Advertisement
ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನದ ಅನಂತಶ್ರೀ ವಿಭೂ ಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ತಮ್ಮ ಆಶೀರ್ವಚನ ದಲ್ಲಿ, ದೇಗುಲದ ಅಭಿವೃದ್ಧಿ ಸಮಾ ಜದ ಹೆಮ್ಮೆಯಾಗಿದೆ. ಮನೋಮಂದಿರ ದಲ್ಲಿ ಶ್ರದ್ಧೆಯಿಂದ ಭಗವಂತನನ್ನು ಪ್ರತಿಷ್ಠಾಪಿಸಿ ಮನಸ್ಸಿನ ಕಲ್ಮಶ ದೂರ ಮಾಡಿ ಶುದ್ಧ ನಡೆನುಡಿಯ ಮೂಲಕ ಸ್ವರ್ಗವನ್ನು ಕಾಣೋಣ ಎಂದರು.ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ಸಮಾಜಕ್ಕೆ ಕೊಡುಗೆಯ ಮೂಲಕ ಚೈತನ್ಯ ತುಂಬು
ವವರಿಗೆ ಸಮಾಜವು ಮತ್ತಷ್ಟು ಶಕ್ತಿಯನ್ನು ತುಂಬಬೇಕು. ಗುರುಗಳ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆಯೂ ಕೈಗೂಡಲಿ ಎಂಬ ಅನುಗ್ರಹ ಸಂದೇಶ ನೀಡಿದರು.
ಗೋವಾ, ಮಂಗಳೂರು ಶ್ರೀ ಕಾಳಿ ಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಹರೀಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ವಿಶ್ವನಾಥ ಪುರೋಹಿತ್ ಉದ್ಯಾವರ, 3ನೇ ಮೊಕ್ತೇಸರ ದಾಮೋದರ ಎಲ್. ಆಚಾರ್ಯ ಉಪಸ್ಥಿತರಿದ್ದರು.
Related Articles
ಸಮಸ್ತರ ಏಕಮತದ ಸೇವೆ, ಶ್ರದ್ಧಾ ಭಕ್ತಿಯ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಪರಮ ಸತ#ಲವು ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಆಡಳಿತ ಧರ್ಮದರ್ಶಿ ನವೀನ ಆಚಾರ್ಯ ಪಡುಬಿದ್ರಿ ಹೇಳಿದ್ದಾರೆ. 2ನೇ ಮೊಕ್ತೇಸರ ಬಾಲಕೃಷ್ಣ ಎಸ್. ಆಚಾರ್ಯ ಬೆಳಪು ಸ್ವಾಗತಿಸಿದರು. ಶಿಲ್ಪಿ ಬಿಳಿಯಾರು ಗಣಪತಿ ಆಚಾರ್ಯ ಪ್ರಸ್ತಾವನೆಗೈದರು. ರಾಜೇಶ್ ಆಚಾರ್ಯ ಬಿಳಿಯಾರು ವಂದಿಸಿದರು. ಬಿಜಿ ರಮೇಶ್ ಆಚಾರ್ಯ, ಚೀಂಪಿ ದಿನೇಶ್ ಆಚಾರ್ಯ ನಿರೂಪಿಸಿದರು.
Advertisement