ಬೆಳ್ತಂಗಡಿ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಲ್ಲೊಂದಾದ ವೇಣೂರು ಲಯನ್ಸ್ ಕ್ಲಬ್ 36ನೇ ವರ್ಷದ ಸಂಭ್ರಮವಾಗಿದ್ದು ಹಲವಾರು ವರ್ಷಗಳಿಂದ ಈ ಗ್ರಾಮೀಣ ಭಾಗದ ಸಂಸ್ಥೆಯು ಸಮಾಜ ಸೇವಾ ಕೆಲಸ ಕಾರ್ಯವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುಂದೆಯೂ ಈ ಲಯನ್ಸ್ ಕ್ಲಬ್‌ನಿಂದ ಉತ್ತಮ ಸೇವಾ ಮನೋಭಾವನೆಯ ಪ್ರಾಮಾಣಿಕ ಕೆಲಸ ಕಾರ್ಯಗಳು ನಡೆಯಲಿ ಎಂದು ಪೂರ್ವ ಗವರ್ನರ್ ಕೆ. ಮೋಹನ್ ಕಾಮತ್ ಹೇಳಿದರು. ಅವರು ವೇಣೂರು ಗಾರ್ಡನ್‌ವ್ಯೂನಲ್ಲಿ ನಡೆದ ವೇಣೂರು ಲಯನ್ಸ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ನೂತನ ಅಧ್ಯಕ್ಷ ನಿತೇಶ್ ಎಚ್. ಅವರ ತಂದೆ ದಯಾನಂದ ಮತ್ತು ತಾಯಿ ಗುಣವತಿ ಅವರು ಮುಂದಿನ ವಿವಿಧ ಸೇವಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿದರು. ನಿರ್ಗಮನದ ಅಧ್ಯಕ್ಷ ವೆಂಕಟೇಶ್ ಎಂ.ಬಿ. ತಾನು ಮಾಡಿದ ವಿವಿಧ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಾಂತೀಯ ಅಧ್ಯಕ್ಷ ನಿತ್ಯಾನಂದ ನಾವರ, ಸಂಯೋಜಕ ಪ್ರವೀಣ್ ಕುಮಾರ್ ಇಂದ್ರ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಶಿವಪ್ರಸಾದ್ ಹೆಗ್ಡೆ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಧರಣೇಂದ್ರ ಕೆ., ಮೂಡಬಿದಿರೆಯ ರಾಮಚಂದ್ರ ಆಚಾರ್ಯ, ಅಲಂಗಾರಿನ ಜೆರಾಲ್ಡ್ ಲೋಬೋ, ನಾರಾವಿಯ ಮುರಳಿ ಬಿ., ಶಿರ್ತಾಡಿಯ ವಿಶ್ವನಾಥ ಸಾಲ್ಯಾನ್, ವೇಣೂರು ಲಯನ್ಸ್ ಕ್ಲಬ್‌ನ ಕೋಶಾಧಿಕಾರಿ ಮಿತ್ರ ಕುಮಾರ್, ಕಾರ್ಯದರ್ಶಿ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಮುರಳೀಧರ ಮೂಡಬಿದಿರೆ, ವೆಂಕಟೇಶ್ ಪ್ರಭು, ಜಗದೀಶ್ಚಂದ್ರ ಡಿ. ಅವರನ್ನು ಪ್ರವೀಣ್ ಕುಮಾರ್ ಇಂದ್ರ ಅವರು ಸಮ್ಮಾನಿಸಿದರು.
ನಾರಾವಿ ಜಿ.ಪಂ. ಕ್ಷೇತ್ರದ ಸದಸ್ಯರಾದ ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಕ್ಷೇತ್ರದ ಸದಸ್ಯ ಶೇಖರ್ ಕುಕ್ಕೇಡಿ, ಬೆಳ್ತಂಗಡಿ ಎ.ಪಿ.ಎಂ.ಸಿ.ಯ ಅಧ್ಯಕ್ಷ ಸತೀಶ್ ಕಾಶಿಪಟ್ನ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಗೀತಾ ಪ್ರಕಾಶ್, ಅರವಿಂದ ಶೆಣೈ, ಕುಕ್ಕೇಡಿ, ವೇಣೂರು, ಕಾಶಿಪಟ್ನ ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಸದಸ್ಯರು, ಇತರ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು. ವೆಂಕಟೇಶ್ ಸ್ವಾಗತಿಸಿ, ಜಗದೀಶ್ಚಂದ್ರ ಡಿ. ಧ್ವಜವಂದನೆಗೈದು, ನವೀನ್ ಪಚ್ಚೇರಿ ನೀತಿ ಸಂಹಿತೆ ನೀಡಿ, ನಿತೇಶ್ ಎಚ್. ವರದಿ ವಾಚಿಸಿದರು. ಕೆ. ಭಾಸ್ಕರ ಪೈ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸುಧೀರ್ ಕುಮಾರ್ ವಂದಿಸಿದರು.