಗ್ರಾಮಗಳ ಅಭಿವೃದ್ಧಿ ಇರಾದೆ ಇದೆ. ಈ ಮೂಲಕ ತಾಲೂಕನ್ನು ನವನಿರ್ಮಾಣ ಮಾಡಬೇಕಿದೆ. ಇದಕ್ಕೆ ಗ್ರಾ.ಪಂ.ಗಳು ನನಗೆ ಶಕ್ತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ ಇದರ ಆಶ್ರಯದಲ್ಲಿ ಬುಧವಾರ ಅಂಡಿಂಜೆಯ ಶ್ರೀ ವಿನಾಯಕ ಶ್ರೀರಾಮ ಭಜನ ಮಂದಿರದಲ್ಲಿ ಜರಗಿದ ಅಂಡಿಂಜೆ ಗ್ರಾ.ಪಂ.ನ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ, ಸಹಾಯಧನ ವಿತರಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಅಂಡಿಂಜೆ ತಾ.ಪಂ. ಸದಸ್ಯ ಸುಧೀರ್‌ ಆರ್‌. ಸುವರ್ಣ, ಅಂಡಿಂಜೆ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್‌, ಶ್ರೀ ಪಾರ್ಶ್ವನಾಥ ಭಾರತ್‌ ಗ್ಯಾಸ್‌ ಏಜೆನ್ಸಿಯ ಮ್ಯಾನೇಜರ್‌ ಎಚ್‌. ಮಹಮ್ಮದ್‌ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಹುತಾತ್ಮರಾದ ವೀರ ಯೋಧರಿಗೆ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಮೂಲಕ ಸಂತಾಪ ಸೂಚಿಸಲಾಯಿತು.  

ಸಮ್ಮಾನ
ಅಂಡಿಂಜೆ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ಉದ್ಯೋಗ ಖಾತರಿಯ ತೋಟಗಾರಿಕೆ ವಿಭಾಗದ ತಾಂತ್ರಿಕ ಸಹಾಯಕಿ ಪೂರ್ಣಿಮಾ ಹಾಗೂ ಉದ್ಯೋಗ ಖಾತರಿ ಯೋಜನೆಯ ಸಹಾಯಕ ಎಂಜಿನಿಯರ್‌ ನಿತಿನ್‌ ರೈ ಅವರನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ವಿಟ್ಠಲ ಪೂಜಾರಿ ಸಾವ್ಯ ಸ್ವಾಗತಿಸಿ, ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಪ್ರಸ್ತಾವಿಸಿದರು. ಯಶೋಧರ ಬಂಗೇರ ನಿರೂಪಿಸಿ, ಗ್ರಾ.ಪಂ. ಸದಸ್ಯ ನಿತಿನ್‌ ಮುಂಡೇವು ವಂದಿಸಿದರು. ಕಾರ್ಯದರ್ಶಿ ನಿರ್ಮಲ್‌ ಕುಮಾರ್‌, ಸಿಬಂದಿ ಸಹಕರಿಸಿದರು.

Advertisement

ಅಭಿವೃದಿ ಕಾಮಗಾರಿಗಳು
ಅಂಡಿಂಜೆ ಗ್ರಾಮದ ಕಿಲಾರ ಅಂಗನವಾಡಿ ಕಟ್ಟಡ, ಕೊಕ್ರಾಡಿ ಗ್ರಾಮದ ಪುನ್ಕೆದಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಹಾಗೂ ಸಾವ್ಯ ಗ್ರಾಮದ ಮಿಯ್ಯೊಟ್ಟುಪಲ್ಕೆಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿತು. ನರೇಗಾ ಯೋಜನೆಯಡಿ 14 ಲಕ್ಷ ರೂ. ವೆಚ್ಚದಲ್ಲಿ ಅಂಡಿಂಜೆ ಪಂ. ಬಳಿ ನಿರ್ಮಿಸಲಾಗುವ ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿತು. ಅಂಡಿಂಜೆ ಪಂ.ನ ಮೀಸಲಿರಿಸಿದ ಅನುದಾನದಲ್ಲಿ 100 ಮಂದಿ ಪ. ಜಾತಿ ಮತ್ತು ಪ. ಪಂಗಡ ಕುಟುಂಬಗಳಿಗೆ 1.60 ಲಕ್ಷ ರೂ. ವೆಚ್ಚದಲ್ಲಿ 300 ಲೀ. ಸಾಮರ್ಥ್ಯದ ಸಿಂಟೆಕ್ಸ್‌ ಟ್ಯಾಂಕ್‌ಗಳನ್ನು ವಿತರಣೆ ಮಾಡಲಾಯಿತು. ಗ್ರಾ.ಪಂ.ನ ಮೀಸಲಿರಿಸಿದ ಶೇ. 3ರ ಅನುದಾನದಲ್ಲಿ 7 ಮಂದಿ ಅಂಗವಿಕಲರಿಗೆ ಸಹಾಯಧನವನ್ನು ಒದಗಿಸಲಾಯಿತು.

 1.50 ಕೋ. ರೂ. ಅನುದಾನ
ಶಾಸಕನಾದ ಬಳಿಕ 1.50 ಕೋಟಿ ರೂ.ಗೂ ಹೆಚ್ಚು ಮೊತ್ತದ ಅನುದಾನವನ್ನು ಅಂಡಿಂಜೆ ಗ್ರಾ.ಪಂ. ವ್ಯಾಪ್ತಿಗೆ ನೀಡಿದ್ದೇನೆ. ಇಲ್ಲಿನ ನೂತನ ಶ್ರೀ ವಿನಾಯಕ ಶ್ರೀರಾಮ ಭಜನ ಮಂದಿರಕ್ಕೆ ಸ್ವಂತ ಖರ್ಚಿನಲ್ಲಿ ಫ್ಯಾನ್‌ಗಳ ವೆಚ್ಚವನ್ನು ಒದಗಿಸುತ್ತೇನೆ.
 - ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next