Advertisement
ವೇಣೂರಿನಲ್ಲಿ ಶನಿವಾರ ನಡೆದ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಶ್ರಾವಕರ ಸಮಾ ಲೋಚನ ಸಭೆಯನ್ನು ಉದ್ಘಾಟಿಸಿದ ಬಳಿಕ ಮಹಾಮಸ್ತಕಾಭಿಷೇಕದ ದಿನಾಂಕ ಪ್ರಕಟಿಸಿ ಅವರು ಮಾತನಾಡಿದರು.
ಹಿಂದೆ ಭೂ ಮಸೂದೆ ಕಾಯ್ದೆ ಬಂದಾಗ ಜೈನ ಸಮುದಾಯ ಆರ್ಥಿಕವಾಗಿ ಸಮರ್ಥವಾಗಿರಲಿಲ್ಲ. ಇಂದು ಸಮುದಾಯ ಆರ್ಥಿಕವಾಗಿ ಸಶಕ್ತವಾಗಿದೆ. 9 ದಿನಗಳ ಕಾಲದ ಮಹಾಮಜ್ಜನದಲ್ಲಿ ಯುವ ಸಮು ದಾಯ ಭಾಗವಹಿಸಿ ತನು, ಮನ, ಧನದಿಂದ ಸಹಕರಿಸುವ ಮೂಲಕ ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಲ ಕಾರ್ಯವಾಗಬೇಕು ಎಂದು ಹೆಗ್ಗಡೆ ಸಂದೇಶ ನೀಡಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, “ಅಹಿಂಸಾ ಪರಮೋ ಧರ್ಮ’ ಎಂದು ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಸಮಾಜ ಜೈನರದ್ದು. ಜೈನರು ಕೃಷಿ ಯಿಂದ ವ್ಯಾಪಾರದತ್ತ ಒಲವು ತೋರಿದ್ದರಿಂದ ಯುವಪೀಳಿಗೆಯಲ್ಲಿ ಮಹಾಮಸ್ತಕಾಭಿಷೇಕ ಮಾಡು ವವರ ಸಂಖ್ಯೆ ಹೆಚ್ಚಾಗಿದೆ. ಮಹಾ ಮಸ್ತಕಾಭಿಷೇಕದ ಮೂಲಕ ಜೈನ ಸಮು ದಾಯದ ಸಂಪ್ರದಾಯ ಪ್ರಪಂಚಕ್ಕೆ ತಿಳಿಸುವ ಕಾರ್ಯವಾಗ ಬೇಕು ಎಂದು ಹೇಳಿದರು.
ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಉಪಾ ಧ್ಯಕ್ಷ, ಅಳದಂಗಡಿ ಅರಮನೆ ತಿಮ್ಮಣ್ಣರಸ ರಾದ ಡಾ| ಪದ್ಮಪ್ರಸಾದ್ ಅಜಿಲರು ಪ್ರಸ್ತಾವನೆಗೈದರು. ನ್ಯಾಯ ವಾದಿ, ಕಾರ್ಕಳ ಜೈನ ಧರ್ಮ ಜೋರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್ ಸಲಹೆ ನೀಡಿದರು.
Related Articles
Advertisement
ಅಧ್ಯಕ್ಷರಾಗಿ ಡಾ| ಹೆಗ್ಗಡೆವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿ ಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕಾರ್ಯಾಧ್ಯಕ್ಷರಾಗಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿಯಾಗಿ ಪಿ. ಜಯರಾಜ್ ಕಂಬ್ಳಿ ಅವರನ್ನು ಆರಿಸಲಾಯಿತು ಹಾಗೂ 27 ಉಪ ಸಮಿತಿಗಳನ್ನು ರಚಿಸಲಾಯಿತು. ಜೈನ ಪರಂಪರೆ ಜಗತ್ತಿಗೆ ಪಸರಿಸುವ ಕಾರ್ಯ
12 ವರ್ಷಗಳಿಗೊಮ್ಮೆ ನೆರವೇರುವ ಈ ಮಹಾಮಸ್ತಕಾಭಿಷೇಕದಲ್ಲಿ ಶ್ರಾವಕರು, ಶ್ರಾವಕಿಯರು ಪಾಲ್ಗೊಳ್ಳುವುದರಿಂದ ಮುಂದಿನ 12 ವರ್ಷಗಳ ಕಾಲ ಸಮಾಜಕ್ಕೆ ದಾನಧರ್ಮ ಮಾಡಲು ಪ್ರೇರಣೆಯಾಗಲಿದೆ. ನೇರ ಪ್ರಸಾರಕ್ಕೆದ ಜತೆಗೆ ಆಧುನಿಕ ಸೌಲಭ್ಯವಾದ ಲೇಸರ್ ಶೋ ಪ್ರದರ್ಶನದೊಂದಿಗೆ ಜೈನ ಸಮುದಾಯದ ಪರಂಪರೆ ಜಗತ್ತಿಗೆ ಪಸರಿಸುವ ಮಹಾಮಸ್ತಕಾಭಿಷೇಕ ವೇಣೂರಿನಲ್ಲಾಗಲಿದೆ ಎಂದು ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.