Advertisement

ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್‌ ಕೊಡುಗೆ

09:24 PM Jun 14, 2021 | Team Udayavani |

ಕೆ.ಆರ್‌.ಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಾಲೂಕುಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಸುಮಾರು 5ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ವೆಂಟಿಲೇಟರ್‌ಯಂತ್ರವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್‌ ಅವರಿಗೆ ಹಸ್ತಾಂತರಿಸಿದರು.

Advertisement

ಜಿಲ್ಲೆ, ರಾಜ್ಯಕ್ಕೆ ನೆರವು: ಸಚಿವ ನಾರಾಯಣಗೌಡಮಾತನಾಡಿ, ಕೋವಿಡ್‌ 2ನೇ ಅಲೆಯ ಸಂಕಷ್ಟದಸಮಯದಲ್ಲಿ ದಾನಿಗಳು ಕೋವಿಡ್‌ ತಡೆಗಟ್ಟಲುರಾಜ್ಯ ಸರ್ಕಾರದ ಜೊತೆ ಕೈಜೋಡಿಸಿ ಕೆಲಸಮಾಡುವ ಜೊತೆಗೆ ಉದಾರವಾಗಿ ದಾನಮಾಡುತ್ತಾ ತಮ್ಮ ಹೃದಯವೈಶಾಲ್ಯತೆ ಪ್ರದರ್ಶಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ನಮ್ಮ ತಾಲೂಕಿಗೆ 5ಲಕ್ಷ ರೂ. ಮೌಲ್ಯದ ವೆಂಟಿಲೇಟರ್‌ ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ ಇದಕ್ಕೂ ಮುನ್ನಮಂಡ್ಯ ಜಿಲ್ಲಾಸ್ಪತ್ರೆಗೆ 5 ಟನ್‌ ಆಕ್ಸಿಜನ್‌ ಸೇರಿದಂತೆಹಲವು ಕೊಡುಗೆಗಳನ್ನು ನೀಡುವ ಮೂಲಕ ಜಿಲ್ಲೆಗೆಹಾಗೂ ರಾಜ್ಯಕ್ಕೆ ನೆರವಾಗಿದ್ದಾರೆ ಎಂದರು.

ಮಹಿಳೆಯರ ಸಬಲೀಕರಣ: ಶ್ರೀರಂಗಪಟ್ಟಣಕೋವಿಡ್‌ ಹೆಲ್ತ್‌ಕೇರ್‌ ಸೆಂಟರ್‌ ತೆರೆಯುವಮೂಲಕ ಅನುಕೂಲ ಮಾಡಿಕೊಟ್ಟಿದ್ದಾರೆ.  ರಾಜ್ಯದಜನತೆಯ ಸೇವೆಗೆ ಅಪಾರವಾಗಿ ಶ್ರಮಿಸುತ್ತಿರುವಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ರಾಜ್ಯದಲ್ಲಿ ಆರಂಭವಾದ ಮೇಲೆ ಮಹಿಳೆಯರ ಸಬಲೀಕರಣವಾಗಿದೆ. ಹಾಲು ಉತ್ಪಾದಕರ ಸಹಕಾರಸಂಘಗಳು ಅಭಿವೃದ್ಧಿಯಾಗಿವೆ.ಕೆರೆಗಳು ಅಭಿವೃದ್ಧಿ ಕಂಡಿವೆ, ಕುಡುಕರನ್ನುಕುಡಿತದ ಚಟ ಬಿಡಿಸಿ ಲಕ್ಷಾಂತರ ಕುಟುಂಬಗಳುನೆಮ್ಮದಿ ಬದುಕು ಸಾಗಿಸಲು ಅವಕಾಶವಾಗಿದೆ.ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ನೀಡಲಾಗುತ್ತಿದೆ.

ಬ್ಯಾಂಕ್‌ಗಳು ಎಂದಿಗೂ ಸಾಲ ನೀಡದಬಡ ಕುಟುಂಬಗಳಿಗೆ ಧರ್ಮಸ್ಥಳ ಸಂಸ್ಥೆಯುಯಾವುದೇ ಜಾಮೀನು ಇಲ್ಲದೆ ಲಕ್ಷಾಂತರ ರೂಸಾಲ ನೀಡುವ ಮೂಲಕ ಬಡ ಕುಟುಂಬಗಳಿಗೆಆಸರೆಯಾಗಿದೆ ಎಂದು ಸಚಿವರು ಮೆಚ್ಚುಗೆವ್ಯಕ್ತಪಡಿಸಿದರು. ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌,ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್‌,ಪಾಂಡವಪುರ ಎ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ಶಿವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್‌, ಸಾರ್ವಜನಿಕ ಆಸ್ಪತ್ರೆಯಆಡಳಿತ ವೈದ್ಯಾಧಿಕಾರಿ ಡಾ.ಎಂ.ಎಸ್‌.ಜಯಂತ್‌,ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರ ರೈ,ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್‌, ತಾಲೂಕುಯೋಜನಾಧಿಕಾರಿ ಮಮತಾಶೆಟ್ಟಿಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next